Breaking News

ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಪಾತ್ರ ಮಹತ್ವ : ಮಸೂದ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ| ವೀಣಾ ಗ್ರೆಟ್ಟಾ ತೌರೋ ಅಭಿಪ್ರಾಯ

ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಪಾತ್ರ ಮಹತ್ವದ್ದಾಗಿದ್ದು, ನರ್ಸಿಂಗ್ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಶೈಕ್ಷಣಿಕ ಸಂದರ್ಭದಲ್ಲಿ ಉತ್ತಮ ನಡತೆಯೊಂದಿಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರಿನ ಮಸೂದ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ| ವೀಣಾ ಗ್ರೆಟ್ಟಾ ತೌರೋ ಅಭಿಪ್ರಾಯಪಟ್ಟರು.

ಅವರು ಕಣಚೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ಕ್ಯಾಂಪಸ್‌ನಲ್ಲಿ ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ನ ನೂತನ ವಿದ್ಯಾರ್ಥಿಗಳ ಪ್ರತಿe ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಆರೈಕೆಯ ಪ್ರತೀ ಕ್ಷಣದಲ್ಲಿ ಉಪಸ್ಥಿತರಿರುವವರು ಆಸ್ಪತ್ರೆಯ ದಾದಿಯರು. ರೋಗಿಗಳೊಂದಿಗೆ ಇಡುವ ಬಾಂಧವ್ಯ ಮತ್ತು ನೀಡುವ ಸೇವೆ ಉತ್ತಮವಿದ್ದರೆ ರೋಗಿಯ ಆರೋಗ್ಯದಲ್ಲೂ ಪರಿಣಾಮವಿರುತ್ತದೆ ಎಂದ ಅವರು ನರ್ಸಿಂಗ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇಂತಹ ಗುಣವನ್ನು ವಿದ್ಯಾರ್ಥಿ ಜೀವನದಲ್ಲೇ ಬೆಳೆಸಿಕೊಂಡು ಬಂದಾಗ ವೃತ್ತಿ ಜೀವನದಲ್ಲಿ ಯಶಸ್ವಿಗಳಿಸಲು ಸಾಧ್ಯವಿದ್ದು, ಇದರೊಂದಿಗೆ ತಮ್ಮ ತಂದೆ ತಾಯಿವರ ಮೇಲೆ ಉತ್ತಮ ಗೌರವವನ್ನು ಉಳಿಸಿಕೊಂಡು ಅವರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಾಟೆಕಲ್ ಮಂಗಳೂರು ಇದರ ಅಧ್ಯಕ್ಷ ಯು.ಕೆ. ಮೋನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ| ರಾಜೇಶ್ವರೀ ದೇವಿ ಎಚ್.ಆರ್., ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಡಾ| ಎಚ್. ವಿರೂಪಾಕ್ಷ , ನಿರ್ದೇಶಕ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್‌ನ ಪ್ರಾಂಶುಪಾಲೆ ಪ್ರೊ| ರೆನಿಲ್ಡಾ ಶಾಂತಿ ಲೋಬೋ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಜೂಲಿಯಾನ ವಂದಿಸಿದರು. ಶೀತಲ್ ರೊಸಿಟ್ಟಾ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply