Header Ads
Header Ads
Header Ads
Header Ads
Header Ads
Header Ads
Breaking News

ಗೋದಾವರಿ ನದಿಯಲ್ಲಿ ಬೋಟ್ ಮುಳುಗಡೆ : ಏಳು ಮಂದಿಯ ಮೃತದೇಹ ಪತ್ತೆ: ಉಳಿದವರಿಗಾಗಿ ಶೋಧಕಾರ್ಯ

ಆಂಧ್ರ ಪ್ರದೇಶ: ಪ್ರವಾಸಿಗರು ಮತ್ತು  ಸಿಬ್ಬಂದಿಗಳನ್ನು ಹೊತ್ತ ದೋಣಿಯೊಂದು ನದಿಯಲ್ಲಿ ಮಗುಚಿದ ಪರಿಣಾಮ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ. ಇಲ್ಲಿಯವರೆಗೆ ಏಳು ಶವಗಳನ್ನುಹೊರಕ್ಕೆ ತೆಗೆಯಲಾಗಿದೆ.

ದೋಣಿಯು ಪ್ರಸಿದ್ದ ಪ್ರವಾಸಿ ಸ್ಥಳ ಪಾಪಿಕೊಂಡಲು ಅಥವಾ ಪಾಪಿ ಹಿಲ್ಸ್ ನತ್ತ ಸಾಗುತ್ತಿತ್ತು.ಇತ್ತೀಚಿನ ವರದಿಯಂತೆ ಹೆಚ್ಚಿನ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ್ದು  14 ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.ಇನ್ನು ಗೋದಾವರಿ ನದಿಗೆ ಭಾರಿ ಒಳಹರಿವಿರುವ ಕಾರಣ ಪಾಪಿ ಹಿಲ್ಸ್ ಪ್ರದೇಶಕ್ಕೆ ದೋಣಿ ಸೇವೆಗಳನ್ನು ಅಧಿಕಾರಿಗಳು ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಳಿದ್ದರು. ಆದರೆ ಇದೀಗ ನೀರಿನ ಒಳಹರಿವು ಕಡಿಮೆಯಾಗುತ್ತಿರುವ ಕಾರಣ ಸೇವೆಯನ್ನು ಪುನಾರಂಭಿಸಲಾಗಿತ್ತು. 

ವರದಿಗಳ ಪ್ರಕಾರ, 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳನ್ನು ಹೊಂದಿರುವ ದೋಣಿ ಗಂಡಿ ಪೋಚಮ್ಮ ದೇವಸ್ಥಾನದಿಂದ ಹೊರಟಿದ್ದು ದೇವಿಪಟ್ಟಣಂ ಮಂಡಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಚಲೂರು ಮಂಡ ಗ್ರಾಮದ ಸಮೀಪ ಪಲ್ಟಿಯಾಗಿದೆ. ಕೆಲವು ಪ್ರವಾಸಿಗರು ನೀರಿನ ಇನ್ನೊಂದು ಬದಿಯಲ್ಲಿರುವ ಟುಟುಕುಂಟಾ ಗ್ರಾಮದತ್ತ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು 14 ಜನರನ್ನು ರಕ್ಷಿಸಿದ್ದಾರೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೇಳಿದೆ.  ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ರಾಜಮಂಡ್ರಿಯಿಂದ ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮುರಳೀಧರ್ ರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಅಸ್ಮಿ ದೇವಿಪಟ್ನಂಗೆ ಧಾವಿಸಿದ್ದಾರೆ.

Related posts

Leave a Reply

Your email address will not be published. Required fields are marked *