

ಹೊಳೆನರಸೀಪುರ: ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಡಿ ಹಳೇಕೋಟೆ ಹೋಬಳಿ ದೊಡ್ಡಕುಂಚೆ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ಸಂದರ್ಭದಲ್ಲಿ ಗ್ರಾಮದ ಕುಂದುಕೊರತೆಗಳ ಬಗ್ಗೆ ಆಲಿಸಲಾಯಿತು.
ಸ್ಮಶಾನ ಜಾಗ ಒತ್ತುವರಿ, ಕೆರೆ ಒತ್ತುವರಿ, ಪಿಂಚಣಿ, ದುರಸ್ತಿ, ಪೌತಿ ಖಾತೆ ನಮೂನೆ 1 ರಿಂದ 5ಮುಂತಾದ ಇತರೆ ಇಲಾಖೆಗಳ ಅನೇಕ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಸುಮಾರು 54 ಅರ್ಜಿಗಳು ಸ್ವೀಕೃತವಾದವು, ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಕ್ರಮವಹಿಸಲಾಯಿತು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಸಿ ನೆಡಲಾಯಿತು. ನಂತರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಎಚ್ ಡಿ ರೇವಣ್ಣರವರು ಹೊಳೇನರಸೀಪುರ ವಿಧಾನ ಸಭಾ ಕ್ಷೇತ್ರರವರು ಭಾಗವಹಿಸಿದರು. ಪಿಂಚಣಿ ಮತ್ತು ಮಾಶಾಸನ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಇಓ ಯೋಗೇಶ್, ಡಿವೈಎಸ್ ಪಿ ಲಕ್ಷ್ಮೇಗೌಡರು, ಇಂಜಿನಿಯರ್ ಪ್ರಭು ,ಬಿಇಓ ಲೋಕೇಶ, ರಾಜೇಶ, ಕೃಷಿ ಇಲಾಖೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಕಂದಾಯ ಇಲಾಖೆ ಸಿಬ್ಬಂದಿಗಳು ಗ್ರಾಮಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.