Header Ads
Header Ads
Header Ads
Breaking News

ದೆಹಲಿಯಲ್ಲಿ ಮಂಜು ಕವಿದ ವಾತಾವರಣ ತಡವಾದ 45 ರೈಲುಗಳ ಸಂಚಾರ ಕೆಲ ರೈಲುಗಳ ಸಂಚಾರ ರದ್ದು

 
ನವದೆಹಲಿಯಲ್ಲಿ ದಟ್ಟ ಮಂಜು ಕವಿದಿದ್ದುದರಿಂದ ೪೫ ರೈಲುಗಳ ಸಂಚಾರ ತಡವಾಗಿದೆ. ಕೆಲ ರೈಲುಗಳ ವೇಳೆ ಬದಲಾಗಿದ್ದು, ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ದಟ್ಟ ಮಂಜು ಕವಿಯುತ್ತದೆ. ಇದು ರೈಲುಗಳು ಮತ್ತು ವಿಮಾನ ಪ್ರಯಾಣಕ್ಕೆ ತೀವ್ರ ಅಡ್ಡಿಯಾಗುತ್ತದೆ.

ಸೋಮವಾರ ಬೆಳಿಗ್ಗೆ ದಟ್ಟ ಮಂಜಿನಿಂದಾಗಿ ೪೫ ರೈಲುಗಳ ಸಂಚಾರ ತಡವಾಗಿದೆ. ನಾಲ್ಕು ರೈಲುಗಳ ವೇಳೆ ಬದಲಾವಣೆ ಮಾಡಲಾಗಿದೆ. ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ.

ದೆಹಲಿಯಲ್ಲಿ ಮಂಜು ಕವಿದು ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಶನಿವಾರ ಕನಿಷ್ಠ 33 ರೈಲುಗಳ ಸಂಚಾರ ವಿಳಂಬವಾಗಿತ್ತು. ಐದು ರೈಲುಗಳ ವೇಳೆ ಬದಲಾವಣೆ ಮಾಡಿ, ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದು, ಗಾಳಿಯ ವೇಗವೂ ಕ್ಷೀಣಿಸುತ್ತಿದೆ. ಪದೇ ಪದೇ ಇಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಮುಂದಿನ ದಿನಗಳಲ್ಲಿ ದೆಹಲಿಯ ಮಾಲಿನ್ಯ ಮಟ್ಟ ಇನ್ನೂ ಕೆಟ್ಟ ಪರಿಸ್ಥಿತಿಯನ್ನು ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

Related posts

Leave a Reply