Header Ads
Breaking News

ಇಂದಿನಿಂದ ಎಸ್‌ಎಸ್‌ಎಲ್ ಪರೀಕ್ಷೆ ಆರಂಭ

ಇಂದಿನಿಂದ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಗಳು ಸಾಂಗವಾಗಿ ನೆರವೇರಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಾಕಷ್ಟು ಸಿದ್ದತೆ ನಡೆಸಿದೆ. ಈ ವರ್ಷ 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದಾರೆ. 

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆಗೆ ಭಾರೀ ಭದ್ರತೆ ಒದಗಿಸಲಾಗಿದೆ. ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆಗಳು ನಡೆಯಲಿದೆ. ರಾಜ್ಯದಾದ್ಯಂತ 2,847 ಕೇಂದ್ರಗಳಲ್ಲಿ ನಡೆಯಲಿದೆ. ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ 3,578 ಹೆಚ್ಚುವರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೊಡಗಿನಲ್ಲಿ 7,240 ವಿದ್ಯಾರ್ಥಿಗಳು, ಶಿರಸಿ, ಉತ್ತರ ಕನ್ನಡದಲ್ಲಿ 9,766 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಒಟ್ಟಾರೆ 4,651 ಮಕ್ಕಳು ವಿಶೇಷ ಚೇತನರಾಗಿದ್ದು ಇಲಾಖೆಯು ಈ ಅಭ್ಯರ್ಥಿಗಳಿಗೆ ವಿಷಯವನ್ನು ಆಯ್ಕೆ ಮಾಡುವಲ್ಲಿ ಬಹು ಆಯ್ಕೆಯ ಅನುಕೂಲತೆ ಒದಗಿಸಿದೆ. ಗಣಿತ ಮತ್ತು ವಿಜ್ಞಾನದ ಬದಲಿ ಬೇರೆ ವಿಷಯಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

Related posts

Leave a Reply

Your email address will not be published. Required fields are marked *