Header Ads
Header Ads
Header Ads
Breaking News

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಖಂಡನೆ ಬೆಂಗಳೂರಿನಲ್ಲಿ ಬುದ್ಧಿಜೀವಿಗಳು , ಪ್ರಗತಿಪರರು ಪ್ರತಿರೋಧ ಸಮಾವೇಶ ಹತ್ಯೆ ನಡೆಸಿದವರನ್ನ ಶೀಘ್ರವೇ ಬಂಧನಕ್ಕೆ ಆಗ್ರಹ

ಆಂಕರ್ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬುದ್ಧಿಜೀವಿಗಳು , ಪ್ರಗತಿಪರರು ಪ್ರತಿರೋಧ ಸಮಾವೇಶ ಆಯೋಜಿಸಿದ್ದಾರೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೂ ಪತ್ರಕರ್ತೆ ಗೌರಿ ಹತ್ಯೆ ಖಂಡಿಸಿ ಜಾಥ ಆರಂಭವಾಗಿದೆ. ನಾಡಿನ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರ ಚಿಂತಕರು, ರಂಗಕರ್ಮಿಗಳು, ಚಿತ್ರನಟರು ಪ್ರತಿರೋಧ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶ ನಡೆಯುತ್ತಿದ್ದು, ‘ನಾನು ಗೌರಿ, ನನ್ನನ್ನೂ ಕೊಲ್ಲಿ’ ಎಂದು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆ ನಡೆಸಿದವರನ್ನ ಶೀಘ್ರವೇ ಬಂಧಿಸುವಂತೆ ಸಮಾವೇಶ ನಡೆಸಲಾಗುತ್ತಿದ್ದು, ಪ್ರತಿರೋಧ ಸಮಾವೇಶಕ್ಕೆ ಆಮ್ ಆದ್ಮಿ ಪಕ್ಷ ಕೂಡ ಸಾಥ್ ನೀಡಿದೆ. ಇತ್ತ ಸಮಾವೇಶದ ಹಿನ್ನೆಲೆಯಲ್ಲಿ ನಗರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ರಾಯಣ್ಣ ರೈಲು ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Related posts

Leave a Reply