Header Ads
Breaking News

ಮಂಗಳೂರು: ಜನಾರ್ದನ ಪೂಜಾರಿಯ ಬಾಯಿಗೆ ಬೀಗ ಸಾಧ್ಯವೇ

ಕಾಂಗ್ರೆಸ್ ದೆಹಲಿ ನಾಯಕ ಗುಲಾಂ ನಭಿ ಅಝಾದ್ ಖುದ್ದಾಗಿ ಪೋನ್ ಮೂಲಕ ಮಾತನಾಡಿ ಈಗ ಸ್ವಲ್ಪ ಸುಮ್ಮನಿರಿ, ಚುನಾವಣೆ ಸಮಯ ಹತ್ತಿರ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನೀವೆ ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದರೆ ಪಕ್ಷದ ಗತಿ ಏನಾಗಬಹುದು ಎಂದು ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ಸಿ.ಕೆ. ಜಾಫರ್ ಶರೀಫ್‌ರಲ್ಲಿ ಕೇಳಿದ್ದಾರೆ. ಜಾಫರ್ ಶರೀಫರಾದರೊ ಅಪರೂಪಕ್ಕೆ ಮಾತನಾಡುವವರು, ಆದರೆ ಜನಾರ್ದನ ಪೂಜಾರಿ.
ಗುಲಾಂ ನಭಿ ಅಝಾದ್ ಕರೆ ಮಾಡಿದ್ದಾರೆ ಎಂದು ಹೇಳಿದ ಬಳಿಕವೂ ಜರ್ನಾದನ ಪೂಜಾರಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು ಎಂದು ಹೇಳಿದ್ದಾರೆ.
ದೆಹಲಿ ನಾಯಕರು ಯಾರೇ ಹೇಳಿದರೂ ಜನಾರ್ದನ ಪೂಜಾರಿ ಮಾತ್ರ ಸಿದ್ದಾರಾಮಯ್ಯರ ವಿರುದ್ಧ ಮಾತನಾಡುವುದು ನಿಲ್ಲಿಸುವುದಿಲ್ಲ ಎಂಬುದು ಇದು ಸ್ಪಷ್ಟ ಪಡಿಸಿದೆ. ಖುದ್ದು ಸಿದ್ದರಾಮಯ್ಯ ಇತ್ತೀಚೆಗೆ ಮೂಲ ಕಾಂಗ್ರೆಸಿಗರು ನನ್ನನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜನಾರ್ದನ ಪೂಜಾರಿಯಂತಹ ನಾಯಕರ ವಾಗ್ದಾಳಿ ಈ ರೀತಿಯ ಭಾವನೆ ಸಿದ್ದರಾಮಯ್ಯರಲ್ಲಿ ಮೂಡಿಸಿದೆ ಎಂದು ಹೇಳಲೂಬಹುದು. ಸಿದ್ದರಾಮಯ್ಯ ಉತ್ತಮ ಆ