Breaking News

ಭಟ್ಕಳದ ಬೆಳಲಖಂಡದ ರಾಜಾರೋಷವಾಗಿ ಗಾಂಜಾ ಮಾರಾಟ

ಡಿಸೆಂಬರ್‌ನಲ್ಲಿ ಭಟ್ಕಳ ತಾಲೂಕಿನ ಬೆಳಲಖಂಡ ಬಳಿ ಕೆಲವು ಮನೆಗಳಲ್ಲಿ ಮಾರಾಟ ಮಾಡುತ್ತಿದ್ದ ಗಾಂಜಾವನ್ನು ಸ್ಥಳಿಯ ಸಾರ್ವಜನಿಕರು ದಾಳಿ ಮಾಡಿ ಪೋಲೀಸ್ ವಶಕ್ಕೆ ಪಡೆದ ಘಟನೆ ನೆನಪಿರಬಹುದು. ಆದರೆ ಈಗ ಮತ್ತೆ ಈ ಹಿಂದೆ ನಡೆದಿದ್ದ ಪ್ರದೇಶದಲ್ಲಿ ಕೆಲವು ಯುವಕರು ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಸಾರ್ವಜನಿಕರು ಮತ್ತೆ ದಾಳಿ ಮಾಡಿ ಯುವಕರನ್ನು ಹಾಗೂ ಗಾಂಜಾವನ್ನು ವಶಕ್ಕೆ ಪಡೆದು ಹಿಗ್ಗಾಮುಗ್ಗ ತಳಿಸಿದ ಘಟನೆ ನಡೆದಿದೆ.


ಭಟ್ಕಳ ನಗರಿ ಸದ್ಯ ಗಾಂಜಾ ಮಾರಾಟದ ಕೇಂದ್ರವಾಗಿ ಬದಲಾಗುತ್ತಿದ್ದು, ಪದೇ ಪದೇ ಗಾಂಜಾ ಮಾರಾಟದ ಶಂಕೆ ಕೇಳಿಬರುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಈ ಹಿಂದೆ ತಾಲೂಕಿ ಬೆಳಲಖಂಡ(ಗುಳ್ಮೆ)ಯ ಮಹಿಳೆಯೋರ್ವಳ ಮನೆಯಲ್ಲಿ ಸಿಕ್ಕ ಕೆಜಿಗಟ್ಟಲೇ ಗಾಂಜಾವಾಗಿದೆ. ಈಗ ಮತ್ತೆ ಅದೇ ಪ್ರದೇಶದಲ್ಲಿ ಅದೇ ಸಾರ್ವಜನಿಕರ ಕೈಗೆ ಕೆಲವು ಯುವಕರು ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕು ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದಾರೆ. ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಯುವಕರ ಬಳಿ ಗಾಂಜಾದ ಖರೀದಿ ಬಗ್ಗೆ ಪರಿಶೀಲಿಸುತ್ತಿದ್ದ ಸಂಧರ್ಭದಲ್ಲಿ ನಗರ ಠಾಣಾ ಪೋಲೀಸರು ಮಧ್ಯ ಪ್ರವೇಶಿಸಿ ಯುವಕರನ್ನು ಸಾರ್ವಜನಿಕರಿಂದ ತಪ್ಪಿಸಿ ತಮ್ಮ ವಶಕ್ಕೆ ಪಡೆದು ನಂತರ ವಿಚಾರಿಸಿ ಠಾಣೆಗೆ ಕರೆದೊಯ್ಯಲಾಯಿತು. ಆ ಬಳಿಕ ತಾಲೂಕಾ ತಹಸೀಲ್ದಾರ್ ವಿ.ಎನ್.ಬಾಡಕರ್, ಸಿಪಿಐ ಸುರೇಶ ನಾಯಕ,  ಮಹಿಳಾ ಪೋಲೀಸ್ ಸೇರಿ ಇನ್ನುಳಿದ ಸಿಬ್ಬಂದಿಗಳು ಮನೆಯ  ಎಲ್ಲಾ ವಸ್ತುಗಳನ್ನು ಪರಿಶೀಲಿಸಲಾಯಿತು. ಪರಿಶೀಲಿಸಿದಾಗ ಯಾವುದೇ ಗಾಂಜಾ ವಸ್ತುಗಳು ಪತ್ತೆಯಾಗದೇ ಪೋಲೀಸ್‌ರು ಸ್ಥಳ ಪಂಚನಾಮೆ ಕೈಗೊಂಡು ಹಿಂದಿರುಗಿದ್ದಾರೆ.
ವರದಿ: ರಾಘವೇಂದ್ರ ಮಲ್ಯ ಭಟ್ಕಳ.

Related posts

Leave a Reply