Header Ads
Header Ads
Header Ads
Breaking News

ಕೇಂದ್ರ ಸಚಿವ ಸಂಪುಟ ಪುನಾರಚನೆ ಈಗಾಗಲೇ ೭ ಸಚಿವರಿಂದ ರಾಜೀನಾಮೆ ಬಂಡಾರು ದತ್ತಾತ್ರೆಯ ಔಟ್ ಶಿವಸೇನೆಗೆ ಮತ್ತೊಂದು ಸ್ಥಾನ

 
ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಉಳಿದಿರುವಾಗಲೇ ಭಾನುವಾರ ಕೇಂದ್ರ ಸಂಪುಟ ಪುನಾರಚನೆ ನಡೆಸಲು ಮೋದಿ ಅಂಡ್ ಟೀಮ್ ಸಿದ್ದತೆ ನಡೆಸಿದೆ.

ಈಗಾಗಲೇ ೭ ಸಚಿವರು ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ, ಈ ಪಟ್ಟಿಗೆ ಬಂಡಾರು ದತ್ತಾತ್ರೇಯ ಹೆಸರು ಸೇರ್ಪಡೆಯಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ತಂಡವನ್ನು ಮತ್ತಷ್ಟು ಸಮರ್ಥವಾಗಿ ಸಜ್ಜುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವಿಧಾನ ಸಭೆ ಚುನಾವಣೆ ಇರುವ ಕಾರಣ ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವನ್ನು ಸಮತೋಲನಗೊಳಿಸಲು ಅಮಿತ್ ಶಾ ಪ್ರಯತ್ನ ನಡೆಸಿದ್ದಾರೆ.ಪ್ರಧಾನಿ ಮೋದಿ ಬ್ರಿಕ್ಸ್ ಸಮಾವೇಶಕ್ಕೆ ಚೀನಾಗೆ ತೆರಳುವ ಮುನ್ನ ಭಾನುವಾರ ಬೆಳಗ್ಗೆ ಸಂಪುಟ ಪುನಾರಚನೆ ನಡೆಯಲಿದೆ, ಎಐಎಡಿಎಂಕೆ ಸಂಪುಟ ಪುನಾರಚನೆಯಲ್ಲಿ ಕಾರ್ಯಕ್ರಮದಿಂದ ದೂರ ಉಳಿಯಲಿದೆ ಎನ್ನಲಾಗಿದೆ.

Related posts

Leave a Reply