Header Ads
Header Ads
Header Ads
Breaking News

ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಶೇ.40 ರಷ್ಟು ಏರಿಕೆ ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಮೇಶ್ ಕಟ್ರಿ ಹೇಳಿಕೆ

 
ದೇಶದ ಬಹುತೇಕ ಭಾಗಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಶೇ. 40 ರಷ್ಟು ಏರಿಕೆಯಾಗಿದ್ದು, ರೂ. 6-7.50 ಕ್ಕೆ ಏರಿದೆ ಎಂದು ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಮೇಶ್ ಕಟ್ರಿ ಹೇಳಿದ್ದಾರೆ.

ಚಿಕನ್ ರೀತಿಯಲ್ಲೇ ಮೊಟ್ಟೆಯ ಬೆಲೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಮೊಟ್ಟೆಯ ಬೆಲೆ ರೂ. 6 -7.5 ವರೆಗೆ ಮಾರಾಟವಾಗುತ್ತಿದೆ. ಕೆಲವು ಕಡೆಗಳಲ್ಲಿ ಇದಕ್ಕಿಂತ ದುಬಾರಿಯಾಗಿದೆ. ಪುಣೆ ವಲಯದ ಪೌಲ್ಟ್ರಿ ಫಾರಂಗಳಲ್ಲಿ 100 ಮೊಟ್ಟೆಗೆ ರೂ. 585 ದರ ಇದೆ. ಸಾಗಾಣಿಕೆ ವೆಚ್ಚ ಸೇರಿದಂತೆ 1 ಮೊಟ್ಟೆಗೆ ರೂ. 6.5 -7.5 ಕ್ಕೆ ಮಾರಾಟವಾಗುತ್ತಿದೆ. ಕಳೆದ 6 ತಿಂಗಳಲ್ಲಿ ಪ್ರತಿ 100 ಮೊಟ್ಟೆಯ ಬೆಲೆ ರೂ. 375 ರಿಂದ ರೂ. ೫೮೫ಕ್ಕೆ ಏರಿದೆ. ಅಲ್ಲದೆ ಚಿಕನ್ ಬೆಲೆಯಲ್ಲೂ ಕೂಡ ಏರಿಳಿತವಾಗುತ್ತಿದೆ.

ಕಳೆದ ವರ್ಷದಂತೆ ಈ ವರ್ಷ ಉತ್ತಮ ದರ ಪಡೆಯದಿರುವುದರಿಂದ ಅನೇಕ ಪೌಲ್ಟ್ರಿ ಪಾರಂಗಳು ಕೋಳಿ ಸಾಕಾಣೆ, ಉತ್ಪಾದನೆಯನ್ನು ಕಡಿಮೆ ಮಾಡಿವೆ. ಹೀಗಾಗಿ ಮೊಟ್ಟೆ ಬೆಲೆ ಗಮನಾರ್ಹವಾಗಿ ಏರಿಕೆ ಕಂಡಿದೆ ಎಂದು ರಮೇಶ್ ಕಟ್ರಿ ತಿಳಿಸಿದ್ದಾರೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ. ಬೆಲೆ ಇಳಿಕೆಯಾಗಲು ಕೆಲ ವಾರದವರೆಗೆ ಕಾಯಬೇಕಾಗಬಹುದು. ಮಾರುಕಟ್ಟೆ ಮಾಹಿತಿ ಪ್ರಕಾರ, ಮೊಟ್ಟೆಯ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.

Related posts

Leave a Reply