Breaking News

ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಮಹಾ ಗಣಪತಿ ದೇವಸ್ಥಾನ : ಅಷ್ಟಬಂಧ ಬ್ರಹ್ಮಕಲಶೋತ್ಸವ

ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಪಡೆದ ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಮಹಾ ಗಣಪತಿ ದೇವಸ್ಥಾನದಲ್ಲಿ ಜನವರಿ 13 ರಿಂದ ಇಂದಿನವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು, ಜನ್ವರಿ 13 ರಂದು ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತದಿಂದ ಪ್ರಾರಂಭವಾದ ಕಾರ್ಯಕ್ರಮ, ಜ.18 ಶ್ರೀ ಲಕ್ಷ್ಮೀಜನಾರ್ಧನ ದೇವರಿಗೆ 1001 ಕಲಾಶಾಧಿವಾಸ ಮತ್ತು ಅಧಿವಾಸ ಹೋಮಗಳು ನಡೆದು, ಜ. 19 ರ ಬೆಳಿಗ್ಗೆ 8.33 ಕ್ಕೆ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಲಕ್ಷ್ಮೀಜನಾರ್ಧನ ದೇವರಿಗೆ 1000 ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ನಡೆಯಿತು ಈ ಸಂದರ್ಭ ಸಾವಿರಾರು ಭಕ್ತರು ನೆರೆದಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾದರು. ಶ್ರೀ ಕ್ಷೇತ್ರದಲ್ಲಿ ವರ್ಷಾಂಪ್ರತಿ ವಿವಿಧ ದಾರ್ಮುಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೇಯುತ್ತಿದ್ದು, ಅಂಗಾರಿಕ ಸಂಕಷ್ಟಿ ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ, ಈ ಸಂದರ್ಭ ಸ್ಥಳೀಯ ಮಾತ್ರವಲ್ಲದೆ ಸುತ್ತಮುತಲ ಗ್ರಾಮದ ಭಕ್ತರು ಆಗಮಿಸುತ್ತಾರೆ.ಏಳಿಂಜೆಯಲ್ಲಿ ಶ್ರೀಲಕ್ಷ್ಮೀಜನಾರ್ದನನೆಂಬ ವಿಶೇಷ ನಾಮದಿಂದ ದೇವರು ನೆಲೆನಿಂತಿದ್ದಾರೆ. ಇಲ್ಲಿ ಶ್ರೀಲಕ್ಷ್ಮೀ ಜನಾರ್ದನ ದೇವರ ವಿಗ್ರಹ ಮಾತ್ರ ಇದ್ದು ಪ್ರತಿಷ್ಟಾ ಕಾಲದಲ್ಲಿ ಶ್ರೀಲಕ್ಷ್ಮೀದೇವಿಯನ್ನು ಕೂಡ ವಿಗ್ರಹದಲ್ಲಿ ಆವಾಹನೆ ಮಾಡಲಾಗಿದೆಯೆಂದು ಹೇಳಲಾಗುತಿದೆ, ದೇವರ ಮೂರ್ತಿಯು ಅಪಾರ ಚ್ಯೆತನ್ಯಮಯವಾಗಿದೆ. ನಾಲ್ಕು ಕೈಗಳಲ್ಲಿ ಚಕ್ರ,ಶಂಖ ,ಪಿಂಡ ಗದಾಯುಧಗಳನ್ನು ಹೊಂದಿರುವ ಮೂರ್ತಿಯು ಅಪಾರ ಶಿಲ್ಪಕಲೆಯ ಚಾತುರ್ಯ ಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಪಿತೃ ಸಂಬಂಧವಾಗಿ ಮಾಡುವ ಸಕಲ ಸತ್ಕರ್ಮಗಳಿಗೂ ಇಮ್ಮಡಿ ಪುಣ್ಯ ಪ್ರಾಪ್ತಿ ಯಾಗುವುದು ಮಾತ್ರವಲ್ಲದೆ ಶ್ರೀ ಲಕ್ಷ್ಮೀಜನಾರ್ದನ ದೇವರು ಕ್ಷಿಪ್ರ ಫಲಪ್ರದಾಯಕನೆಂದು ಭಕ್ತರಿಗೆ ನಂಬಿಕೆಯಿದೆ. ಇದಕ್ಕೆ ನೂರಾರು ಘಟನೆಗಳು ಸಾಕ್ಷಿಯಾಗಿ ಕೇಳಿ ಬರುತ್ತವೆ. ಶ್ರೀಲಕ್ಷ್ಮೀ ಸಮೇತನಾದ ನಾರಾಯಣ ಸುಖ ದಾಂಪತ್ಯ,ಕಲ್ಯಾಣ ಯೋಗ ಲಭ್ಯ,ಸಂಪತ್ತುಪ್ರಾಪ್ತಿ ಇಂತಹ ವಿಶೇಷ ಮಹಿಮೆಗಳಿಂದ ಕೂಡಿ ಮೆರೆಯುತ್ತಿರುವುದು ಇಲ್ಲಿನ ವಿಶೇಷ. ಶ್ರೀದೇವರ ಉಪಸ್ಥಾನ ಶಕ್ತಿಗಳಾಗಿ ನಾಗದೇವರು, ರಕ್ತೇಶ್ವರಿ, ಹಾಗೆಯೇ ವಾರಾಹಿ ದೈವಗಳೂ ಇಲ್ಲಿ ನೆಲಸಿ ಆರಾಧಿಸಲ್ಪಡುತ್ತವೆ. ಬೇರೆ ದೇವಾಲಯಗಳಲ್ಲಿರುವಂತೆ ದೇವಳದಲ್ಲೂ ಗಣಪತಿ ಉಪಸ್ಥಾನ ಮೂರ್ತಿಯಾಗಿದ್ದಾನೆ. ಮಹಾಗಣಪತಿಯ ಮಹಿಮೆಯನ್ನು ಸಾರುವ ಅನೇಕ ಘಟನೆಗಳು ಈಗಲೂ ಪ್ರಚಲಿತದಲ್ಲಿವೆ. ಅಲ್ಪ ಭಕ್ತಿಗೆ ಒಲಿದು ಬರುವ ಮಹಾಗಣಪತಿ ದೇವರೊಂದಿಗೆ ಏಳಿಂಜೆ ಶ್ರೀ ಲಕ್ಷ್ಮೀಜನಾದ೯ನ ದೇವರು ಭಕ್ತ ಮಹಾಜನರನ್ನು ರಕ್ಷಿಸುತ್ತಿದ್ದಾರೆ.

Related posts

Leave a Reply