Header Ads
Header Ads
Header Ads
Breaking News

ಭಟ್ಕಳದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಆರೋಪ:ಪೊಲೀಸರಿಂದ ಬೆಳ್ನಿಯ ಮನೆಗೆ ದಾಳಿ, ಪರಿಶೀಲನೆ

ಭಟ್ಕಳ ಬಕ್ರೀದ್ ಹಬ್ಬದ ಕೊನೆಯ ದಿನದಂದು ಭಟ್ಕಳದಲ್ಲಿ ಅನಧಿಕೃತವಾಗಿ ಜಾನುವಾರು ತಂದು ವಧೆ ಮಾಡಲಾಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಭಟ್ಕಳದ ಪೊಲೀಸರು ಬಂದರಿನ ಬೆಳ್ನಿಯ ಮನೆಯೊಂದರಲ್ಲಿ ಮಂಗಳವಾರ ದಾಳಿ ನಡೆಸಿದ ಘಟನೆ ನಡೆದಿದೆ.

ಬಕ್ರೀದ್ ಹಬ್ಬದ ದಿನದಂದು ಭಟ್ಕಳದ ವಿವಿಧ ಹಿಂದೂ ಪರ ಸಂಘಟನೆಗಳೆಲ್ಲ ಸೇರಿ ಭಟ್ಕಳದಲ್ಲಿ ನಡೆಯುವ ಜಾನುವಾರು ಹತ್ಯೆ ವಿರುದ್ಧ ರಸ್ತೆ ತಡೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು. ಬೆಳ್ನಿಯ ಮನೆಯೊಂದರಲ್ಲಿ ಅನಧೀಕೃತವಾಗಿ ಜಾನುವಾರು ತಂದು ವಧೆ ಮಾಡಲಾಗುತ್ತಿರುವ ಬಗ್ಗೆ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಘಟನೆ ನಡೆದಿದೆ. ಬೆಳ್ನಿಯ ನಿವಾಸಿ ಮಹ್ಮದ್ ಇಸೂಫ ಇಸ್ಮಾಯಿಲ್ ಬೆಳ್ಳಿ ಎನ್ನುವವರ ಮನೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ವರದಿ: ರಾಘವೇಂದ್ರ ಭಟ್ಕಳ

Related posts

Leave a Reply