Header Ads
Header Ads
Header Ads
Breaking News

ಕತಾರ್‌ನಲ್ಲಿ ಗೋಲ್ಡನ್ ಅಚೀವ್‌ಮೆಂಟ್ ಅವಾರ್ಡ್ಸ್ 2017

ಕತಾರ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಅತ್ಯುತ್ತಮ ಸಾಧಕರನ್ನು ಗುರುತಿಸಿ ಕೊಡಲ್ಪಡುವ ’ಗೋಲ್ಡನ್ ಅಚೀವ್ಮೆಂಟ್ ಅವಾರ್ಡ್ಸ್’ ಇದರ 2017 ರ ಮೊದಲ ಆವೃತ್ತಿಯ ಪ್ರಶಸ್ತಿ ವಿತರಿಸಲಾಯಿತು. ಜಾಗತಿಕ ಮಾಧ್ಯಮ ದುಬೈ, ಗಾಂಧಾರ ಕಲೆ ಹಾಗು ಜಾಹೀರಾತು ಕತಾರ್, ಮತ್ತು ಕೇರಳ ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ಪ್ರಶಸ್ತಿ ಸಮಾರಂಭವು ಹೋಟೆಲ್ ಶೆರಾಟನ್ ದೊಹಾ ದಲ್ಲಿ ಸೆಪ್ಟೆಂಬರ್ 28 ರಂದು ನಡೆಯಿತು.

ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಕತಾರ್ ನಲ್ಲಿ ವಾಸಿಸುವ ಭಾರತೀಯ ಮೂಲದ ಅತ್ಯುತ್ತಮ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಯಿತು. ಎಟಿ‌ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಮೂಲದವರಾದ ಮೂಡಂಬೈಲ್ ರವಿ ಶೆಟ್ಟಿ ಯವರು ’ವ್ಯವಹಾರ ಹಾಗು ಸಾಮಾಜಿಕ ಜವಾಬ್ದಾರಿ’ ವಿಭಾಗದ ಪ್ರಶಸ್ತಿಗೆ ಬಾಜನರಾದರು.

ಸಂಸದರಾದ ಎಂ.ಐ.ಶಾನವಾಜ್, ಮಲಯಾಳಂ ಚಲನಚಿತ್ರ ನಟ ಪದ್ಮಶ್ರೀ ಮಧು. ಗೌರವಾನ್ವಿತ ಡಿ.ಜಿ.ಪಿ ಮತ್ತು ಕೇರಳದ ಪ್ರಥಮ ಮಹಿಳಾ ಐಪಿ‌ಎಸ್ ಅಧಿಕಾರಿ ಆರ್ ಶ್ರೀ ಲೇಖಾ, ಮಾಜಿ ಮಂತ್ರಿಗಳಾದ ಕೆ.ಸಿ.ಜೋಸೆಫ್, ಎಂ ಎ ಬೇಬಿ ಮತ್ತು ಫಿಲ್ಮ್ ತಯಾರಕ ಶ್ಯಾಮಪ್ರಸಾದ್ ಪ್ರಶಸ್ತಿಗಳನ್ನು ವಿತರಿಸಿದರು.

ರವಿ ಶೆಟ್ಟಿ ಅವರು ಈಗಾಗಲೇ ಮೂರು ಬಾರಿ ತುಳುಕೂಟ ಕತಾರ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರಲ್ಲದೆ ಬಂಟ್ಸ್ ಕತಾರ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರು ಪುತ್ತೂರಿನ ಬಳಿ ಮುಂಡೂರ್ ನಲ್ಲಿರುವ ಸುಬ್ರಾಯ ದೇವಸ್ಥಾನದ ಅಧ್ಯಕ್ಷರಾಗಿ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ರವಿ ಶೆಟ್ಟಿ ಯವರ ಸಾಮಾಜಿಕ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಸಾಮಾಜಿಕ ಕಾರ್ಯಕ್ಕಾಗಿ ’ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’, ಕರ್ನಾಟಕ ಸಂಘ ಕತಾರ್ ಕೊಡಲ್ಪಟ್ಟ ’ಅಭ್ಯಂತರಶ್ರೀ ಪ್ರಶಸ್ತಿ’ ಅಲ್ಲದೆ ಹಲವಾರು ಮನ್ನಣೆಗಳನ್ನು ಪಡೆದಿದ್ದಾರೆ.

ಇವರ ತುಳುಕೂಟ ದ ಅಧ್ಯಕ್ಷ ಸಮಯದಲ್ಲಿ ಐಸಿಸಿ ಮತ್ತು ಕತಾರ್ ನ ’ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್’ ಜಂಟಿಯಾಗಿ ಏರ್ಪಡಿಸಿದ ಪರಿಸರ ಜಾಗೃತಿ ಅಭಿಯಾನದಲ್ಲಿ ತುಳುಕೂಟ ಮೊದಲ ಪ್ರಶಸ್ತಿ “ರಾಯಭಾರಿ ರೋಲಿಂಗ್ ಟ್ರೋಫಿ’ಯನ್ನು ಪಡೆಯಲು ಇವರ ಪಾತ್ರ ಪ್ರಮುಖ ವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಮೂಲದ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗು ಸದಸ್ಯರು ಅಭಿನಂದನೆ ಸಲ್ಲಿಸಿದರು.

ನಿತೇಶ್ ದೊಡ್ಡಣಗುಡ್ಡೆ
ದೋಹಾ, ಕತಾರ್

Related posts

Leave a Reply