Header Ads
Header Ads
Header Ads
Breaking News

ಅ.13ರಂದು ಪೆಟ್ರೋಲ್ ಡೀಲರ್‌ಗಳಿಂದ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 13ರಂದು ಪೆಟ್ರೋಲಿಯಂ ಡೀಲರ್‌ಗಳು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ಡೀಲರ್‌ಗಳ ಸಂಘಟನೆಯಾಗಿರುವ ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಶನಿವಾರ ಈ ಕುರಿತು ಮಾಹಿತಿ ನೀಡಿದೆ. “13ರಂದು ದೇಶಾದ್ಯಂತ ತೈಲ ಕಂಪನಿ ಡೀಲರ್‌ಗಳ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಉತ್ತಮ ಮಾರ್ಜಿನ್‌ ನೀಡಬೇಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದೇವೆ. ಇವು ಪೂರೈಸದಿದ್ದರೆ ಅಕ್ಟೋಬರ್‌ 27ರಿಂದ ಅನಿರ್ದಿಷ್ಟಾವಧಿವರೆಗೆ  ತೈಲ ಖರೀದಿ ಮತ್ತು ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ಸಂಘಟನೆ ತಿಳಿಸಿದೆ. ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಅಡಿಯಲ್ಲಿ ಒಟ್ಟು 54,000 ಡೀಲರುಗಳಿದ್ದು, ಇವರೆಲ್ಲರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

 

Related posts

Leave a Reply