Header Ads
Breaking News

ವಿಜಾಪುರ : ವಿಜೃಂಭಣೆಯಿಂದ ನಡೆದ ಹಜರತ್ ಸೈಯದ್ ಶಹಜಾದೆ ಮಸ್ತಾನಶಾ ಖಾದ್ರಿ ಉರೂಸು

ವಿಜಯಪುರ , ಮಾ.6 :ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಜರತ್ ಸೈಯದ್ ಶಹಜಾದೆ ಮಸ್ತಾನಶಾ ಖಾದ್ರಿ ಅವರ ಉರುಸು ಅತಿ ವಿಜೃಂಭಣೆಯಿಂದ ನಡೆಯಿತು.

ಈ ಒಂದು ಉರುಸು ಪ್ರತಿ ವರ್ಷ ಕೂಡಗಿ ಗ್ರಾಮದ ಸರ್ವ ಧರ್ಮಗಳ ಜನರು ಜಾತಿ ಬೇದ ಇಲ್ಲದೆ ಶಾಂತಿಯುತವಾಗಿ ಆಚರಿಸುತ್ತಾರೆ,

ಮಾ.3 ರಂದು ಗಂಧ (ಸಂದಲ) ವಿವಿಧ ವಾದ್ಯಗಳೊಂದಿಗೆ ಚಿತ್ರ ವಿಚಿತ್ರ ಮದ್ದು ಸುಡುವದರೊಂದಿಗೆ ಮೈರಾಜಪೀರಾ ಗೌಸಪೀರಾ ಜಹಾಗೀರದಾರ ಮನೆಯಿಂದ ಅತಿ ವಿಜೃಂಭಣೆಯಿಂದ ಹೊರಟು ದರ್ಗಾಕ್ಕೆ ತಲುಪಿ ಗಂಧದ ಕಾರ್ಯಕ್ರಮ ಜರುಗಿತು.

ಮಾ.4 ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಶಂಕರಗೌಡ ದೊಡ್ಡನಗೌಡ ಪಾಟೀಲ ಇವರ ಮನೆಯಿಂದ ದೇವರ ಕುದುರೆ ಮೆರವಣಿಗೆ ಮೈರಾಜಫೀರ ಗೌಸಪೀರಾ ಜಹಾಗೀರದಾರ ಇವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ದೇವರ ಕುದುರೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಕುದುರೆ ಮುಂದೆ ಮಲಗಿಕೊಂಡರೆ ದೇವರ ಕುದುರೆ ಇವರನ್ನು ದಾಟುವ ದೃಷ್ಯ ಒಂದು ಪವಾಡವೆ ಎನ್ನುವ ಆಗಿತ್ತು

ಈ ಜಾತ್ರೆಗೆ ರಾಜ್ಯದ ನಾನಾ ಮೂಲಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ವರದಿ : ಲಾಲಸಾಬ ಸವಾರಗೋಳ
V4 ನ್ಯೂಸ್  ಕರ್ನಾಟಕ  ವಿಜಯಪುರ

Related posts

Leave a Reply

Your email address will not be published. Required fields are marked *