Home Archive by category ಕರಾವಳಿ (Page 13)

ಬಂಟ್ವಾಳ: ಸಾಮಾಜಿಕ ಹೋರಾಟಗಾರ ಪದ್ಮನಾಭ ಸಾಮಂತ್ ಆತ್ಮಹತ್ಯೆ?

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಶವ ಪತ್ತೆಯಾಗಿದೆ. ವಾಮದಪದವಿನ ಅವರ ಮನೆ ಬಳಿಯ ಗುಡ್ಡದಲ್ಲಿರುವ  ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವಿವಿಧ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಭ ಸಾಮಂತ್ ಅವರ ಸಾವು

ಮಂಗಳೂರು: ಗ್ಯಾಲಕ್ಸಿ ಯುನಿಸೆಕ್ಸ್ ಸಲೋನ್ ಶುಭಾರಂಭ

ಮಂಗಳೂರಿನ ನವಭಾರತ್ ಸರ್ಕಲ್‌ನ ಗುಲಾಬಿ ಶ್ರೀಪಾದ್ ಎನ್‌ಕ್ಲೇವ್‌ನಲ್ಲಿ ಸುಸಜ್ಜಿತವಾದ ಗ್ಯಾಲಕ್ಸಿ ಯುನಿಸೆಕ್ಸ್ ಸಲೂನ್ ಶುಭಾರಂಭಗೊಂಡಿತು.ನೂತನ ಸಲೂನನ್ನು ಗಣ್ಯರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಡಿಪುವಿನ ಸೂರಜ್ ಪಿಯು ಕಾಲೇಜಿನ ಚೇರ್‌ಮ್ಯಾನ್ ಡಾ. ಮಂಜುನಾಥ್ ರೇವಣ್ಕರ್ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಸುಸಜ್ಜಿತ ಮಾದರಿಯಲ್ಲಿ ಗ್ಯಾಲಕ್ಸಿ ಸಲೋನ್ ಕಾರ್ಯಾರಂಭಗೊಂಡಿರುವುದು ಸಂತಸದ ವಿಚಾರ ಎಂದರು.

ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ  ದನ ಸಾಗಾಟದ ಕಾರು ಡಿಕ್ಕಿ, ವ್ಯಕ್ತಿ ಮೃತ್ಯು-ಆಸ್ಪತ್ರೆಯ ಎದುರು ಪ್ರತಿಭಟನೆ-ಇಬ್ಬರು ಪೊಲೀಸ್ ವಶಕ್ಕೆ

ಕಡಬ: ಅಕ್ರಮ ದನ ಸಾಗಾಟದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗೆ ಕಾರಣವಾದ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಶನಿವಾರ ರಾತ್ರಿ ವೇಳೆಗೆ ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿ

ಬೈಂದೂರು :ಲೋಕಸಭಾ ಚುನಾವಣಾ ಕಾರ್ಯಗಾರ

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಮಹಿಳಾ ಕಾರ್ಯಕರ್ತರಿಗೆ ಲೋಕಸಭಾ ಚುನಾವಣಾ ಕಾರ್ಯಗಾರ ಇಂದು ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು.ಕಾರ್ಯಗಾರವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ರವರು ಮಹಿಳಾ ಕಾರ್ಯಕರ್ತರು ಹೇಗೆ ಚುನಾವಣೆಯಲ್ಲಿ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯಗಾರ ನೆರವೇರಿಸಿದರು. ವೇದಿಕೆಯಲ್ಲಿ ಕರ್ನಾಟಕದ ಆರು ಲೋಕಸಭಾ ಕ್ಷೇತ್ರದ

ಎಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ : ಕೋಟ ಶ್ರೀನಿವಾಸ ಪೂಜಾರಿ

ಈ ಬಾರಿಯ ಚುನಾವಣೆ ದೇಶದ ಭದ್ರತೆ, ಬಯೋತ್ಪಾದನೆ ಹತೋಟಿ, ಆರ್ಥಿಕ ಸುಭದ್ರತೆಯನ್ನು ನೀಡಬಲ್ಲ ರಾಷ್ಟ್ರನಾಯಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಮಹತ್ತರವಾದ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬ್ರಹ್ಮಾವರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಈಗಾಗಲೆ ನಮ್ಮ ಮತಕ್ಷೇತ್ರ ವ್ಯಾಪ್ತಿಯ 1850 ಮತಗಟ್ಟೆ ಮತ್ತು ಮತದಾರರ ಒಂದು ಸುತ್ತಿನ ಬೇಟಿ ಮಾಡಿ ಏಪ್ರಿಲ್ ೩ನೇ

ಹೊಸ ಬದುಕು ಹುಟ್ಟುವ ಈಸ್ಟರ್ ಮೊಟ್ಟೆ

ನಲವತ್ತು ದಿನಗಳ ಉಪವಾಸದ ಬಳಿಕ ಯೇಸು ಕ್ರಿಸ್ತನ ಪುನರುತ್ಥಾನವನ್ನು ಕ್ರಿಶ್ಚಿಯನರು ಮನೆ ಮನ ತುಂಬಿಕೊಳ್ಳುವ ಹಬ್ಬ ಈಸ್ಟರ್. ಯೇಸು ಕ್ರಿಸ್ತನು ನಲವತ್ತು ದಿನಗಳ ಜಪ ತಪಗಳಲ್ಲಿ ಕಳೆದ ಉಲ್ಲೇಖ ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಇದೆ. ಬೂದಿ ಬುಧವಾರದಿಂದ ಶುಭ ಶುಕ್ರವಾರದವರೆಗೆ ಉಪವಾಸ. ಇದು ವಸಂತ ಕಾಲದಲ್ಲಿ ಬರುತ್ತದೆ. ಇದರ ಮುಖ್ಯ ಉದ್ದೇಶ ದೇಹ ದಂಡನೆ. ಆ ಮೂಲಕ ಬದುಕಿನ ತಪ್ಪುಗಳಿಂದ ತಪ್ಪಿಸಿಕೊಳ್ಳುವುದು. ಪ್ರಕೃತಿದತ್ತ ಮಿತಾಹಾರ ಸೇವೆನೆಗೆ ಆದ್ಯತೆ. ಕಾಲ

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ : ಮಾಜಿ ಸಚಿವ ಅಭಯಚಂದ್ರ ಜೈನ್

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನ ಪರ ಯೋಜನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಅಭಿವೃದ್ಧಿ, ಬಡತನ ನಿರ್ಮೂಲನೆಗೆ ಪ್ರಾಶಸ್ತ್ಯವಿತ್ತು. ಆದ್ದರಿಂದಲೇ ಬಿಜೆಪಿ ಕಾಲಘಟ್ಟದಲ್ಲಿ ಯಾವ ಯೋಜನೆಗಳೂ ಬಾರದಿದ್ದರೂ, ಭಾವನಾತ್ಮಕವಾಗಿ ಅವರು ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಈ ಬಾರಿ ಹುರುಪಿನಿಂದ

ಕುಂದಾಪುರ: ಅಡಿಕೆ ಕಳವು ಪ್ರಕರಣದ ಮೂವರ ಬಂಧನ

ಹಲವು ಕಡೆಗಳಲ್ಲಿ ನಡೆದ ಅಡಿಕೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾಪುರ ಗುಲ್ವಾಡಿ ಗ್ರಾಮದ ಅಮೀರ್ ಝೈನುದ್ದೀನ್ ಭಟ್ಕಳ ಬಿಳಲಖಂಡ ಗ್ರಾಮದ ಮುನಾವರ್,ಭಟ್ಕಳ ಉಸ್ಮಾನ್ ನಗರದ ನಿಸಾರ್ ಆಸೀಫ್ ಅನ್ನಾರ್ ಬಂಧಿತ ಆರೋಪಿಗಳು. ಇವರು ಶಂಕರನಾರಾಯಣ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿ ಎಂಬಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ

ಪ್ರಚಂಡ ಬಹುಮತದಿಂದ ಬಿ. ವೈ ರಾಘವೇಂದ್ರ ಗೆಲುವು ನಿಶ್ಚಿತ : ಶಾಸಕ ಗುರುರಾಜ್ ಗಂಟಿಹೊಳೆ ವಿಶ್ವಾಸ

ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ. ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ. ಸಂಘರ್ಷದ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಬೈಂದೂರು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಣ್ಣ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು ಒತ್ತಡ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಏವಿಯೇಷನ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಏವಿಯೇಷನ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದರು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ವಿಮಾನ ಹಾರಾಟ, ನಿಲ್ದಾಣದ ವೀಕ್ಷಣೆ, ಅಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಮಾಹಿತಿಯನ್ನು ಪಡೆದರು. ವಿದ್ಯಾರ್ಥಿಗಳೊಂದಿಗೆ , ಉಪನ್ಯಾಸಕಿಯರಾದ ಸವಿತಾ ಮತ್ತು ವೈಷ್ಣವಿ ಉಪಸ್ಥಿತರಿದ್ದರು.