Header Ads
Header Ads
Header Ads
Breaking News

ಯೋಗಕ್ಕೆ ಸೌದಿ ಅರೇಬಿಯಾ ಸಂಪೂರ್ಣ ಮಾನ್ಯತೆ ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ

ಸೌದಿ ಅರೇಬಿಯಾ ಯೋಗಕ್ಕೆ ಸಂಪೂರ್ಣ ಮಾನ್ಯತೆ ನೀಡಿದ್ದು ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಖ್ಯಾತಿಗೆ ಸೌದಿ ಅರೇಬಿಯಾ ಪಾತ್ರವಾಗಿದೆ.

ಈ ಹಿಂದೆ ಜೂನ್ 21 ರಂದು ನಡೆಸಲಾಗುವ ವಿಶ್ವ ಯೋಗದಿನದ ಸಹಭಾಗಿತ್ವವನ್ನು ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ ಈಗ ಕೈಗೊಂಡಿರುವ ನಿರ್ಧಾರ ಐತಿಹಾಸಿಕವಾಗಿದ್ದು , ಬದಲಾವಣೆಯ ಸೂಚನೆ ಎನ್ನಲಾಗಿದೆ.

ಇತ್ತೀಚೆಗೆ ಜಾರ್ಖಂಡ್ನ ರಾಂಚಿಯಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ನಾಝ್ ವಿರುದ್ದ ಫತ್ವಾ ಹೊರಡಿಸಿ ಆಕೆಯ ನಿವಾಸದ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ನಾಝ್ ಬೆಂಬಲಕ್ಕೆ ಬಂದಿದ್ದ ಬಾಬಾ ರಾಮ್ದೇವ್ ಅವರು ಯೋಗವನ್ನು ಧರ್ಮದ ಹೆಸರಿನಲ್ಲಿ ನೋಡಬೇಡಿ , ಸೌದಿ ಅರೇಬಿಯಾದಲ್ಲೂ ಯೋಗಕ್ಕೆ ಮಾನ್ಯತೆ ಇದೆ ಎಂದಿದ್ದಾರೆ.

Related posts

Leave a Reply