Header Ads
Header Ads
Header Ads
Breaking News

ಇಂಡೋನೇಷ್ಯಾದ ಬಾಲಿಯಲ್ಲಿ ಜ್ವಾಲಾಮುಖಿಯ ಆರ್ಭಟ ಆಗಸದೆತ್ತರಕ್ಕೆ ಹರಡಿದ ಬೆಂಕಿ ಮತ್ತು ಹೊಗೆ ಬಾಲಿ ವಿಮಾನ ನಿಲ್ದಾಣ ಬಂದ್

ಇಂಡೋನೇಷ್ಯಾದ ಬಾಲಿಯಲ್ಲಿ ಜ್ವಾಲಾಮುಖಿಯ ಆರ್ಭಟ ಹೆಚ್ಚಾಗಿದೆ. ಬೆಂಕಿ ಹಾಗೂ ಹೊಗೆ ಆಗಸದೆತ್ತರಕ್ಕೆ ಹರಡಿದೆ. ಆಕಾಶದ ತುಂಬೆಲ್ಲಾ ಕಪ್ಪನೆಯ ಹೊಗೆ ಆವರಿಸಿಕೊಂಡಿರುವುದರಿಂದ ಬಾಲಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ.

ಪ್ರವಾಸಿಗರ ನೆಚ್ಚಿನ ತಾಣ ಕುತಾದಿಂದ 75 ಕಿಮೀ ದೂರದಲ್ಲಿರುವ ಮೌಂಟ್ ಅಗಂಗ್ ನಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಆ ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸುಮಾರು 3400 ಮೀಟರ್ ಎತ್ತರಕ್ಕೆ ದಟ್ಟ ಹೊಗೆ ಆವರಿಸಿಕೊಂಡಿದೆ.

ಪರ್ವತದ ಸಮೀಪದಲ್ಲಿ ವಾಸಿಸುತ್ತಿರುವ 25,000 ಜನರು ಈಗಾಗ್ಲೇ ಮನೆಗಳನ್ನು ತೊರೆದು ಹೊರಟು ಹೋಗಿದ್ದಾರೆ. ಆಗಾಗ ಜ್ವಾಲಾಮುಖಿ ಸ್ಪೋಟಿಸುತ್ತಿದ್ದು, ಭಯಂಕರ ಸದ್ದು ಕೂಡ ಕೇಳಿ ಬರ್ತಿದೆ. ಕ್ಷಣಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿರುವುದ ರಾತ್ರಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಾಲಿ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಪ್ರತಿವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಬಾಲಿ ವಿಮಾನ ನಿಲ್ದಾಣವನ್ನೇ ಬಂದ್ ಮಾಡಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. 1963 ರಲ್ಲಿ ಮೌಂಟ್ ಅಗಂಗ್ ನಲ್ಲಿ ಜ್ವಾಲಾಮುಖಿ ಸ್ಪೋಟಿಸಿತ್ತು, ಆಗ 1600 ಜನರು ಸಾವನ್ನಪ್ಪಿದ್ದರು.

Related posts

Leave a Reply