Header Ads
Header Ads
Header Ads
Breaking News

ಅಬುಧಾಬಿ ಕರ್ನಾಟಕ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಇಂಡಿಯನ್ ಕಲ್ಚರಲ್ ಸೋಶ್ಯಲ್ ಆಂಡ್ ಕಲ್ಚರಲ್ ಸೆಂಟರ್‌ನಲ್ಲಿ ಕಾರ್ಯಕ್ರಮ ನವೆಂಬರ್ 3 ರಂದು ನಡೆಯಲಿರುವ ಕಾರ್ಯಕ್ರಮ

ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ನವೆಂಬರ್ 3 ಶುಕ್ರವಾರದಂದು ಅಬುಧಾಬಿ ಇಂಡಿಯನ್ ಸೋಶ್ಯಲ್ ಆಂಡ್ ಕಲ್ಚರಲ್ ಸಂಟರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಿದ್ದಾರೆ. ಕಾರ್ಯಕ್ರಮವು ಬೆಳಿಗ್ಗೆ 10.30ಕ್ಕೆ ಸರಿಯಾಗಿ ಪ್ರಾರಂಭವಾಗಲ್ಲಿದ್ದು ಯು‌ಎಯಿ ಯಲ್ಲಿನ ಕನ್ನಡಿಗರ ಮಹಾ ಪೋಷಕರಾದ ಡಾ! ಬಿ ಆರ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಡಾ! ಚಂದ್ರಕುಮಾರಿ ಶೆಟ್ಟಿ ಅವರು ಗೌರವ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಶಾಯರಿ ಸಾಮ್ರಾಟ್ ಎಂದೆ ಪ್ರಖ್ಯಾತಿ ಪಡೆದಿರುವ ಅಸಾದುಲ್ಲಾ ಬೇಗ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲ್ಲಿದ್ದಾರೆ.ಈ ವರ್ಷದ ದಾ ರಾ ಬೇಂದ್ರೆ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಶೇಖರ್ ಡಿ ಶೆಟ್ಟಿಗಾರ್ ಅವರಿಗೆ ನೀಡಲಾಗುವುದು. 2012 ರ ಕರ್ನಾಟಕ ಪ್ರಶಸ್ತಿ ವಿಜೇತ ಸ್ಯಾಂಡಲ್‌ವುಡ್ ನ ಯುವ ನಟ ಸಾಹಿಲ್ ರೈ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.


ಕರ್ನಾಟಕದ ಸಂಘ ಅಬುಧಾಬಿಯ ಸದಸ್ಯರಿಂದ ನೃತ್ಯ ಸಂಗೀತ ಹಾಗು ಇತರ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ ಗೌರವಿಸಲಾಗುವುದು. ಆದರ್ಶ ದಂಪತಿ ಸ್ಪರ್ಧೆ ಯು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಲಿರುವುದು.


ಯು ಎ ಯಿ ಯಲ್ಲಿರುವ ಕನ್ನಡಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ್ ಶೆಟ್ಟಿಯವರು ಕೋರಿದ್ದಾರೆ.

ಪ್ರಶಾಂತ್ ನಾಯರ್
ರಮೇಶ್ ಸುವರ್ಣ

Related posts

Leave a Reply