Header Ads
Header Ads
Header Ads
Breaking News

ಜಿಯೋ ಗ್ರಾಹಕ, ಐಫೋನ್ ಬಳಕೆದಾರರಿಗೆ ಕೊಡುಗೆ ರಿಲಯನ್ಸ್ ನಿಂದ ಮರು ಖರೀದಿಗೆ ಕೊಡುಗೆ ಘೋಷಣೆ

ರಿಲಯನ್ಸ್ ಸಂಸ್ಥೆ ತಮ್ಮ ಆಪಲ್ ಐಫೋನ್ ಬಳಕೆದಾರರಿಂದ ಅವರ ಹಳೇಯ ಐಫೋನ್ ಮರು ಖರೀದಿಗೆ ಮುಂದಾಗಿದೆ. ಒಂದು ವರ್ಷ ಬಳಸಿದ ಐ ಫೋನ್ ಗಳನ್ನು ಅದರ ನೈಜ ಬೆಲೆಯ ಶೇ. 70 ಕ್ಕೆ ರಿಲಯನ್ಸ್ ಖರೀದಿಸಲಿದೆ. ಜಿಯೋ ಡೇಟಾ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲಿಕ್ಕಾಗಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.ಜತೆಗೆ ಅಮೆರಿಕಾ ಮೂಲಕ ಆಪಲ್ ಸಂಸ್ಥೆಗೆ ಬಾರತದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಸಹ ಇದರಿಂದ ಅನುಕೂಲವಾಗಲಿದೆ.ಕ್ಯಾಪೆರಿಟೋ, ಕ್ಯಾಲಿಫೋರ್ನಿಯಾ ಮೂಲದ ಆಪಲ್ ಭಾರತದಲ್ಲಿ ಹೆಚ್ಚು ಐಫೋನ್ ಅನ್ನು ಮಾರಾಟ ಮಾಡಲು ಉತ್ಸುಕವಾಗಿದೆ, ಸಂಸ್ಥೆಯ ತಾಯ್ನಾಡಾದ ಅಮೆರಿಕಾ ಮತ್ತು ಚೀನಾದಲ್ಲಿ ಐಫೋನ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿಯೂ ಸ್ಮಾರ್ಟ್ ಪೋನ್ ಬಳಕೆದಾರರ ಮಾರುಕಟ್ಟೆ ದೊಡ್ಡದಾಗಿದ್ದರೂ ಸಹ ಐಫೋನ್ ಗಳ ದುಬಾರಿ ಬೆಲೆ ಕಾರಣದಿಂದ ಹೆಚ್ಚಿನ ಭಾರತೀಯರು ಇಫೋನ್ ಖರೀದಿಯಿಂದ್ ದೂರ ಉಳಿಸಿದ್ದಾರೆ.

ಇತ್ತೀಚಿನ ಐಫೋನ್ ಸರಣಿಯನ್ನು ಜಿಯೊ ಬಿಡುಗಡೆ ಮಾಡಿದ್ದು ಇಂದು ನಡೆದ ಕಾರ್ಯಕ್ರಾಮದಲ್ಲಿ ಅದನ್ನು ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಆವರ ಪುತ್ರ ಆಕಾಶ್ ಅಂಬಾನಿ ಇತ್ತೀಚಿನ ಐಫೋನ್ ಮಾದರಿಗಳಾದ ಐಫೋನ್ 8, 8 ಪ್ಲಸ್ ಮತ್ತು ಐಫೋನ್ ಎಕ್ಸ್ (10) ಗಳನ್ನು ನಾವು ಮರು ಖರೀದಿ ಮಾಡಲು ಸಿದ್ಧವಾಗಿದ್ದೇವೆ ಎಂದರು.
ಐಫೋನ್ ಖರೀದಿ ಮಾಡಿದ ಬಳಿಕ ಯಾವುದೇ ಗ್ರಾಹಕರು ರಿಲಯನ್ಸ್ ಜಿಯೋನ 799 ಮಾಸಿಕ ಪ್ಯಾಕ್ ನ್ನು ರೀ ಚಾರ್ಜ್ ಮಾಡಿಸಿಕೊಳ್ಳುತ್ತಾರೋ ಅಂತಹವರಿಗೆ ರಿಲಯನ್ಸ್ ನ ಈ ಮರು ಕರೀದಿ ಕೊಡುಗೆ ಲಭ್ಯವಾಗಲಿದೆ.ಭಾರತೀಯ ಟೆಲಿಕಾಂ ಸಂಸ್ಥೆಯೊಂದು ಇಂತಹ ಭಾರಿ ನಗದು ಆಫರ್ ನೀಡುತ್ತಿರುವುದು ಇದೇ ಮೊದಲಾಗಿದೆ.ರಿಲಯನ್ಸ್ ನ ಈ ಕ್ರಮ ಭಾರತದಲ್ಲಿ ಆಪಲ್ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಲಿದೆ. ಜತೆಗೆ ದುಬಾರಿ ಐಫೋನ್ ಖರೀದಿ ಮಾಡುವವರಿಗೆ ರಿಲಯನ್ಸ್ ಬಗೆಗೆ ನಂಬಿಕೆ ಹುಟ್ಟಲೂ ಇದು ಸಹಕಾರಿ ಎನಿಸಿದೆ.

Related posts

Leave a Reply