Home ಕರಾವಳಿ Archive by category ಬೆಳ್ತಂಗಡಿ (Page 6)

ಶಿರಾಡಿ ಘಾಟ್ ; ಮಿನಿಲಾರಿಗೆ ಡಿಕ್ಕಿಯಾಗಿ ಪರಾರಿಯಾದ ಘನ ವಾಹನ – ಇಬ್ಬರು ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಸಮೀಪ ಮಿನಿ ಲಾರಿಯೊಂದಕ್ಕೆ ಯಾವುದೋ ವಾಹನವೊಂದು ಡಿಕ್ಕಿ ಯಾಗಿ ಪರಾರಿಯಾಗಿದ್ದು ಈ ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.6ರ ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟವರು ಹಾಸನ ನಿವಾಸಿಗಳು ಎಂದು

ನೆಲ್ಯಾಡಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

ನೆಲ್ಯಾಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ವಾಹನ ಸವಾರರು ಭಯಭೀತರಾದರು. ಭಾನುವಾರ ಸಂಜೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಬಂದಿದ್ದರಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಒಂಟಿ ಸಲಗವು ಬೃಹದಾಕಾರವಾಗಿದ್ದು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇದ್ದು ನಂತರ ತಿರುವಿನಲ್ಲಿ ಅರಣ್ಯಕ್ಕೆ ಸಾಗಿದ್ದು ವಾಹನ ಸವಾರರು ಕಾಡಾನೆಯ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ

ನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ, ತೀವ್ರ ಗಾಯಗೊಂಡ ಬೈಕ್ ಸವಾರ. ಸ್ಕೂಟರ್‌ ಸವಾರ ಶೇಖಬ್ಬ ಎಂಬವರು KA19HL2146 ನೋಂದಣಿ ನಂಬ್ರದ ಸ್ಕೂಟರನ್ನು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆದ್ದಾರಿಯ ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ಹೋಗಲು ಡಿವೈಡರ್‌ ನ

ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ: ಕಾರಿನಲ್ಲಿದ್ದ ಓರ್ವರಿಗೆ ಗಾಯ

ಬೆಳ್ತಂಗಡಿ ತಾಲೂಕಿನ ನೆರಿಯ-ಕಕ್ಕಿಂಜೆರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ಕಾರಿಗೆ ಹಾನಿ ಮಾಡಿ ಓರ್ವನನ್ನು ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಆನೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಆಗಮಿಸಿದ ಆಲ್ಟೋ ಕಾರನ್ನು ಚಾಲಕ ಆತಂಕಗೊಂಡು ನಿಲ್ಲಿಸಿದ್ದಾರೆ. ನಿಂತ ಕಾರಿನ ಬಳಿಗೆ ಆಗಮಿಸಿದ ಆನೆಯು ತನ್ನ ಸೊಂಡಿಲ ಮೂಲಕ ಕಾರನ್ನು ಎತ್ತಿ ಹಾನಿ ಮಾಡಿದೆ. ಕಾರಿನಲ್ಲಿ ಮಗು ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ

ಬೆಳ್ತಂಗಡಿ: ಸ್ಯಾಕ್ರೋಫೋನ್ ಕಲಾವಿದ ಡಿ.ಬಿ.ಪ್ರಕಾಶ ದೇವಾಡಿಗರಿಗೆ ಅಮೇರಿಕದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಪ್ರದಾನ

ಬೆಳ್ತಂಗಡಿ: ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ರಾಜ್ಯದ ಅತ್ಯುನ್ನತ ಕಲಾವಿದ, ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರೂ ಆಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಮನ್ನಣೆ ದೊರೆತಿದೆ.ಅಮೇರಿಕಾದ ಫಿನಿಕ್ಸ್‌ನ ಪುತ್ತಿಗೆ ಮಠದ ಪೀಠಾದಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅವರ ಮೂರನೇ ಬಾರಿಯ ಅಮೇರಿಕಾ ಕಲಾ ಪ್ರವಾಸದ ವೇಳೆ ನೀಡಿದ ಕಲಾ ಸೇವೆಯನ್ನು ಗೌರವಿಸಿ ಈ

ಬೆಳ್ತಂಗಡಿ : ಡಿ.17 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಸಭೆಯು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಡಿ. ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ವಾಣಿ ಕಾಲೇಜಿನಲ್ಲಿ ಜರಗಿತು. ಸಭೆಯ ತೀರ್ಮಾನದಂತೆ ದಶಂಬರ 17 ಆದಿತ್ಯವಾರದಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಮ್ಮೇಳನ ಜರಗಲಿದೆ. ಸುವರ್ಣ ಕರ್ನಾಟಕ ವರ್ಷವಾದದ್ದರಿಂದ ಸಮಗ್ರ ಸಮ್ಮೇಳನವು ಸುವರ್ಣ ಕರ್ನಾಟಕದ ಆಶಯವನ್ನು ಬಿಂಬಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ

ನೆಲ್ಯಾಡಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ- ಬೈಕ್ ಸವಾರನ ಸ್ಥಿತಿ ಗಂಭೀರ

ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಮುಂಭಾಗದಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.ಬಂಟ್ವಾಳ ತಾಲೂಕು ಕರೋಪಾಡಿ ನಿವಾಸಿ ದೀಕ್ಷಿತ್(23ವ.) ಗಾಯಗೊಂಡವರಾಗಿದ್ದಾರೆ. ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕೋಲ್ಪೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದೆ.

ನೆಲ್ಯಾಡಿ: ಕೌಕ್ರಾಡಿ ಪೇಟೆ ಉಳಿಸಿ- ಹೋರಾಟಕ್ಕೆ ಸಮಾಲೋಚನೆ ಸಭೆ: ನ.23ರಂದು ಪ್ರತಿಭಟನೆಗೆ ನಿರ್ಧಾರ

ನೆಲ್ಯಾಡಿ ಪೇಟೆಯ ಎರಡೂ ಬದಿ ತಡೆಗೋಡೆಯೊಂದಿಗೆ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ರಸ್ತೆ ಕೈಬಿಟ್ಟು ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ ಮಾದರಿಯಲ್ಲಿಯೇ ಫ್ಲೈಓವರ್ ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ವಠಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ. ನೆಲ್ಯಾಡಿ ಭಾರತ್ ಪೆಟ್ರೋಲ್ ಪಂಪ್‍ನ ಬಳಿಯಿಂದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ತನಕ ಸುಮಾರು 1 ಕಿ.ಮೀ.ದೂರಕ್ಕೆ

ಬೆಳ್ತಂಗಡಿ: ತೆಕ್ಕಾರಿನಲ್ಲಿ ದೇವರ ಪುರಾತನ ಭಗ್ನ ವಿಗ್ರಹ ಪತ್ತೆ

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಭಟ್ರಭೈಲು ದೇವರ ಗುಡ್ಡೆಯಲ್ಲಿ ಬಾವಿ ನಿರ್ಮಾಣದ ವೇಳೆ 12ನೇ ಶತಮಾನದ್ದೆನ್ನಲಾದ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಹಾಗೂ ಇನ್ನಿತರ ಪರಿಕರಗಳು ಪತ್ತೆಯಾಗಿವೆ. ದೇವಾಲಯವಿತ್ತೆನ್ನಲಾದ ದೇವರಗುಡ್ಡೆ ಪ್ರದೇಶದಲ್ಲಿ ಬೆಳ್ತಂಗಡಿ ಶಾಸಕರ ಮುತುವರ್ಜಿಯಿಂದ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಸಂಬಂಧ 5 ದಿನಗಳ ಹಿಂದೆ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗಿತ್ತು. ಜೋತಿಷಿ ವೆಂಕಟರಮಣ ಭಟ್

ನೆಲ್ಯಾಡಿ: ಹೃದಯಾಘಾತದಿಂದ ವಿದ್ಯಾರ್ಥಿ ನಿಧನ

ನೆಲ್ಯಾಡಿ: ಹೃದಯಾಘಾತಕ್ಕೆ ಒಳಗಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನ.6ರಂದು ಸಂಜೆ ನಡೆದಿದೆ. ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಇರ್ಪಾನ್(18ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎ.ಸಿ.ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದ ಇರ್ಪಾನ್ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. 6 ಗಂಟೆಯ ವೇಳೆಗೆ ಇರ್ಪಾನ್ ದಿಢೀರ್