Header Ads
Header Ads
Header Ads
Breaking News

“ವಸತಿ ವಲಯದಲ್ಲಿ‌ ಅನಧಿಕೃತ ಗ್ಯಾಸ್‌ಗೋಡೌನ್‌ ನಿರ್ಮಾಣ”.

ಮಂಗಳೂರು ನಗರದವಿದ್ಯಾ ಸಂಸ್ಥೆಗಳಿಗೆ ಪ್ರಸಿದ್ಧವಾಗಿರುವ‌ ಎಕ್ಕೂರು ಪ್ರದೇಶದ ಬಜಾಲ್‌ರಸ್ತೆ ಬಳಿ ಅಳಪೆ ಗ್ರಾಮದ ಸರ್ವೆ ನಂಬ್ರ 9/5, ವಾರ್ಡು ನಂಬ್ರ 50 ಇಲ್ಲಿ‌ ಅನಧಿಕೃತವಾಗಿ ಗ್ಯಾಸ್‌ಗೋಡೌನ್‌ ಒಂದು ನಿರ್ಮಾಣಗೊಂಡಿದೆ. ಈ ಬಗ್ಗೆ ಮಂಗಳೂರು ನಗರಪಾಲಿಕೆಯಲ್ಲಿ ಈಗಾಗಲೇ ಈ ವಲಯದ ಸಾರ್ವಜನಿಕರು ದೂರುಸಲ್ಲಿಸಿದ್ದಾರೆ. ಇದರ ಬಗ್ಗೆ ನಗರಪಾಲಿಕೆಯ ಅಧಿಕಾರಿಗಳು ಯಾವುದೇ ತರಹದ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ ಎಂದು ಪ್ರದೇಶದ ನಿವಾಸಿಗಳು ದೂರಿಕೊಂಡಿದ್ದಾರೆ. ಇಲ್ಲಿ ಸುಮಾರು 110ಕ್ಕಿಂತ ಹೆಚ್ಚು ವಸತಿ ಮನೆಗಳು ಇದ್ದರೂ, ಇದರ ಮಾಲಿಕರಾದ ಶ್ರೀಯುತ. ರೋಹಿತ್‌ಕೊಟ್ಟಾರಿಯವರು ಜನವಸತಿ ವಲಯದಲ್ಲಿ, ನಗರಪಾಲಿಕೆಯ‌ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಅನಧಿಕೃತವಾಗಿ ಗ್ಯಾಸ್‌ಗೋಡೌನನ್ನು ನಿರ್ಮಿಸಿರುವರು. ಅಲ್ಲಿ‌ ಇರುವ ತನ್ನ 20 ಸೆಂಟ್ಸ್‌ ಜಾಗದಲ್ಲಿ‌ ಒಂದು ಲೇಬರ್ ಶೆಡ್‌ಕಟ್ಟಿ ಸಂಬಂಧಪಟ್ಟ ಯಾವುದೇ ಸಂಸ್ಥೆಗಳಿಂದ ನಿರಾಪೇಕ್ಷಣ ಪತ್ರ ಪಡೆಯದೇ ನಗರಪಾಲಿಕೆಯಿಂದ‌ ಇದಕ್ಕೆ‌ ಒಂದು ತಾತ್ಕಾಲಿಕ ಮನೆ ನಂಬ್ರ ತೆಗೆದು ಗ್ಯಾಸ್‌ಗೋಡೌನ್ ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 110 ಮಕ್ಕಳು ಶಾಲೆಗೆ ಹೋಗುವವರು ಸಂಚರಿಸುತ್ತಿದ್ದು, ಮುಂದೆ ನಡೆಯಲಿರುವ ದೊಡ್ಡ‌ ಅನಾಹುತಕ್ಕೆ ಸಾಕ್ಷಿಯಾಗಲಿದೆ .

ಈ ಸ್ಥಳೀಯ ಕೆಳ,ಮಧ್ಯಮ ಮತ್ತು ಬಡವರ್ಗದ ಜನರು ವಾಸಿಸುವ ಮತ್ತೆ ಕಿರಿದಾದ ರಸ್ತೆಗಳಿರುವ ಈ ಪ್ರದೇಶದಲ್ಲಿ ಗ್ಯಾಸ್‌ಗೋಡೌನ್ ಮಾಡಲು‌ ಅನುಮತಿ ನೀಡಿರುವ ನಗರಪಾಲಿಕೆಯ ಬಗ್ಗೆ ವಿಚಿತ್ರವೆನಿಸುತ್ತಿದೆ.ಅದು‌ ಅಲ್ಲದೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಕೂಗಳತೆಯ ದೂರದಲ್ಲಿ ಗ್ಯಾಸ್‌ಗೋಡೌನ್‌ ಆಗುತ್ತದೆಯೆಂದರೆ ವಿಚಿತ್ರವೂ, ಆಶ್ಚರ್ಯವೂ ಅನಿಸುತ್ತಿದೆ.ಈ ಬಗ್ಗೆ ಕಾರ್ಪೊರೇಟರ್‌ ಆಗಿರುವ ವಿಜಯಕುಮಾರ್ ಶೆಟ್ಟಿಯವರ ಗಮನಕ್ಕೂ ತರಲಾಗಿದೆ.

Related posts

Leave a Reply