Header Ads
Header Ads
Header Ads
Breaking News

ಆಧಾರ್ ಜೋಡಣೆಗೆ ಮಾ.31 ರ ವರೆಗೆ ವಿಸ್ತರಣೆ ಕೇಂದ್ರ ಸರಕಾರದಿಂದ ಸುಪ್ರೀಂ ಕೋರ್ಟ್‌ಗೆ ಹೇಳಿಕೆ

ಸರಕಾರದ ವಿವಿಧ ಸೇವೆಗಳಿಗಾಗಿ ಆಧಾರ್ ಜೋಡಿಸುವ ಗಡುವನ್ನು ತಾನು ಮಾರ್ಚ್ 31 ರ ವರೆಗೆ ವಿಸ್ತರಿಸಲು ಬಯಸಿರುವುದಾಗಿ ಕೇಂದ್ರ ಸರಕಾರ ಇಂದು ಸೋಮವಾರ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠಕ್ಕೆ ತಿಳಿಸಿತು.

ಸರಕಾರದ ವಿವಿಧ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್ ಜೋಡಿಸುವುದನ್ನು ಕಡ್ಡಾಯ ಮಾಡಿರುವ ಕೇಂದ್ರ ಸರಕಾರದ ನಿಯಮವನ್ನು ಪ್ರಶ್ನಿಸಿರುವ ಅರ್ಜಿಗಳ ಕಂತೆಯೊಂದನ್ನು ತಾನು “ಸಂವಿಧಾನ ಪೀಠವು ದಿಲ್ಲಿ-ಕೇಂದ್ರ ಸರಕಾರದ ನಡುವಿನ ವಿವಾದದ ವಿಚಾರಣೆಯನ್ನು ಮುಗಿಸಿದ ಬಳಿಕವೇ ಕೈಗೆತ್ತಿಕೊಳ್ಳುವುದಾಗಿ ಜಸ್ಟಿಸ್ ಎ ಎಂ ಖಾನ್‌ವಿಲ್ಕರ್ ಮತ್ತು ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರನ್ನು ಕೂಡ ಒಳಗೊಂಡಿರುವ ಪೀಠ ಹೇಳಿತು.

ಆಧಾರ್ ಜೋಡಣೆ ಕಡ್ಡಾಯದ ವಿಷಯದಲ್ಲಿ ಸಂವಿಧಾನ ಪೀಠ ಮಾತ್ರವೇ ಮಧ್ಯಾವಧಿ ಆದೇಶವನ್ನು ಹೊರಡಿಸಬಲ್ಲುದು ಎಂದು “ಆಧಾರ್ ಕಡ್ಡಾಯ ಜೋಡಣೆಯನ್ನು ಪ್ರಶ್ನಿಸಿ ತ್ವರಿತ ತೀರ್ಪಿಗಾಗಿ ಒತ್ತಡ ಹೇರುತ್ತಿರುವ ಅರ್ಜಿದಾರರಿಗೆ’ ಪೀಠ ಈ ಸಂದರ್ಭದಲ್ಲಿ ಹೇಳಿತು.

ಮೊಬೈಲ್ ನಂಬರ್‌ಗೆ ಆಧಾರ್ ಜೋಡಿಸುವುದರ ವಿರುದ್ಧ ಸಲ್ಲಿಸಲ್ಪಟ್ಟ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಕಳೆದ ನ.13 ರಂದು ನಿರಾಕರಿಸಿತ್ತು. ಈ ಬಗೆಯ ಹಲವು ಅರ್ಜಿಗಳು ಪೀಠದ ಮುಂದೆ ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅದು ಕಾರಣ ನೀಡಿತು.

Related posts

Leave a Reply