Header Ads
Header Ads
Header Ads
Breaking News

ಆರ್ಥಿಕತೆ ಅವ್ಯವಸ್ಥೆಗೆ ಜ್ಲೇಟಿ ಕಾರಣ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಯಶ್ವಂತ್ ಸಿನ್ಹಾ ಟೀಕೆ

ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ, ಭಾರತದ ಆರ್ಥಿಕತೆಯಲ್ಲಿ ಈಗ ಎದುರಾಗಿರುವ ಅವ್ಯವಸ್ಥೆಗೆ ಜೇಟ್ಲಿ ಕಾರಣವಾಗಿದ್ದು, ಭಾರತದ ಆರ್ಥಿಕತೆ ಅಪಾಯದ ಅಂಚಿಗೆ ಸಿಲುಕುತ್ತಿದೆ ಎಂದು ಆರೋಪಿಸಿದ್ದಾರೆ. ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಅರುಣ್ ಜೇಟ್ಲಿ ಬಗ್ಗೆ ವ್ಯಂಗ್ಯವಾಡಿರುವ ಯಶ್ವಂತ್ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಬಡತನವನ್ನು ಹತ್ತಿರದಿಂದ ನೋಡಿ ಅನುಭವಿಸಿರುವುದಾಗಿ ಹೇಳುತ್ತಾರೆ. ಅವರ ಸಚಿವ ಸಂಪುಟದಲ್ಲಿ ವಿತ್ತ ಖಾತೆಯನ್ನು ನಿರ್ವಹಿಸುತ್ತಿರುವ ಅರುಣ್ ಜೇಟ್ಲಿ ಅವರು ದೇಶದ ಜನತೆಯೂ ಸಹ ಬಡತನವನ್ನು ಹತ್ತಿರದಿಂದ ನೋಡುವಂತೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಸಿನ್ಹಾ ಲೇವಡಿ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿ ಲಕ್ಷಾಂತರ ಕೋಟಿ ರೂಪಾಯಿಗಳು ಲಾಭದಾಯಕವಾಗುವ ಸಂದರ್ಭದಲ್ಲಿ ವಿತ್ತ ಖಾತೆಯ ಹೊಣೆಯನ್ನು ಹೊತ್ತಿರುವುದು ಅರುಣ್ ಜೇಟ್ಲಿ ಅವರ ಅದೃಷ್ಟ. ಆದರೆ ಅದನ್ನು ಅರುಣ್ ಜೇಟ್ಲಿ ಕೈ ಚೆಲ್ಲಿ ಕೂತಿದ್ದು ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಿದ್ದಾರೆ ಎಂದು ಯಶ್ವಂತ್ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related posts

Leave a Reply