Header Ads
Header Ads
Breaking News

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ: ಬಜೆಟ್‍ನಲ್ಲಿ ಏನಿದೆ ಗೊತ್ತೇ?

 

ದೆಹಲಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಇಂದು ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ರಕ್ಷಣಾ ಕ್ಷೇತ್ರ, ಅಸಂಘಟಿತ ಕಾರ್ಮಿಕ ವಲಯ, ಸಣ್ಣ ಉದ್ದಿಮೆದಾರರು ಹಾಗೂ ರೈತರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ. ಇಂದು ಮಂಡನೆಯಾದ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‍ನ ಹೈಲೈಟ್ಸ್ ಇಲ್ಲಿದೆ ನೋಡಿ.

 • ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದೇವೆ
 • 2008ರಿಂದ 14ರವರೆಗೆ ಬ್ಯಾಂಕ್‍ಗಳು ಕಂಗೆಟ್ಟಿದ್ದವು
 • 2022ರ ವೇಳೆಗೆ ನ್ಯೂ ಇಂಡಿಯಾ ನಿರ್ಮಿಸಲಿದ್ದೇವೆ
 • ಕಳೆದ 5 ವರ್ಷಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
 • ಬ್ಯಾಂಕಿಂಗ್ ಕ್ಷೇತ್ರಕ್ಕೆ ಪುನಶ್ಚೇತನ ತಂದುಕೊಟ್ಟಿದ್ದೇವೆ
 • ಹಣದುಬ್ಬರ ದರ ನಿಯಂತ್ರಣ ಮಾಡಿದ್ದೇವೆ
 • ವಿಶ್ವದಲ್ಲೇ 6ನೇ ದೊಡ್ಡ ಆರ್ಥಿಕತೆಯಾಗಿ ಭಾರತ ಮೂಡಿದೆ
 • ಆರ್ಥಿಕ ವಲಯದಲ್ಲಿ ಭಾರತ ಅಗ್ರಗಣ್ಯವಾಗಿದೆ
 • ಭ್ರಷ್ಟಾಚಾರದ ವಿರುದ್ಧ ಪಾರದರ್ಶಕ ಕ್ರಮಗಳನ್ನು ಕೈಗೊಂಡಿದ್ದೇವೆ
 • ಸ್ವಚ್ಛ, ಭಯೋತ್ಪಾದನೆ ರಹಿತ ಭಾರತ ನಮ್ಮ ಗುರಿ
 • ಸಣ್ಣ ಉದ್ದಿಮೆಗಳಿಗೆ ನೆರವು ನೀಡುವ ಮೂಲಕ ಉದ್ಯೋಗ ಸೃಷ್ಟಿ
 • ಕಲ್ಲಿದ್ದಲು, ತರಂಗಾಂತರಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವೆ
 • ಜಿಎಸ್‍ಟಿ ಹಾಗೂ ಇತರ ತೆರಿಗೆ ಮೂಲಕ ಆದಾಯ ಬಂದಿದೆ
 • ಎಫ್‍ಡಿಐ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ
 • ಎಸ್‍ಸಿ-ಎಸ್‍ಟಿ ಮೀಸಲಾತಿ ಮೂಲಕ ಉದ್ಯೋಗ ಸೃಷ್ಟಿ
 • ಹೆಚ್ಚು ಉದ್ಯೋಗ ನೀಡುವ ಮೂಲಕ ಯುವಜನರ ಅಭಿವೃದ್ದಿ
 • ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ
 • ಬಡವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯೋಜನೆ
 • ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದ್ದೇವೆ
 • ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವೆ
 • ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತಗೊಳಿಸಲು ಪಣತೊಟ್ಟಿದೆ
 • ಕಳೆದ 5 ವರ್ಷಗಳಲ್ಲಿ ಜೀವನಮಟ್ಟ ಸುಧಾರಿಸಲು ಯತ್ನಿಸಿದ್ದೇವೆ
 • ಜಾಗತಿಕವಾಗಿ ಭಾರತ ಇಂದು ಪ್ರಕಾಶಿಸುತ್ತಿದೆ
 • ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಮೂಲಕ ರಸ್ತೆ ನಿರ್ಮಾಣ
 • ಗ್ರಾಮೀಣ ಭಾಗದ ಜನತೆಗೆ ಉಚಿತವಾಗಿ ವಿದ್ಯುತ್ ನೀಡಲಾಗಿದೆ
 • ರಾಜ್ಯಗಳ ತೆರಿಗೆ ಪ್ರಮಾಣ ಶೇ.32ರಿಂದ 42ಕ್ಕೆ ಏರಿಕೆ
 • ಬೇನಾಮಿ ಆಸ್ತಿ ಪತ್ತೆಹಚ್ಚಲು ಇಲಾಖೆಗೆ ಬಲ ತುಂಬಿದ್ದೇವೆ
 • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ
 • ವಿದ್ಯುತ್ ಉಳಿತಾಯಕ್ಕೆ ಎಲ್‍ಇಡಿ ಬಲ್ಬ್‍ಗಳನ್ನು ನೀಡಿದ್ದೇವೆ
 • ಕೇವಲ ಸಣ್ಣ ಉದ್ಯಮಿಗಳ ಮೇಲೆ ಮಾತ್ರ ಒತ್ತಡವಿಲ್ಲ
 • ದೊಡ್ಡ ಉದ್ಯಮಿಗಳಿಗೂ ಸಾಲ ಮರುಪಾವತಿಗೆ ಒತ್ತಡವಿದೆ
 • ಬ್ಯಾಂಕ್‍ಗಳಿಗೆ ಹಣ ಮರುಪೂರಣ ವೇಗವಾಗಿ ನಡೆಯುತ್ತಿದೆ
 • ಎಲ್ಲಾ ವರ್ಗಗಳಿಗೂ ಮೀಸಲಾತಿ ಮೂಲಕ ಸಮಾನತೆ ನೀಡಿದ್ದೇವೆ
 • ಸಾಲ ನೀಡಿಕೆ ನಿಯಮಗಳನ್ನು ಕಠಿಣಗೊಳಿಸಿ ಪಾರದರ್ಶಕತೆ
 • ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್ ಮೂಲಕ ನೆರವು
 • ರೈತರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಿದ್ದೇವೆ
 • 50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ ಚಿಕಿತ್ಸೆ
 • 5 ವರ್ಷಗಳಲ್ಲಿ 14 ಏಮ್ಸ್ ಆಸ್ಪತ್ರೆಗಳನ್ನು ನಿರ್ಮಿಸಿದ್ದೇವೆ
 • 10 ಲಕ್ಷದವರೆಗೆ ವೈದ್ಯಕೀಯ ನೆರವು ನೀಡಿದ್ದೇವೆ
 • ಸಣ್ಣ ರೈತರ ಅನುಕೂಲಕ್ಕೆ ಆದಾಯ ಬೆಂಬಲ ಯೋಜನೆ
 • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸುತ್ತಿದ್ದೇವೆ
 • ಎಲ್ಲಾ ರೈತರಿಗೂ ನೇರ ಆದಾಯ ಸಿಗಲೆಂದು ಯೋಜನೆ
 • ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ಜಮಾವಣೆ
 • ಪ್ರತೀವರ್ಷ ರೈತರ ಖಾತೆಗೆ 6 ಸಾವಿರ ರೂ. ಜಮೆಯಾಗಲಿದೆ
 • 12 ಕೋಟಿ ರೈತರ ಕುಟುಂಬಗಳಿಗೆ ಲಾಭವಾಗಲಿದೆ
 • 2018ರ ಡಿಸೆಂಬರ್‍ನಿಂದಲೇ ಈ ಯೋಜನೆ ಜಾರಿಗೆ ಬರಲಿದೆ
 • ಯೋಜನೆ ಆದಾಯವನ್ನು ರೈತರಿಗೆ ನೀಡಲಾಗುವುದು
 • ಸಣ್ಣ ಹಿಡುವಳಿದಾರರಿಗೆ ಬಂಪರ್ ಕೊಡುಗೆ ನೀಡಿದ ಬಜೆಟ್
 • ಕಳೆದ 5 ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟಾಗಿಸಿದ್ದೇವೆ
 • ಈ ಸಾಲಿಗೆ 750 ಕೋಟಿ ಅನುದಾನವನ್ನು ಬಿಡುಗಡೆ ಮಾಡ್ತಿದ್ದೇವೆ
 • ರಾಷ್ಟ್ರೀಯ ಕಾಮಧೇನು ಯೋಜನೆ ಘೋಷಣೆ
 • ಪಶುಪಾಲನೆ, ಮೀನುಗಾರಿಕೆಗೆ 750 ಕೋಟಿ. ರೂ ಅನುದಾನ
 • ಮಣ್ಣಿನ ಗುಣಮಟ್ಟ, ಉತ್ತಮ ಬೀಜ ವಿತರಣೆಯ ಮೂಲಕ ನೆರವು
 • ಜಾನುವಾರು ಸಾಕಣೆಗೆ ಬೇಕಾದ ಸಂಪೂರ್ಣ ನೆರವು
 • ಪಶುಪಾಲನೆ, ಮೀನುಗಾರಿಕೆ ಅಭಿವೃದ್ಧಿಗೆ ವಿಶೇಷ ಅನುದಾನ
 • ಪ್ರಾಕೃತಿಕ ವಿಪತ್ತಿನಿಂದ ರೈತರು ನಷ್ಟಕ್ಕೊಳಗಾಗಿದ್ದಾರೆ
 • ಇಂತಹ ರೈತರ ನೆರವಿಗಾಗಿ ಹೊಸ ಯೋಜನೆಯನ್ನು ನೀಡಿದ್ದೇವೆ
 • ಹೊಸ ಪೆನ್ಷನ್ ಸ್ಕೀಂ ನಿಯಮವನ್ನು ಸಡಿಲಿಕೆ ಮಾಡಲಾಗಿದೆ
 • ಕಾರ್ಮಿಕರ ಬೋನಸ್ 7 ಸಾವಿರ ರೂ. ಏರಿಕೆ
 • ರೈತರಿಗೆ ತಿಂಗಳಿಗೆ 500 ರೂ. ಲಭಿಸಲಿದೆ
 • ನೌಕರರ ಇಎಸ್‍ಐ ಅರ್ಹತೆ ಮಿತಿಯಲ್ಲಿ ಏರಿಕೆ
 • ಕಾರ್ಮಿಕರ ವೇತನದ ಮಿತಿ 21 ಸಾವಿರಕ್ಕೆ ಏರಿಕೆ
 • ಬೀದಿಬದಿ ವ್ಯಾಪಾರಸ್ಥರು, ಬೀಡಿ ಕಾರ್ಮಿಕರಿಗೆ ನೆರವು
 • ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಆರೋಗ್ಯ ನೆರವು
 • ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಕ್ರಮ
 • ಪ್ರಧಾನಮಂತ್ರಿ ಶ್ರಮ್ ಯೋಜನೆ ಜಾರಿಗೊಳಿಸುತ್ತಿದ್ದೇವೆ
 • ಬೀದಿಬದಿ ವ್ಯಾಪಾರಿಗಳು, ರಿಕ್ಷಾಚಾಲಕರಿಗೆ ಅನುಕೂಲ
 • ಗ್ರಾಚ್ಯುಟಿ ಮಿತಿ 20 ಲಕ್ಷ ರೂ.ಗಳಿಗೆ ಏರಿಕೆ
 • ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ
 • ಪ್ರಧಾನ್‍ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿಗೆ
 • 60 ವರ್ಷದ ಬಳಿಕ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ
 • ಕೆಲಸದ ವೇಳೆ ಕಾರ್ಮಿಕ ಮೃತಪಟ್ಟರೆ 6 ಲಕ್ಷ ರೂ. ಪರಿಹಾರ
 • ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ
 • ಶೀಘ್ರದಲ್ಲೇ 7ನೇ ವೇತನ ಆಯೋಗದ ವರದಿ ಜಾರಿ
 • ಅಲೆಮಾರಿ ಜನಾಂಗಗಳಿಗೆ ಪ್ರತ್ಯೇಕ ಮಂಡಳಿ ರಚನೆ
 • ಮಹಿಳಾ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಒತ್ತು
 • ಉಜ್ವಲ ಯೋಜನೆ ಅಮೋಘ ಯಶಸ್ಸನ್ನು ಕಂಡಿದೆ
 • ಈವರೆಗೂ 8 ಕೋಟಿ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ
 • ಶೇ.70 ಮಹಿಳೆಯರನ್ನು ಉಜ್ವಲ ಯೋಜನೆ ತಲುಪಿದೆ
 • ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ
 • ಮುದ್ರಾ ಯೋಜನೆ ಅಡಿಯಲ್ಲಿ 14.5 ಕೋಟಿ ಜನರಿಗೆ ಸಾಲ
 • ಗರ್ಭಿಣಿಯರಿಗೆ ಮಾತೃ ವಂದನಾ ಯೋಜನೆಗೆ ಚಾಲನೆ
 • ಸಕಾಲದಲ್ಲಿ ಸಾಲ ಪಾವತಿಸಿದರೆ 2 ಶೇ. ಬಡ್ಡಿದರ ಕಡಿತ
 • ರಿಸ್ಕ್ ಏರಿಯಾದಲ್ಲಿ ಕೆಲಸ ಮಾಡುವವರ ವೇತನ ಹೆಚ್ಚಳ
 • ರಕ್ಷಣಾ ಬಜೆಟ್ 3 ಲಕ್ಷ ಕೋಟಿ ರೂಗಳಿಗೆ ಹೆಚ್ಚಳ
 • ಅಗತ್ಯ ಬಿದ್ದರೆ ರಕ್ಷಣಾ ಇಲಾಖೆಗೆ ಮತ್ತಷ್ಟು ಅನುದಾನ
 • ಒಂದು ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ನೀಡಿದ್ದೇವೆ
 • ಮೂಲಸೌಕರ್ಯ ನಮ್ಮ ದೇಶದ ಬೆನ್ನೆಲುಬು
 • 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ
 • ಸಾಗರಮಾಲಾ ಯೋಜನೆ ಮೂಲಕ ಜಲಸಾರಿಗೆಗೆ ಒತ್ತು
 • ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ 3 ಪಟ್ಟು ಹೆಚ್ಚಳ
 • ದೇಶಾದ್ಯಂತ ಮಾನವರಹಿತ ರೈಲ್ವೇ ಕ್ರಾಸಿಂಗ್ ನಿರ್ಮಾಣ
 • ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ
 • ಹೆದ್ದಾರಿಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ
 • ಮೊಬೈಲ್ ಡೇಟಾ ಬಳಕೆಯಲ್ಲಿ 50 ಶೇ ಹೆಚ್ಚಳವಾಗಿದೆ
 • ಮೇಕ್ ಇನ್ ಇಂಡಿಯಾ ಯೋಜನೆಯಡಿ 12 ಲಕ್ಷ ಉದ್ಯೋಗ
 • ಗ್ರಾಮಗಳು ಡಿಜಿಟಲ್ ಗ್ರಾಮಗಳಾಗಿ ಬದಲಾಗಿವೆ
 • ಜನಧನ್, ಆಧಾರ್ ದೇಶದ ಗೇಮ್ ಚೇಂಜರ್ ಆಗಿದೆ
 • ಭಾರತೀಯ ಚಿತ್ರರಂಗಕ್ಕೆ ಏಕಗವಾಕ್ಷಿ ಪದ್ಧತಿ ಜಾರಿ
 • ಟ್ಯಾಕ್ಸ್ ಸಂಗ್ರಹದಲ್ಲಿ ಬಹಳಷ್ಟು ಹೆಚ್ಚಳವಾಗಿದೆ
 • ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆಯಾಗಿದೆ
 • ಐಟಿ ಇಲಾಖೆ ಸಂಪೂರ್ಣವಾಗಿ ಆನ್‍ಲೈನ್ ಆಗಿದೆ
 • ತೆರಿಗೆ ಪಾವತಿಗೆ 24 ಗಂಟೆಗಳ ಕಾಲ ಆನ್‍ಲೈನ್ ಸೇವೆ
 • ಜನಧನ್ ಯೋಜನೆಯಡಿ 34 ಕೋಟಿ ಬ್ಯಾಂಕ್ ಖಾತೆ
 • ಆದಾಯ ತೆರಿಗೆ 12 ಲಕ್ಷ ಕೋಟಿ. ರೂ. ಪಾವತಿಯಾಗಿದೆ

 

 

 

 

 

 

 

 

 

 

 

 

Related posts

Leave a Reply