

ಬೆಂಗಳೂರು : ಶಿವ ಭಕ್ತೆಯೊಬ್ಬರು ಮಹಾದೇವನ ಆಕರ್ಷಕ ಮೇಕಪ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ.
ಅಂದ ಹಾಗೆ ಮಹಾದೇವನ ಈ ರೂಪ ಲಾವಣ್ಯದೊಂದಿಗೆ ಕಾಣಿಸಿಕೊಂಡವರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ ಡಾ.ಜ್ಯೋತಿ ಬೆಹಲ್ ಅವರು.
2018 ವುಮೆನ್ ಆಫ್ ಯೂನಿವರ್ಸ್ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿರುವ ಡಾ.ಜ್ಯೋತಿ ಬೆಹಲ್ ಅವರು ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದಾರೆ.
ಆಗಾಗ್ಗೆ ಯಾವೂದಾದರೊಂದು ಥೀಮ್ ಮೇಲೆ ಮೇಕಪ್ ಮಾಡಿಕೊಂಡು ಪೊಟೋ ಶೂಟ್ ಶೆಷನ್ ನಡೆಸುವ ಡಾ.ಜ್ಯೋತಿ ಬೆಹಲ್ ಅವರ ಈ ಬಾರಿಯ ಮಹಾದೇವನ ಅವತಾರ ಬಾರೀ ಜನಪ್ರಿಯತೆ ಯನ್ನು ಪಡೆದಿದೆ.