Header Ads
Header Ads
Header Ads
Breaking News

ಭಾರತದಲ್ಲಿ ಈ ವರ್ಷ ಶೇಕಡಾ 3ರಷ್ಟು ಮಳೆ ಕಡಿಮೆ

ಭಾರತದಲ್ಲಿ ವಾರ್ಷಿಕ ಮುಂಗಾರು ಮಳೆ ಸರಾಸರಿಗಿಂತ ಕಡಿಮೆಯಾಗಿದ್ದು ಹವಾಮಾನ ಮುನ್ಸೂಚನೆ ವರದಿಗಿಂತ ಈ ವರ್ಷ ಶೇಕಡಾ 3ರಷ್ಟು ಕಡಿಮೆಯಾಗಿದೆ. ಭಾರತದ ಕೇಂದ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಮಳೆ ಸುರಿಯುತ್ತದೆ ಎಂದು ರಾಷ್ಟ್ರೀಯ ಹವಾಮಾನ ಕಚೇರಿ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ ಈ ವರ್ಷ ಶೇಕಡಾ 98ರಷ್ಟು ಮುಂಗಾರು ಮಳೆ ಬೀಳಬಹುದು ಎಂದು ಹೇಳಿತ್ತು. ಮುನ್ಸೂಚನೆ ಶೇಕಡಾ 3ರಷ್ಟು ಕಡಿಮೆ ಅಂದರೆ ಸರಾಸರಿ ಶೇಕಡಾ ೯೫ರಷ್ಟು ಮಳೆಯಾಗಿದೆ. ಭಾರತದ ವಾರ್ಷಿಕ ಮಳೆ ಶೇಕಡಾ 70 ರಷ್ಟು ಆಗುತ್ತಿದ್ದು, ಕೃಷಿ ವಲಯಕ್ಕೆ ಅತ್ಯಂತ ಅಗತ್ಯವಾಗಿದೆ. ಭಾರತದ 2 ಟ್ರಿಲಿಯನ್ ಆರ್ಥಿಕತೆಯ ಶೇಕಡಾ 15ರಷ್ಟು ಕೃಷಿ ವಲಯದಿಂದ ಬರುತ್ತಿದ್ದು ದೇಶದ 1.3 ಶತಕೋಟಿಗೂ ಅಧಿಕ ಜನರಿಗೆ ಉದ್ಯೋಗ ಒದಗಿಸುತ್ತದೆ.
ಮಧ್ಯ ಪ್ರದೇಶದಂತಹ ಭಾರತದ ಕೇಂದ್ರ ಭಾಗದ ರಾಜ್ಯಗಳಲ್ಲಿ ತೈಲ ಬೀಜ ಮತ್ತು ಧಾನ್ಯಗಳು ಬೆಳೆಯುವ ಪ್ರದೇಶಗಳಲ್ಲಿ ಮಳೆ ಬೀಳುವುದು ಸರಾಸರಿಗಿಂತ ಕಡಿಮೆಯಾಗಿರುವುದರಿಂದ ಮತ್ತು ಹರ್ಯಾಣ, ಪಂಜಾಬ್ ನಂತಹ ಉತ್ತರ ರಾಜ್ಯಗಳಲ್ಲಿ ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಸರಾಸರಿಗಿಂತ ಕಡಿಮೆಯಾಗಿದೆ.

Related posts

Leave a Reply