Header Ads
Header Ads
Breaking News

ಅಹಮದಾಬಾದ್‌ ಭಾರತದ ವಿಶ್ವ ಪಾರಂಪಾರಿಕ ನಗರ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ  ಪಾರಂಪಾರಿಕ ತಾಣಗಳ ಪಟ್ಟಿಗೆ ಹಲವು ಸ್ಥಳಗಳ ಸೇರ್ಪಡೆ ಮಾಡಿದ್ದು, ಭಾರತದ ಗುಜರಾತ್‌ನ ಅಹಮದಾಬಾದ್‌ ಸ್ಥಾನ ಪಡೆದಿದೆ.ಐತಿಹಾಸಿಕ ನಗರಿ ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ.

ವಿಶ್ವಸಂಸ್ಥೆಯ ವಿಶ್ವ ಸಾಂಸ್ಕ್ರತಿಕ ಸಂಸ್ಥೆ ಯುನೆಸ್ಕೋ  ಅಧಿಕೃತವಾಗಿ ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಎಂದು ಘೋಷಣೆ ಮಾಡಿದೆ. ಪೊಲ್ಯಾಂಡ್ ನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆ  ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ವಿಶ್ವ ಪರಂಪರೆ ನಗರ ಪಟ್ಟಿಗೆ ಸೇರ್ಪಡೆಯಾದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಭಾಜನವಾಗಿದೆ. 2010ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು  ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದರು. ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಕೊನೆಗೂ ಅಹ್ಮದಾಬಾದ್ ಅನ್ನು ವಿಶ್ವ ಪರಂಪರೆ ನಗರ ಪಟ್ಟಿಗೆ  ಸೇರ್ಪಡೆಗೊಳಿಸಲಾಗಿದೆ ಎಂದು ಯುನೆಸ್ಕೋದ ಭಾರತ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ತಿಳಿಸಿದ್ದಾರೆ.

15ನೇ ಶತಮಾನದಲ್ಲಿ ಸುಲ್ತಾನ್‌ ಅಹ್ಮದ್‌ ಷಾ ಸ್ಥಾಪಿಸಿದ ಅಹಮದಾಬಾದ್‌ ನಗರದ ಸಬರಮತಿ ನದಿಯ ಪೂರ್ವ ದಂಡೆಯ ಮೇಲಿದೆ. ಸುಲ್ತಾನರ ಆಡಳಿತಾವಧಿಯಲ್ಲಿ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಒಳಗೊಂಡಿದೆ. ಅದರಲ್ಲೂ ವಿಶೇಷವಾಗಿ ಭದ್ರ ಕೋಟೆ, ಗೋಡೆಗಳು ಮತ್ತು ಕೋಟೆ ದ್ವಾರಗಳು ಹಾಗೂ ಹಲವು ಮಸೀದಿ, ಸಮಾಧಿಗಳಿವೆ. ನಂತದ ಅವಧಿಯಲ್ಲಿ ಪ್ರಮುಖ ಹಿಂದೂ ಮತ್ತು ಜೈನ ದೇವಾಲಯಗಳು ನಿರ್ಮಿಸಲ್ಪಟ್ಟಿವೆ.

 

Related posts

Leave a Reply