Header Ads
Header Ads
Breaking News

2018 ಕ್ಕೆ ಭಾರತದ ಅಭಿವೃದ್ಧಿ ದರ ಶೇ.7.3 ಕ್ಕೆ ಏರಿಕೆ ಸಾಧ್ಯತೆ ಭಾರತದ ಆರ್ಥಿಕ ಸಾಮರ್ಥ್ಯ ಕೊಂಡಾಡಿದ ಅಂತಾರಾಷ್ಟ್ರೀಯ ಬ್ಯಾಂಕ್ ಭವಿಷ್ಯದಲ್ಲಿ ಅಭಿವೃದ್ಧಿ ದರ ಏರಿಕೆಗೆ ವೇಗ

ಭಾರತ ಅತ್ಯುತ್ತಮ ಆರ್ಥಿಕತೆ ಹೊಂದಿದ್ದು, 2018 ನೇ ಸಾಲಿನಲ್ಲಿ ಭಾರತ ಶೇ.7.3 ರಷ್ಟು ಅಭಿವೃದ್ಧಿ ದರ ಸಾಧನೆ ಮಾಡಲಿದೆ. ಜಿ‌ಎಸ್‌ಟಿ ಮತ್ತು ನೋಟು ನಿಷೇಧದ ಪರಿಣಾಮ 2016 ಮತ್ತು 2017 ನೇ ವಿತ್ತೀಯ ವರ್ಷದಲ್ಲಿ ಭಾರತ ಹಿನ್ನಡೆ ಸಾಧಿಸಿದ್ದರೂ ಭಾರತದ ಆರ್ಥಿಕತೆ ಸದೃಢವಾಗಿದೆ. 2018 ನೇ ಸಾಲಿನಲ್ಲಿ ಭಾರತ ತನ್ನ ಅಭಿವೃದ್ಧಿ ದರವನ್ನು ಶೇ.7.3 ಕ್ಕೆ ಏರಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಅಮೆರಿಕದ ವಾಷಿಂಗ್ಟನ್ ನಲ್ಲಿ ಇಂದು ವಿಶ್ವಬ್ಯಾಂಕ್ ತನ್ನ ಜಾಗತಿಕ ಆರ್ಥಿಕ ನಿರೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ಭಾರತದ ಆರ್ಥಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.

ವರದಿಯಲ್ಲಿ ಜಿ‌ಎಸ್ ಟಿ ಮತ್ತು ನೋಟು ನಿಷೇಧ ಸೇರಿದಂತೆ ಇತ್ತೀಚೆಗೆ ಭಾರತ ಸರ್ಕಾರ ಕೈಗೊಂಡ ಆರ್ಥಿಕ ನೀತಿಗಳನ್ನು ವಿಶ್ವಬ್ಯಾಂಕ್ ಉಲ್ಲೇಖ ಮಾಡಿದ್ದು, 2017 ರಲ್ಲಿ ಭಾರತದ ಅಭಿವೃದ್ಧಿ ದರ 6.7 ರಷ್ಟಿದೆಯಾದರೂ, 2018 ನೇ ಸಾಲಿನಲ್ಲಿ ಇದು ಶೇ.7.3 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಆ ಸಾಮರ್ಥ್ಯ ಭಾರತದ ಬಲಿಷ್ಟ ಆರ್ಥಿಕತೆಗೆ ಇದೆ. ಕೇವಲ 2018 ರಲ್ಲಿ ಮಾತ್ರವಲ್ಲದೇ 2020 ರ ವೇಳೆಗೆ ಭಾರತ ಶೇ.7.5 ರಷ್ಚು ಅಭಿವೃದ್ಧಿ ದರ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.