Header Ads
Breaking News

ಬಾಂಗ್ಲಾ ತಲುಪಿದ ಫನಿ ಚಂಡಮಾರುತ

ನಿರೀಕ್ಷೆಯಂತೆಯೇ ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ಫನಿ  ಚಂಡಮಾರುತ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಫನಿ  ಅಬ್ಬರಕ್ಕೆ 14 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಒಡಿಶಾದಲ್ಲಿ ತನ್ನ ರುದ್ರ ನರ್ತನ ತೋರಿದ್ದ ಫನಿ  ಚಂಡಮಾರುತ ಬಳಿಕ ಪಶ್ಚಿಮ ಬಂಗಾಳ ಮೂಲಕವಾಗಿ ಸಾಗಿ ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಫನಿ  ಚಂಡಮಾರುತದ ಅಬ್ಬರಕ್ಕೆ 14 ಮಂದಿ ಬಲಿಯಾಗಿ, 63 ಮಂದಿ ಗಾಯಗೊಂಡಿದ್ದಾರೆ ಎಂದು ಬಾಂಗ್ಲಾದೇಶ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದಲ್ಲಿ ರುದ್ರತಾಂಡವ ನಡೆಸಿ 12 ಜನರನ್ನು ಬಲಿ ಪಡೆದಿದ್ದ ಫನಿ  ಚಂಡಮಾರುತ ಶನಿವಾರ ಬಾಂಗ್ಲಾ ದೇಶದಲ್ಲಿ ಮರಣಮೃದಂಗ ಭಾರಿಸಿದೆ. ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿರುವ ಫನಿ  ಚಂಡಮಾರುತ ಇಲ್ಲಿನ ನೊವಾಖಲಿ, ಭೋಲಾ ಮತ್ತು ಲಕ್ಷ್ಮಿಪುರ್ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿದೆ. ಈ ಜಿಲ್ಲೆಗಳಲ್ಲಿ ಅಧಿಕ ಸಾವು-ನೋವುಗಳೂ ಸಹ ವರದಿಯಾಗಿವೆ. ಮೃತರಲ್ಲಿ ಎರಡು ವರ್ಷದ ಮಗವೂ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ತೀರ ಪ್ರದೇಶದ ಸುಮಾರು 16 ಲಕ್ಷ ಜನರನ್ನು 4,000 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರೂ ಪ್ರಾಣಹಾನಿ ತಪ್ಪಿಸಲು ಸಾಧ್ಯವಾಗಿಲ್ಲ. ತೀರ ಪ್ರದೇಶದ ಹಲವು ಹಳ್ಳಿಗಳು ಭಾರಿ ಮಳೆಯಿಂದಾಗಿ ಜಲಾವೃತಗೊಂಡಿವೆ.

Related posts

Leave a Reply

Your email address will not be published. Required fields are marked *