Header Ads
Breaking News

20 ಲಕ್ಷ ಕೋಟಿ ಪ್ಯಾಕೇಜ್‌ನ 5ನೇ ಕಂತಿನ ವಿವರಣೆ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ-ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿಯ ಪ್ಯಾಕೇಜ್‌ನ ಐದನೇ ಕಂತಿನ ವಿವರಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ನೀಡಿದರು. ಕೇಂದ್ರ ಸರಕಾರ ಆರೋಗ್ಯಕ್ಕೆ ಕ್ಷೇತ್ರಕ್ಕೆ 50,000 ಕೋ.ರೂ. ಮೀಸಲಿಟ್ಟಿದೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದರು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ರಾಜ್ಯಗಳಿಗೆ 4,113 ಕೋ.ರೂ. ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಕೊರೋನ ವಾರಿಯರ್ಸ್ಗೆ 50 ಲಕ್ಷ ರೂ. ವಿಮೆ ನೀಡಲಾಗುವುದು. ಟೆಸ್ಟಿಂಗ್ ಲ್ಯಾಬ್ ಹಾಗೂ ಟೆಸ್ಟಿಂಗ್ ಕಿಟ್‌ಗಳಿಗೆ 550 ಲಕ್ಷ ಕೋ.ರೂ. ಮೀಸಲಿಡಲಾಗಿದೆ. ದೇಶದಲ್ಲಿ 87 ಲಕ್ಷ ಎನ್-95 ಮಾಸ್ಕ್ಗಳನ್ನು ತಯಾರಿಸಲಾಗಿದೆ.ಎಲ್ಲ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ಸೋಂಕು ತಡೆಗೆ ಬ್ಲಾಕ್. ಪಬ್ಲಿಕ್ ಹೆಲ್ತ್ ಬ್ಲಾಕ್‌ಗಳನ್ನು ಬ್ಲಾಕ್ ಮಟ್ಟದಲ್ಲಿ ಸ್ಥಾಪಿಸಲಾಗುವುದು ಎಂದು ನಿರ್ಮಲಾ ಮಾಹಿತಿ ನೀಡಿದರು. ಅಗತ್ಯ ವಸ್ತುಗಳ ಖರೀದಿಗೆ 3,750 ರೂ. ನೀಡಲಾಗುವುದು. ಆನ್‌ಲೈನ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ.ಮನ್ರೇಗಾ ಯೋಜನೆಗೆ 40,000 ಕೋ.ರೂ. ಹೆಚ್ಚಿನ ಅನುದಾನ ನೀಡಲಾಗುವುದು. ವಲಸಿಗ ಕಾರ್ಮಿಕರಿಗೆ ಮನ್ರೇಗ ಯೋಜನೆಯಲ್ಲಿ ಕೆಲಸ ನೀಡಲಾಗುವುದು ಎಂದು ನಿರ್ಮಲಾ ತಿಳಿಸಿದರು.1ರಿಂದ 12ನೇ ತರಗತಿಯವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್ ಇರುತ್ತದೆ.ಡಿಜಿಟಲ್ ಶಿಕ್ಷಣಕ್ಕೆ ಪಿಎಂ ವಿದ್ಯಾ ಯೋಜನೆ ಜಾರಿಗೆ ತರಲಾಗುವುದು. ಅಂಧರಿಗೆ ರೇಡಿಯೊ ಮೂಲಕ ಶಿಕ್ಷಣ ನೀಡಲಾಗುವುದು ಎಂದರು.ಲಾಕ್‌ಡೌನ್‌ನಿಂದ ಹಲವು ಕಂಪೆನಿಗಳು ಸಂಕಷ್ಟದಲ್ಲಿದ್ದು,ಈ ವೇಳೆ ಸಾಲ ಮರುಪಾವತಿ ಮಾಡದಿದ್ದರೆ ಸುಸ್ತಿದಾರ ಎಂದು ಪರಿಗಣಿಸುವುದಿಲ್ಲ ಎಂದಿರುವ ನಿರ್ಮಲಾ ಉದ್ಯಮಗಳಿಗೆ ರಿಲೀಫ್ ನೀಡಿದರು.ಎಂಎಸ್‌ಎಂಇ ದಿವಾಳಿಯಾಗಿದೆ ಎಂದು ಘೋಷಿಸಲು ಇದ್ದ ಮಿತಿ 1 ಕೋ.ರೂ.ಗೆ ಏರಿಕೆ. ದಿವಾಳಿ ಎಂದು ಘೋಷಿಸುವುದನ್ನು 1 ವರ್ಷ ಮುಂದೂಡಿಕೆ ಮಾಡಲಾಗಿದೆ. ಕಂಪೆನಿಗಳ ಕಾನೂನುಗಳಲ್ಲಿ ಭಾರೀ ಬದಲಾವಣೆ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.

Related posts

Leave a Reply

Your email address will not be published. Required fields are marked *