Header Ads
Header Ads
Header Ads
Breaking News

ಭೂಮಿಯಲ್ಲಿ ಗ್ರಹ ಪತ್ತೆ 20 ಗ್ರಹಗಳಿರುವುದಾಗಿ ನಾಸಾ ವಿಜ್ಞಾನಿಗಳು

ಮಂಗಳ, ಚಂದ್ರನಲ್ಲಿ ಜೀವಿಗಳು ವಾಸಿಸುವ ವಾತಾವರಣ ಇದೆಯೇ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಲೇ ಇದೆ. ಈ ಗ್ರಹಗಳಲ್ಲಿ ವಾಸಿಸಲು ಸಾಧ್ಯವಾಗುತ್ತದೆಯೇ ಎಂಬುದು ಖಚಿತವಿಲ್ಲದಿದ್ದರೂ, ಈ ಗ್ರಹಗಳಿಗೆ ಭವಿಷ್ಯದಲ್ಲಿ ತೆರಳಲು ಯೋಜನೆಗಳು ರೂಪುಗೊಳ್ಳುತ್ತಿವೆ. ಈ ಮಧ್ಯೆಯೇ ಇಂಥದ್ದೇ 20 ಗ್ರಹಗಳಿರುವುದಾಗಿ ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನಾಸಾದ ಕೆಪ್ಲರ್ ಗಗನನೌಕೆ ಈ ಸಂಶೋಧನೆ ನಡೆಸಿದೆ. ಈಗಾಗಲೇ ನಮಗೆ ಕಂಡುಬಂದ ಗ್ರಹಗಳ ರೀತಿಯಲ್ಲೇ ಹೊಸದಾಗಿ ಕಂಡುಬಂದ ಗ್ರಹಗಳೂ ಇವೆ ಎಂದು ಕೆಪ್ಲರ್‌ನ ಸಂಶೋಧನೆಗಳಿಂದ ತಿಳಿದುಬಂದಿದೆ. ಕೆಲವು ಗ್ರಹಗಳು ಭೂಮಿಯ ವಾತಾವರಣವನ್ನೇ ಹೋಲುವಂತಿವೆ. ತಾಪಮಾನ ಸಮಾನ ಶ್ರೇಣಿಯಲ್ಲಿದೆ.

ಈ ಪೈಕಿ ಅತ್ಯಂತ ಉತ್ತಮ ಎನ್ನಬಹುದಾದ ಗ್ರಹವನ್ನು ಕೆ‌ಒ‌ಐ-7923.0 ಎಂದು ಕರೆಯಲಾಗಿದ್ದು, ಇನ್ನೊಂದು ಭೂಮಿಯನ್ನು ಕಂಡುಕೊಳ್ಳುವ ಪ್ರಯೋಗ ನಡೆಸಲು ಸೂಕ್ತವಾಗಿವೆ ಎನ್ನಲಾಗಿದೆ. ಈ ಗ್ರಹವು ವರ್ಷದಲ್ಲಿ 395 ದಿನಗಳನ್ನು ಹೊಂದಿದ್ದು, ಭೂಮಿಯ ಶೇ. 97 ರಷ್ಟಿದೆ. ಆದರೆ ಭೂಮಿಗಿಂತ ಶೀತ ವಾತಾವರಣ ಸ್ವಲ್ಪ ಹೆಚ್ಚಿದೆ.

Related posts

Leave a Reply