Breaking News

ಕಾಪು: ಹೊಸ ಮಾರಿಗುಡಿ ದೇವಳ : ಮಹಾ ಚಂಡಿಕಾ ಯಾಗ ಸಂಪನ್

ಕಾಪು ಹೊಸ ಮಾರಿಗುಡಿ ದೇವಳದಲ್ಲಿ ವಿಜಯದಶಮಿಯ ಪುಣ್ಯ ದಿನದಂದ್ದು ಸಾವಿರಾರು ಭಕ್ತಾಧಿಗಳ ಸಮಕ್ಷಮ ಮಹಾ ಚಂಡಿಕಾ ಯಾಗ ಹಾಗೂ ಭೂರಿ ಭೋಜನ ಜರಗಿದ್ದು ಹೊರ ಜಿಲ್ಲೆ ರಾಜ್ಯಗಳಿಂದಲೂ ಸಹಸ್ರಾರು ಮಂದಿ ಭಕ್ತಾಧಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಾರಿಯಮ್ಮ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭ ವಿ4 ನ್ಯೂಸ್ ನೊಂದಿಗೆ ಮಾತನಾಡಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಬಹಳ ಕಾರ್ನಿಕ ಸ್ಥಳವಾದ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತೀ ವರ್ಷವೂ ಭಕ್ತಾಧಿಗಳ ಸಹಕಾರದಿಂದ ಧಾರ್ಮಿಕ ಪುಣ್ಯ ಕಾರ್ಯಗಳು ನಡೆದಿದ್ದು, ಈ ವರ್ಷವೂ ಚಂಡಿಕಯಾಗ ಬಹಳ ಅಭೂತಪೂರ್ವವಾಗಿ ಸಂಪನ್ನಗೊಂಡಿದೆ. ಇದೇ ಭಾಗದಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಮುಂಭಾಗದ ಸ್ವಾಗತ ಗೋಪುರ ತೆರವುಗೊಳ್ಳುವುದರಿಂದ ದೇವಳವನ್ನು ವಿಧಿವಿಧಾನಗಳೊಂದಿಗೆ ಹಿಂದೆ ಸರಿಸುವ ಇರಾದೆಯಿಂದ ದೇವಳದ ಹಿಂಭಾಗದ ಸ್ಥಳವನ್ನು ದೇವಳವ ನಿರ್ಮಾಣಕ್ಕಾಗಿ ಪಡೆಯಲಾಗಿದೆ. ಇಷ್ಟರಲ್ಲೇ ದೇವಳದ ಸಮಗ್ರ ಜೀರ್ಣೋದ್ದಾರಕ್ಕಾಗಿ ಕ್ರಿಯಾ ಯೋಜನೆ ಪೂರ್ಣಗೊಂಡಿದ್ದು, ಈ ದೇವಳ ಕೊಲ್ಲೂರು ದೇವಳಕ್ಕೆ ಸರಿಸಾಟಿಯಾಗಿ ನಿರ್ಮಾಣಗೊಳ್ಳ ಬೇಕೆಂಬುದೇ ನಮ್ಮೆಲ್ಲರ ಇರಾದೆಯಾಗಿದ್ದು ಆ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಈ ಮಹಾ ಕಾರ್ಯಕ್ಕೆ ಸಾರ್ವಜನಿಕ ಭಕ್ತಾಧಿಗಳ ಸಹಕಾರದೊಂದಿಗೆ ಸರ್ಕಾರದಿಂದ ದೊರಕುವ ಅನುದಾನವನ್ನು ಬಳಸಿಕೊಂಡು ಸುಮಾರು ೧೮ ಕೋಟಿ ರೂಪಾಯಿ ಅನುದಾನದಲ್ಲಿ ಈ ದೇವಳ ಜೀರ್ಣೋದ್ಧಾರಗೊಳ್ಳಲಿದೆ ಎಂದರು.
ವರದಿ-ಸುರೇಶ್ ಎರ್ಮಾಳ್

Related posts

Leave a Reply