Breaking News

ಕಾಂಗ್ರೆಸ್ ಡೈರಿ ವಿಚಾರ : ಪ್ರತಿಯೊಂದು ಪ್ರಕರಣ ಕಾನೂನು ವ್ಯಾಪ್ತಿಗೆ ಬರುತ್ತದೆ : ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತದೆ : ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಡೀಸ್

ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಸಿದ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಪ್ರತಿಯೊಂದು ಪ್ರಕರಣ ಕಾನೂನು ವ್ಯಾಪ್ತಿಗೆ ಬರುತ್ತದೆ. ಕಾನೂನಿನ ಚೌಕಟ್ಟಿನಲ್ಲೇ ಅದನ್ನು ಬಗೆಹರಿಸಬಹುದು. ತಪ್ಪು ಮಾಡಿದ್ದು ಹೌದಾದರೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಬಹುದು. ರಾಜಕೀಯ ಜೀವನದಲ್ಲಿ ಸಮಸ್ಯೆ ಬರೋದು ಸಹಜ. ಜನರಿಗೆ ಉತ್ತರ ಕೊಡುವ ಜವಾಬ್ಧಾರಿ ಪ್ರತಿಯೊಬ್ಬ ರಾಜಕಾರಣಿಗೆ ಇರುತ್ತದೆ ಎಂದರು. ಪಕ್ಷದ ಸಂಘಟನೆಯ ವಿಚಾರವಾಗಿ ಮಾತನಾಡಿದ ಆಸ್ಕರ್ ಪ್ರದೇಶ ಸಮಿತಿಗೆ ಎಲ್ಲಾ ಹಿರಿಯರನ್ನು ಒಗ್ಗೂಡಿಸಿ ಮುಂದೆ ಹೋಗುವಂತೆ ಸೂಚನೆ ಬಂದಿದೆ. ಹೈಕಮಾಂಡ್ ನೀಡಿರುವ ಸೂಚನೆಯೇ ನಮಗೆ ಗೈಡ್ ಲೈನ್ ಎಂದರು.
ರಿಪೋರ್ಟರ್: ಸಂತೋಷ್ ಸರಳೇಬೆಟ್ಟು

Related posts

Leave a Reply