Header Ads
Header Ads
Breaking News

ಬಹುಕೋಟಿ ಮೇವು ಹಗರಣ ನಾಳೆ ಲಾಲೂ ಮತ್ತು ಇತರ ದೋಷಿಗಳಿಗೆ ಶಿಕ್ಷೆ ರಾಂಚಿಯ ಸಿಬಿ‌ಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಯ ಪ್ರಮಾಣ ಪ್ರಕಟ

 

ಬಹುಕೋಟಿ ಮೇವು ಹಗರಣದಲ್ಲಿ ದೋಷಿ ಎಂದು ಪರಿಗಣಿತರಾಗಿರುವ ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಇತರ ದೋಷಿಗಳಿಗೆ ನಾಳೆ ಗುರುವಾರ ರಾಂಚಿಯ ಸಿಬಿ‌ಐ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಕಳೆದ ವರ್ಷ ಡಿ.23 ರಂದು ವಿಶೇಷ ಸಿಬಿ‌ಐ ನ್ಯಾಯಾಲಯವು ಲಾಲು ಯಾದವ್ ಮತ್ತು ಇತರ 15 ಮಂದಿ ಬಹುಕೋಟಿ ಮೇವು ಹಗರಣದ ದೋಷಿಗಳೆಂದು ತೀರ್ಮಾನಿಸಿತ್ತು.
ಸಿಬಿ‌ಐ ವಿಶೇಷ ನ್ಯಾಯಾಲಯ ಇಂದು ರಘುವಂಶ ಪ್ರಸಾದ್‌ಸಿಂಗ್, ತೇಜಸ್ವಿ ಯಾದವ್ ಮತ್ತು ಮನೋಜ್ ಝಾ ಅವರಿಗೆ ಜನವರಿ 23 ರಂದು ತನ್ನ ಎದುರು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತೆಂದು ಎ‌ಎನ್‌ಐ ವರದಿ ಮಾಡಿದೆ.

Related posts