Header Ads
Breaking News

ವರುಷಾಂತ್ಯದೊಳಗೆ ೫೦೦ ಡಿಜಿಟಲ್ ಗ್ರಾಮ, ಬ್ಯಾಂಕ್ ವ್ಯವಹಾರ ಕರತಲಾಮಲಕ ತರಬೇತಿ

ಈ ವರ್ಷಾಂತ್ಯದೊಳಗೆ ಐಸಿ‌ಐಸಿ‌ಐ ಬ್ಯಾಂಕ್, ದೇಶದ ೫೦೦ ಗ್ರಾಮಗಳನ್ನು ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಲು ಕಂಕಣ ತೊಟ್ಟಿದೆ. ನೂರು ದಿನಗಳಲ್ಲಿ ನೂರು ಹಳ್ಳಿಗಳನ್ನು ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಈ ಬ್ಯಾಂಕ್ಗಿದೆ.
೫೦೦ ಗ್ರಾಮಗಳ ಅಂದಾಜು ೫೦ ಸಾವಿರ ನಾಗರಿಕರಿಗೆ ಕೌಶಲ ಮತ್ತು ಡಿಜಿಟಲ್ ತರಬೇತಿ ನೀಡಲಾಗುವುದು. ಯಾರ ನೆರವು ಇಲ್ಲದೆ ಸ್ವತಂತ್ರವಾಗಿ ಬ್ಯಾಂಕ್ ವಹಿವಾಟು ನಡೆಸುವ ಮಟ್ಟಿಗೆ ಗ್ರಾಮಸ್ಥರನ್ನು ಸಜ್ಜುಗೊಳಿಸಲಾಗುವುದು ಎಂದು ಐಸಿ‌ಐಸಿ‌ಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ತಿಳಿಸಿದರು. ಈ ಹಿಂದೆ ನೂರು ದಿನಗಳಲ್ಲಿ ೧೧,೩೦೦ ಗ್ರಾಮಸ್ಥರಿಗೆ ವೃತ್ತಿ ತರಬೇತಿ ನೀಡಲಾಗಿತ್ತು. ಆ ಪೈಕಿ ಶೇ.?೭೦ರಷ್ಟು ಮಹಿಳೆಯರಿದ್ದರು ಎನ್ನುವುದು ವಿಶೇಷ.
ನಗದು ರಹಿತ ವಹಿವಾಟು ಪರಿಕಲ್ಪನೆಗೆ ಡಿಜಿಟಲ್ ಗ್ರಾಮ ಪೂರಕವಾಗಿದೆ. ಕರ್ನಾಟಕ ಸೇರಿದಂತೆ ೧೭ ರಾಜ್ಯಗಳ ನೂರು ಗ್ರಾಮಗಳನ್ನು ಸಜ್ಜುಗೊಳಿಸಿದ್ದೇವೆ. ಸ್ವೈಪಿಂಗ್ ಮಷಿನ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಡಿಜಿಟಲ್ ವಹಿವಾಟು ನಡೆಯುತ್ತಿದೆ ಎಂದು ಕೊಚ್ಚರ್ ತಿಳಿಸಿದ್ದಾರೆ.