Breaking News

ರಾತ್ರಿ ಸುರಿದ ಮಳೆಗೆ ಬೆಂಗಳೂರು ತತ್ತರ

ಕರ್ನಾಟಕದ ರಾಜಧಾನಿಯಲ್ಲಿ ಶನಿವಾರ ಸುರಿದ ಭಾರಿ ಮಳೆ ಅನಾಹುತವನ್ನೇ ಸೃಷ್ಟಿಸಿದೆ. ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿ ನಡೆದಿದೆ.ಇನ್ನೂ 2 ದಿನ ಗುಡುಗು ಮಿಂಚು , ಗಾಳಿ ಸಹಿತ  ಭಾರೀ ಮಳೆಯಾಗುವ ಕುರಿತು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನತೆಯಲ್ಲಿ ಆತಂಕ ಸೃಷ್ಠಿಯಾಗಿದೆ.

ಮಳೆಯಿಂದ ತುಂಬಿ ಹರಿಯುತ್ತಿದ್ದ ರಾಜಕಾಲುವೆಯಲ್ಲಿ 24 ವರ್ಷದ ಯುವಕ ಕೊಚ್ಚಿ ಹೋದ ಘಟನೆ ರಾಜಕುಮಾರ್‌ ರಾಜ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ರಾಜಕುಮಾರ್‌ ಜೆ.ಸಿ. ನಗರದ ರಾಜಕಾಲುವೆಯ ಪಕ್ಕದಲ್ಲೇ ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಲುವೆಯಲ್ಲಿ ಮಳೆ ನೀರು ವೇಗವಾಗಿ ಹರಿಯುತ್ತಿತ್ತು. ಆಗ ಪಕ್ಕದಲ್ಲಿ ನಿರ್ಮಿಸುತ್ತಿದ್ದ ಗೋಡೆ ಕುಸಿದು ಜೆಸಿಬಿ ಮೇಲೆ ಬಿದ್ದಿದೆ.

ಭಾರಿ ಮಳೆಯ ಪರಿಣಾಮ ನಗರದಲ್ಲಿ ಬಹುತೇಕ ಕಡೆ ವಿದ್ಯುತ್‌ ಕಡಿತಗೊಂಡು ಕತ್ತಲು ಆವರಿಸಿದೆ. ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಟ್ರಾನ್ಸ್‌ ಫಾರ್ಮರ್‌ಗಳು ಹಾನಿಗೀಡಾಗಿವೆ. 220 ಕೆ.ವ್ಯಾಟ್‌ ಸಾಮರ್ಥಯದ ಸೋಮನಹಳ್ಳಿ ಮತ್ತು ಸುಬ್ರಹ್ಮಣ್ಯಪುರದಲ್ಲಿರು ಟ್ರಾನ್ಸ್‌ಫಾರ್ಮರ್‌ ಗಳು ಹಾನಿಗೀಡಾಗಿವೆ. ಇದರಿಂದ 66/ 11 ಕೆ.ವ್ಯಾಟ್‌ ಸಾಮರ್ಥಯದ ಎನ್‌ಜಿಎಫ್ ಮತ್ತು ಸಾರಕ್ಕಿ ವಿದ್ಯುತ್‌ ಕೇಂದ್ರಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಪರಿಣಾಮ ಹಲಸೂರು, ಹೆಬ್ಟಾಳ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಬಾಣಸವಾಡಿ, ಜಯನಗರ 4ನೇ, 8ನೇ ಹಂತ ಸುತ್ತಮುತ್ತಲ ಪ್ರದೇಶಗಳಲ್ಲಿ ಕತ್ತಲು ಆವರಿಸಿದೆ.

 

ಶನಿವಾರ ರಾತ್ರಿ 7ರ ನಂತರ ಆರಂಭವಾದ ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆ ಹೊಡೆತಕ್ಕೆ ಹತ್ತಕ್ಕೂ ಹೆಚ್ಚು ಕಡೆ ಮರಗಳು ನೆಲಕಚ್ಚಿದವು. ವಿಜಯನಗರದ ಚಂದ್ರಲೇಔಟ್‌ ಮತ್ತು ಮಠದಹಳ್ಳಿ-ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವಿದ್ಯುತ್‌ ಕಂಬ ಬಿದ್ದಿದ್ದು, ಈ ಮಾರ್ಗಗಳಲ್ಲಿ ಸಂಚಾರದಟ್ಟಣೆ ಉಂಟಾಯಿತು. ಪರಿಣಾಮ ಗಂಟೆಗಟ್ಟಲೆ ವಾಹನಸವಾರರು ಪರದಾಡಿದರು.

 

ಬಿಎಂಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಬರದಿ ದ್ದರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾದುನಿಂತರು. ಕೆಲವೆಡೆ ನಾಗಕರಿಕರು ಅನಿವಾರ್ಯವಾಗಿ ಆಟೋ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಮೊರೆಹೋದರು. ಮತ್ತೂಂದೆಡೆ ಮೆಜೆಸ್ಟಿಕ್‌ಗೆ ಬರುವ  ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಮಳೆಯಿಂದ ತಡವಾಗಿ ಆಗಮಿಸಿದವು. ದೂರದ ಊರುಗಳಿಗೆ ತೆರಳುವವರಿಗೆ ಇದರಿಂದ ಸಮಸ್ಯೆಯಾಯಿತು.

 

 

Related posts

Leave a Reply