Header Ads
Header Ads
Header Ads
Breaking News

ಫ್ಲೋರಿಡಾದತ್ತ ಧಾವಿಸಿದ ಚಂಡಮಾರುತ…

ಕೆರಿಬಿಯನ್ ದ್ವೀಪಗಳಲ್ಲಿ 35ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಇದೀಗ ಭೀಕರ ಚಂಡಮಾರುತ ‘ಇರ್ಮಾ’ ಅಮೆರಿಕಾದ ಫ್ಲೋರಿಡಾ ರಾಜ್ಯದತ್ತ ಧಾವಿಸಿದೆ.

ಗಂಟೆಗೆ 209 ಕಿಲೋಮೀಟರ್ ವೇಗದಲ್ಲಿ ಇರ್ಮಾ ಚಂಡಮಾರುತ ಫ್ಲೋರಿಡಾದತ್ತ ಧಾವಿಸುತ್ತಿದ್ದು ರಾಜ್ಯದ ಮೂರನೇ ಒಂದು ಭಾಗ ಜನರನ್ನು ಸ್ಥಳಾಂತರಿರುವಂತೆ ಸೂಚನೆ ನೀಡಲಾಗಿದೆ. ಒಟ್ಟು 63 ಲಕ್ಷ ಜನರು ಚಂಡ ಮಾರುತದಿಂದ ಸ್ಥಳಾಂತರವಾಗಿದ್ದಾರೆ.ಕೀ ವೆಸ್ಟ್ ಕರಾವಳಿಯಿಂದ 140 ಕಿಲೋಮೀಟರ್ ದೂರದಲ್ಲಿ ಚಂಡಮಾರುತವಿದ್ದು ಇನ್ನೇನು ಫ್ಲೋರಿಡಾಗೆ ಅಪ್ಪಳಿಸಲಿದೆ. ಇರ್ಮಾದಿಂದಾಗಿ ಫ್ಲೋರಿಡಾದ 1,70,000 ಮನೆಗಳು ಮತ್ತು ಉದ್ಯಮಗಳು ವಿದ್ಯುತ್ ಕಡಿತ ಉಂಟಾಗಿದೆ.ಈಗಾಗಲೇ ಹೆಚ್ಚಿನ ಜನರು ಫ್ಲೋರಿಡಾದ ಮಿಯಾಮಿ ಮತ್ತು ಟಂಪಾ ನಗರಗಳಿಂದ ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ . ಇನ್ನು ಕೆಲವು ಜನರು ಮನೆಗಳಲ್ಲೇ ಬಾಕಿ ಉಳಿದಿದ್ದು, ಇನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಅಸಾಧ್ಯ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ಸುಮಾರು 1,20,000 ಭಾರತೀಯರು ನೆಲೆಸಿದ್ದು ಇವರಲ್ಲಿ ಸಾವಿರಾರು ಜನರು ಚಂಡಮಾರುತಕ್ಕೆ ಗುರಿಯಾಗಲಿರುವ ಮಿಯಾಮಿ ನಗರದಲ್ಲಿದ್ದಾರೆ. ಇವರಿಗಾಗಿ ಭಾರತೀಯ ಧೂತಾವಾಸ ಕಚೇರಿ ಸಹಾಯವಾಣಿ ತೆರೆದಿದೆ.

Related posts

Leave a Reply