ಮಂಗಳೂರಿನ ಕೆಎಂಸಿ ಆಸ್ಪತ್ರೆ ವತಿಯಿಂದ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮ

ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮರೇನಾ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಫಿಟ್ ಹಾರ್ಟ್ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಇಂಟರ್‌ವೆನ್ಷನಲ್ ಕಾರ್ಡಿಯಾಲಾಜಿಸ್ಟ್ ಡಾ. ನರಸಿಂಹ್ ಪೈ ಅವರು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಕ್ರೀಡಪಾಟುಗಳು ಹಾಗೂ ಯುವ ಜನತೆಯಲ್ಲಿ ಹೃದಯಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ವಿಷಯದ ಮೇಲೆ ಬೆಳಕು ಚೆಲ್ಲಿದರಲ್ಲದೆ, ಎಲ್ಲರೂ ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡಿದರು.
ಇದೇ ವೇಳೆ ವ್ಯಾಯಾಮ ಹಾಗೂ ನೃತ್ಯ ಒಳಗೊಂಡಂತೆ ೪೦ ನಿಮಿಷಗಳ ಫಿಟ್ನೆಸ್ ಸೆಷನ್ ನಡೆಯಿತು.


ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾಂತೀಯ ಮುಖ್ಯ ಕಾರ್ಯಕಾರಿ ಅಧಿಕಾರಿ ಸಘೀರ್ ಸಿದ್ದಿಖಿ ಅವರು ಮಾತನಾಡಿ, ಸಾಮಾನ್ಯ ಜನರ ಮೇಲೆ ಗಂಭೀರವಾಗಿರುವ ಪರಿಣಾಮ ಬೀರುವಂತಹ ಜೀವನ ಶೈಲಿಗೆ ಸಂಬಂಧಿಸಿದ ಪ್ರಮುಖ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆ ಸದಾ ಬದ್ಧತೆ ತೋರುತ್ತಾ ಬಂದಿದೆ ಎಂದು ಹೇಳಿದರು.
ಈ ಸಂದರ್ಭದ ಕಾರ್ಯಕ್ರಮದಲ್ಲಿ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯೋಲಜಿಸ್ಟ್ ಡಾ. ಮನೀಶ್ ರೈ, ಮಾಹೆ ಮಂಗಳೂರು ಕ್ಯಾಂಪಸ್‌ನ ವಯ್ಸ್ ಚಾನ್ಸಲರ್ ಪ್ರೊ. ಡಾ. ದಿಲಿಪ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


ಕಲ್ಟ್ ಫಿಟ್ನೆಸ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಝೂಮ್ ಮತ್ತು ಫೇಸ್‌ಬುಕ್ ಲೈವ್ ವೇದಿಕೆಗಳಲ್ಲಿ ನಡೆದ ಈ ವರ್ಚುವಲ್ ಕಾರ್ಯಕ್ರಮದಲ್ಲಿ ೧೦೦೦ಕ್ಕೂ ಅಧಿಕ ಮಂದಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜವನ್ನು ಪಡೆದುಕೊಂಡರು.

Related Posts

Leave a Reply

Your email address will not be published.