Header Ads
Header Ads
Breaking News

ಮಿಸೆಸ್ ಇಂಡಿಯಾ 2017: ಪ್ರಶಸ್ತಿ ಗೆದ್ದ ಉಡುಪಿಯ ತೃಪ್ತಿ ಅರವಿಂದ್

ಚೆನ್ನೈನಲ್ಲಿ ನಡೆದ ವಿವಾಹಿತೆಯರ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ತೃಪ್ತಿ ಅರವಿಂದ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೂಲತಃ ಉಡುಪಿಯ ಕಲ್ಯಾಣಪುರದವರಾದ ತೃಪ್ತಿ ಅರವಿಂದ್ ಮಿಸೆಸ್ ಇಂಡಿಯಾ 2017ರ ಪ್ರಶಸ್ತಿಯನ್ನು ಜಯಿಸಿದ್ದಾರೆ. ಮಿಸೆಸ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಚೆನೈನಲ್ಲಿ ಜರುಗಿದ ಸ್ಪರ್ಧೆಯಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ದೇಶದ 47  ಸ್ಪರ್ಧಿಗಳು ಭಾಗವಹಿಸಿದ್ದರು. ತೃಪ್ತಿ ಅವರು ಉಡುಪಿಯ ಪಿಪಿಸಿಯ ಹಳೆ ವಿದ್ಯಾರ್ಥಿನಿಯಾಗಿದ್ದು, ಈಗ ಬೆಂಗಳೂರಿನಲ್ಲಿದ್ದಾರೆ. ಸ್ನಾತಕೋತರ ಎಂಫೀಲ್ ಪಡೆದಿದ್ದಾರೆ.

Related posts

Leave a Reply