Header Ads
Breaking News

ಮಂಗಳನಂಗಳದಲ್ಲಿ ಬಟಾಟೆ, ಬೆಳೆ ಸಾಧ್ಯ ಎಂದ ವಿಜ್ಞಾನಿಗಳು

ಮಂಗಳ ಗ್ರಹದಲ್ಲಿ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೆರುವಿನಲ್ಲಿರುವ ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಸಿ‌ಐಪಿ ಮಂಗಳ ಗ್ರಹದಲ್ಲಿರುವ ವಾತಾವರಣದಲ್ಲಿ ಆಲೂಗಡ್ಡೆ ಬೆಳೆಯಲು ಸಾಧ್ಯವೇ? ಎಂದು ಪ್ರಯೋಗ ನಡೆಸಿತ್ತು. ಈ ಪ್ರಯೋಗಗಳ ಮೂಲಕ ಭೂಮಿ ಬಿಟ್ಟು ಮಂಗಳ ಗ್ರಹದಲ್ಲಿಯೂ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಈ ಪ್ರಯೋಗಳನ್ನು ಆರಂಭಿಸಲಾಗಿತ್ತು. ಮಂಗಳನ ವಾತಾವರಣದಲ್ಲಿ ಆಲೂಗಡ್ಡೆಯನ್ನು ಯಾವ ರೀತಿ ಬೆಳೆಯಬಹುದು ಮತ್ತು ಹವಾಮಾನ ವೈಪರೀತ್ಯಗಳಿರುವಾಗ ಈ ಕೃಷಿಗೆ ಹಾನಿಯಾಗದಂತೆ ಯಾವ ರೀತಿ ತಡೆಯಬಹುದು ಎಂಬುದರ ಬಗ್ಗೆಯೂ ಪ್ರಯೋಗಗಳನ್ನು ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ