Home ಕರಾವಳಿ Archive by category ಮಂಗಳೂರು (Page 9)

ಮಂಗಳೂರು: ಆತ್ಮಶಕ್ತಿ ಸ್ಥಾಪನಾ ದಿನ: ಸೌರ ವಿದ್ಯುತ್ ಘಟಕದ ಉದ್ಘಾಟನೆ

ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆತ್ಮಶಕ್ತಿ ಸ್ಥಾಪನಾ ದಿನಾಚರಣೆ ಮತ್ತು ಹವಾ ನಿಯಂತ್ರಿತ ಸಭಾಂಗಣ ಹಾಗೂ ನೂತನ ಸೌರ ವಿದ್ಯುತ್ ಘಟಕದ ಉದ್ಘಾಟನಾ ಕಾರ್ಯಕ್ರಮವು ಪಡೀಲ್‌ನ ಆತ್ಮಶಕ್ತಿ ಸೌಧದಲ್ಲಿ ನಡೆಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆತ್ಮಶಕ್ತಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವರಾದ ರಮಾನಾಥ ರೈ ಅವರು ದೀಪ

ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆ

ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಚಿನ್ನ ಹಾಗೂ ವನ್ಯಜೀವಿಗಳ ಕಳ್ಳಸಾಗಾಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ಅಂತರರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯನ್ನು ಕೋಸ್ಟ್‌ಗಾರ್ಡ್ ಕರ್ನಾಟಕದ ಕಮಾಂಡೆಂಟ್ ಪ್ರವೀಣ್ ಕುಮಾರ್ ಮಿಶ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,

ಮಂಗಳೂರು : ಪದವಿನಂಗಡಿ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕ ನಿಧನ

ಮೂಲ್ಕಿಯ ಹಳೆಯಂಗಡಿಯ ಬಳಿ ರಕ್ತೇಶ್ವರ ಕೋಲ ಕಟ್ಟುವ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ದೈವನರ್ತಕ ಸಾವನ್ನಪ್ಪಿದ ಘಟನೆ ನಡೆದಿದೆ. ದೈವನರ್ತಕ ಪದವಿನಂಗಡಿಯ ನಿವಾಸಿಯಾಗಿದ್ದು, ಅಶೋಕ್ ಬಂಗೇರಾ ಎಂದು ತಿಳಿದುಬಂದಿದೆ. ಪದವಿನಂಗಡಿಯ ಕೊರಗಜ್ಜ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾತ್ರವಲ್ಲದೆ ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.

ಮಂಗಳೂರು: ಆರ್‌ ಸಿಬಿ ತಂಡಕ್ಕೆ ಕರಾವಳಿಯ  ಹ್ಯಾಂಗ್ಯೋ ಐಸ್‌ ಕ್ರೀಂ ಸ್ವಾದ..!

ಮಂಗಳೂರು: ಇನ್ನೇನು ಐಪಿಎಲ್ 2024ನೇ ಆವೃತ್ತಿ ಪ್ರಾರಂಭಗೊಳ್ಳುತ್ತಿದೆ. ಈ ನಡುವೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಧಿಕೃತ ಐಸ್ಕ್ರೀಂ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಸೇರ್ಪಡೆಗೊಂಡಿದೆ. ಕ್ರಿಕೆಟ್ ಪ್ರೇಮಿಗಳ ಐಪಿಎಲ್ ಕ್ರಿಕೆಟ್ ಹಬ್ಬ ಇನ್ನೇನು ಆರಂಭವಾಗಲಿದೆ. ಈ ಭಾರಿ ಆರ್‌ಸಿಬಿ ತಂಡಕ್ಕೆ ಹಾಂಗ್ಯೊ ಐಸ್ಕ್ರೀಂ ಸಾಥ್ ನೀಡಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ಕರಾವಳಿಯ

ಮಂಗಳೂರು : ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಉದ್ಘಾಟನೆ

ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸವಲತ್ತುಗಳಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಸಚಿವರು ಮತ್ತು ಅತಿಥಿಗಳು ನೂತನ, ಸರ್ವಸಜ್ಜಿತ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಕೇರ್ ಸೆಂಟರ್ ಮತ್ತು ಬ್ಲೋಸಮ್ ಡಿಲಕ್ಸ್ ಕೊಠಡಿಗಳನ್ನು

ಮಂಗಳೂರು : ಚೇತನಾ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಮಕ್ಕಳ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನರಿಂಗಾನದ ಯೆನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಫ್ರಿನ್ಸಿಪಾಲ್ ಡಾ. ಕೆ. ಶಿವಪ್ರಸಾದ್ ಅವರು ಆಗಮಿಸಿ ಧ್ವಜಾರೋಣ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ ಸಹಕರಿಸಿದರು. ಈ ಸಂಧರ್ಭದಲ್ಲಿ ಡಾ. ಕೆ. ಶಿವಪ್ರಸಾದ್ ಅವರು ಮಾತನಾಡಿ, ಮಕ್ಕಳನ್ನು

ಮಂಗಳೂರು : ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಮಂಗಳೂರು: ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಧ್ವಜಾರೋಹಣ ಮಾಡಿ ಮಾತನಾಡಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತ ಆಗಿದ್ದು, ನಮ್ಮ ಸಂವಿಧಾನ ಅತ್ಯಂತ ಸುದೀರ್ಘ ಸಂವಿಧಾನ ಆಗಿರುತ್ತದೆ. ಇಂತಹ ಪವಿತ್ರ ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ

ಮಂಗಳೂರು: ಜ.26ರಂದು ಕರುನಾಡ ವೈಭವ-2024

ಅವಿನಾಶ್ ಪೋಕ್ ಡಾನ್ಸ್ ಮಂಗಳೂರು ಅರ್ಪಿಸುವ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಕರುನಾಡ ವೈಭವ 2024 ರಾಜ್ಯಮಟ್ಟದ ವಿವಿಧ ವಿನೋಧಾವಳಿ ಸ್ಪರ್ಧೆಯು ಜನವರಿ 26ರಂದು ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವಿನಾಶ್ ಅವರು, ಕಾರ್ಯಕ್ರಮಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಮೇಯರ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಹಿಳಾ ಶಕ್ತಿ ಪಯಣ ಹೆಚ್ಚಳ

ಮಂಗಳೂರು ಮತ್ತು ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಶಕ್ತಿ ಯೋಜನೆಯ ಅನುಕೂಲ ಪಡೆದು 7 ತಿಂಗಳಲ್ಲಿ ಪಯಣಿಸಿದ ಮಹಿಳೆಯರಿಗೆ 2.8 ಕೋಟಿ ಟಿಕೆಟ್ ನೀಡಿಕೆ ಆಗಿದೆ. ಈ ಟಿಕೆಟ್‌ಗಳ ಒಟ್ಟು ದರ 9.15 ಕೋಟಿ ರೂಪಾಯಿ. ಆರಂಭದ ಜೂನ್ ತಿಂಗಳಿನಲ್ಲಿ 20,87,658 ಇದ್ದ ಟಿಕೆಟ್ ನೀಡಿಕೆ ಹೆಚ್ಚುತ್ತ ಬಂದಿದ್ದು ಜನವರಿ ತಿಂಗಳಲ್ಲಿ ತಿಂಗಳು ಮುಗಿಯುವುದಕ್ಕೆ ಮೊದಲೆ 26,96,261ತಲುಪಿದೆ.

ಮಂಗಳೂರು: ಕುಳಾಯಿ ಕಿರುಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಭೇಟಿ, ಪರಿಶೀಲನೆ

ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿಯು ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಬ್ರೇಕ್ ವಾಟರ್ ನಿರ್ಮಾಣ ಅವೈಜ್ನಾನಿಕವಾಗಿದ್ದು, ನಾಡದೋಣಿಕೆ ಪೂರಕವಾಗಿ ನಿರ್ಮಿಸಲಾಗುತ್ತಿಲ್ಲ. ಮೀನುಗಾರರು ಪ್ರಾಣ ಭೀತಿಯಲ್ಲಿದ್ದಾರೆ ಎಂದು ನಾಡದೋಣಿ ಮೀನುಗಾರರು ಹಾಗೂ ಸಾಂಪ್ರದಾಯಿಕ ಮೂಲ ಮೀನುಗಾರರ ಸಂಘಟನೆಗಳು ಸಂಸದ ನಳಿನ್ ಕುಮಾರ್ ಕಟೀಲ್ ಮುಂದೆ ಅಸಮಾಧಾನ ತೋಡಿಕೊಂಡರು. ಕುಳಾಯಿಯ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್