Header Ads
Header Ads
Header Ads
Breaking News

ರೋರೋ ಸಮುದ್ರಯಾನ ಸೇವೆ ಆರಂಭ

ಗುಜರಾತ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಬಹು ನಿರೀಕ್ಷಿತ ರೋರೋ ಸಮುದ್ರಯಾನ ಸೇವೆ ಸೇರಿದಂತೆ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
 ಗುಜರಾತ್ ನ ಭಾವ್ ನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ಅಲ್ಲಿಂದ ಘೋಘಾಗೆ ತೆರಳಿದರು. ಅಲ್ಲಿ ಗುಜರಾತ್‌’ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತಗಳಿಗೆ ಜಲ ಸಂಪರ್ಕ  ಕಲ್ಪಿಸುವ ರೊರೊ ಸಮುದ್ರಯಾನ ಸೇವೆಯನ್ನು ಉದ್ಘಾಟಿಸಿದರು. ಒಟ್ಟಾರೆಯಾಗಿ ಗುಜರಾತ್ ನಲ್ಲಿ ಇಂದು ಪ್ರಧಾನಿ ಮೋದಿ  ಸುಮಾರು ರು.1,140 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಸೌರಾಷ್ಟ್ರದ  ಭಾವಂಗರ್ ಜಿಲ್ಲೆಯ ಘೋಘ ಮತ್ತು ದಕ್ಷಿಣ ಗುಜರಾತ್‌ ನ ದಹೇಜ್ ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಗಲಿದೆ.

Related posts

Leave a Reply