Breaking News

ಬಂಟ್ವಾಳ: ಪಣೋಲಿಬೈಲ್‌ನಲ್ಲಿ ವಿ.ಹಿಂ.ಪ ಹರಕೆ

ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಪೌರಾಣಿಕ ಹಿನ್ನಲೆ ಇರುವ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ, ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳನ್ನು ತುಳುನಾಡಿನ ಕಾರಣೀಕ ಕ್ಷೇತ್ರವಾದ ಪಣೋಲಿ ಬೈಲು ಶ್ರೀ ಕಲ್ಲುರ್ಟಿ ದೈವ ಶಿಕ್ಷೆ ನೀಡಲಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಜೀಪ ವಲಯದ ವತಿಯಿಂದ ಕ್ಷೇತ್ರದಲ್ಲಿ ದೈವದ ಮುಂದೆ ಹರಕೆ ಮಾಡಿಕೊಳ್ಳಲಾಯಿತು.

ನಿರಂತರವಾಗಿ ಹಿಂದೂ ದೇವತೆಗಳ ನ್ನು ನಿಂದಿಸುವ ಕೆಲಸಗಳು ಅನ್ಯ ಸಮಾಜದ ವ್ಯಕ್ತಿಗಳಿಂದ ನಡೆಯುತ್ತಲೇ ಇದೆ. ಇದನ್ನು ಹಿಂದೂ ಸಮಾಜ ಖಂಡಿಸುತ್ತಲೇ ಬಂದಿದೆ, ಆದರೂ ಇಂತಹ ಸಮಾಜ ಘಾತುಕ ಶಕ್ತಿಗಳಿಗೆ ಇಲಾಖೆಯಿಂದ ಸರಿಯಾದ ಶಿಕ್ಷೆಗಾಗಿಲ್ಲ ಎನ್ನುವ ಕಾರಣಕ್ಕಾಗಿ ಅವರು ಪದೇ ಪದೇ ಇಂತಹ ಅವಹೇಳನಕಾರಿಯಾದ ಶಬ್ದಗಳಿಂದ ನಿಂದಿಸುವ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಅದಕ್ಕಾಗಿ ಹಿಂದೂ ಸಮಾಜ ಶಾಂತರೀತಿಯಲ್ಲಿ ದೈವದ ಎದುರು ಹರಕೆ ಮಾಡಿಕೊಳ್ಳುತ್ತಿದೆ. ತುಳುನಾಡಿನಲ್ಲಿ ರಾಕ್ಷಕರನ್ನು ಸಂಹಾರ ಮಾಡಿದ ಅದೆಷ್ಟೋ ಕತೆಗಳು ಇವೆ. ಹಾಗಾಗಿ ಇವರನ್ನು ಕೂಡಾ ಇಲ್ಲಿನ ದೇವರು, ದೇವತೆಗಳು ಯಾವುದೇ ರೂಪದಲ್ಲಿ ಶಿಕ್ಷೆ ನೀಡುತ್ತಾರೆ, ಅ ಮೂಲಕ ಹಿಂದೂ ಸಮಾಜದ ನಂಬಿಕೆಯನ್ನು ಉಳಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಸಂಪರ್ಕ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ ಹೇಳಿದರು. ಈ ಸಂದರ್ಭ ಪಣೋಲಿಬೈಲು ಪ್ರಧಾನ ಅರ್ಚಕ ರಮೇಶ್ ಮೂಲ್ಯ, ಭಜರಂಗದಳ ಜಿಲ್ಲಾ ಸಂಚಾಲಕ ಗುರುರಾಜ್ ಬಂಟ್ವಾಳ,, ವಿಶ್ವಹಿಂದೂ ಪರಿಷತ್ ಸಜೀಪ ವಲಯ ಅಧ್ಯಕ್ಷ ಜಯಪ್ರಕಾಶ್ ಪೆರ್ವ, ಸಂಚಾಲಕ ದಕ್ಷನ್ , ಸಹಸಂಚಾಲಕ ಲೋಹಿತ್ ಪನೋಲಿಬೈಲು, ಪ್ರಮುಖರಾದ ರಮೇಶ್ ಕುಲಾಲ್ ಪನೋಲಿಬೈಲು, ಸಂದೀಪ್ ಬೊಳ್ಳಾಯಿ , ಹರ್ಷಿತ್ ಮಿತ್ತಮಜಲು, ಬಾಸ್ಕರ ಸಜೀಪ, ರಾಜೇಶ್ ಸಜೀಪ, ದೀಪಕ್ ಸಜೀಪ, ಗಣೇಶ್ ಕಾರಾಜೆ, ಆಶೋಕ್ , ಯಾದವ್ ಕುಡುಮುನ್ನೂರು, ಅಶ್ವಿನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸಂದೀಪ್ ಸಾಲ್ಯಾನ್, ಬಂಟ್ವಾಳ

Related posts

Leave a Reply