Header Ads
Header Ads
Header Ads
Breaking News

ದೇಶದ ಆರ್ಥಿಕ ವೃದ್ಧಿ ದರ ಕುಸಿತ ಮೊದಲ ತ್ರೈಮಾಸಿಕದಲ್ಲಿ ಶೇ. 5.7ರಷ್ಟು ಕುಸಿತ

 
ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 5.7ಕ್ಕೆ ಕುಸಿದಿದೆ.
ನೋಟು ರದ್ದತಿಯ ಬೆನ್ನಲ್ಲೆ, ಸರಕು ಮತ್ತು ಸೇವಾ ತೆರಿಗೆ (ಜಿ‌ಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಆರಂಭಿಕ ದಿನಗಳಲ್ಲಿನ ಗೊಂದಲದ ಫಲವಾಗಿ ತಯಾರಿಕಾ ಚಟುವಟಿಕೆಗಳು ಕುಂಠಿತಗೊಂಡಿರುವುದು ಜಿಡಿಪಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಿಂದಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯು ಶೇ 6.1ರಷ್ಟಿತ್ತು. ಸತತ ಎರಡನೆ ತ್ರೈಮಾಸಿಕದಲ್ಲಿ ದೇಶಿ ಜಿಡಿಪಿಯು ಚೀನಾಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ. ಮಾರ್ಚ್ ಮತ್ತು ಜೂನ್ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕ ವೃದ್ಧಿ ದರವು ಶೇ 6.9ರಷ್ಟಿತ್ತು.ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದತಿ ನಂತರ ತಯಾರಿಕಾ ಚಟುವಟಿಕೆಗಳು ಮಂದಗತಿಯಲ್ಲಿ ಇದ್ದ ಕಾರಣಕ್ಕೆ ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕಡಿತಗೊಂಡಿದೆ. ಮೂರು ವರ್ಷಗಳಲ್ಲಿನ ಅತ್ಯಂತ ಕನಿಷ್ಠ ಮಟ್ಟದ ಆರ್ಥಿಕ ವೃದ್ಧಿ ದರವೂ ಇದಾಗಿದೆ.

Related posts

Leave a Reply