Home Archive by category ಕರಾವಳಿ (Page 16)

ಮಂಗಳೂರು: ಮಹಾಶಕ್ತಿ ಕೇಂದ್ರದ ಬಿಜೆಪಿಯ ಪ್ರಮುಖರ ಸಭೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಶ್ಚಿಮ ಮಹಾಶಕ್ತಿ ಕೇಂದ್ರದ ಬಿಜೆಪಿಯ ಪ್ರಮುಖರ ಪೂರ್ವಭಾವಿ ಸಭೆಯು ಮಂಗಳಾದೇವಿ ದೇವಸ್ಥಾನದ ಬಳಿಯ ಶ್ರೀದೇವಿ ನಿಲಯದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ದೇಶ ಮೊದಲು ಎನ್ನುವ ಸಿದ್ಧಾಂತಕ್ಕೆ ತಕ್ಕಂತೆ ಸೈನ್ಯದಲ್ಲಿ ಸೇವೆ ಸಲ್ಲಿಸಿ, ಇದೀಗ

ಬಂಟ್ವಾಳ: V4 ನ್ಯೂಸ್‌ನ ವರದಿಗಾರ ಸಂದೀಪ್ ಸಾಲ್ಯಾನ್‌ಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆ ಪ್ರಯುಕ್ತ ಮಾ.24ರಂದು ಬಂಗ್ಲೆ ಮೈದಾನದಲ್ಲಿ ಜರುಗಲಿರುವ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ ನಡೆಯಲಿದೆ. V4 ನ್ಯೂಸ್ ಬಂಟ್ವಾಳ ವರದಿಗಾರ ಸಂದೀಪ್ ಸಾಲ್ಯಾನ್ ಮಾಧ್ಯಮ ಕ್ಷೇತ್ರದ ಸಾಧನೆಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಉದ್ಯಮಿ ಅಬ್ದುಲ್ ಕುಂಞ, ಮಾಜಿ ಸಚಿವ

“ ಮಾತು ನಿಲ್ಲಿಸಿದ ತುಳುವಿನ ವಿ. ಜಿ. ಪಾಲ್ ”

ತುಳುವಿನ ಹಿರಿಯ ರಂಗಕರ್ಮಿ ವಿ. ಜಿ. ಪಾಲ್ ನಿಧನ ರಾದರು. ಅವರ ಮೂಲ ಹೆಸರು ವೇಣುಗೋಪಾಲ ಟಿ. ಕೋಟ್ಯಾನ್ ಎಂದರೆ ಯಾರಿಗೂ ಈಗ ಗೊತ್ತಾಗಲಿಕ್ಕಿಲ್ಲ. ಸಾವಿರಾರು ತುಳು ರಂಗ ಲೋಕದವರಲ್ಲಿ ಪಾಲ್ ಹೆಸರು ಕೂಡ ಮುಖ್ಯವೇ ಆಗಿದೆ. ತೊಂಬತ್ತು ವರುಷಗಳ ತುಳು ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ವಿ. ಜಿ. ಪಾಲ್ ಅವರದೂ ಆಗಿತ್ತು. ನಾಟಕ ಎಂದ ಕೂಡಲೆ ಗ್ರೀಸ್ ದೇಶ ನೆನಪಾಗುತ್ತದೆ. ಅಧಿಕೃತವಾಗಿ ನಾಟಕ ಬರೆದು ಆಡಿ ತೋರಿಸಿದವರು ಅವರು. ತೆರೆದ ರಂಗ ಮಂದಿರ, ಮುಚ್ಚಿದ […]

ಮಂಗಳೂರು : ಮಾ.23ರಂದು ಬೋಳೂರಿನ ಪಾದೆಮನೆ ಶ್ರೀ ಕಲ್ಲುರ್ಟಿ ಕಲ್ಕುಡ ಆದಿ ದೈವಸ್ಥಾನ ದಲ್ಲಿ ವರ್ಷಾವಧಿ ನೇಮೋತ್ಸವ

ಮಂಗಳೂರಿನ ಬೋಳೂರಿನ ಪಾದೆಮನೆ ಶ್ರೀ ಕಲ್ಲುರ್ಟಿ-ಕಲ್ಕುಡ ಆದಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮಾರ್ಚ್ 23ರಂದು ಧಾರ್ಮಿಕ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಮಂಗಳೂರು ತಾಲೂಕಿನಲ್ಲಿ ಕಲ್ಲುರ್ಟಿ ದೈವಕ್ಕೆ ಆದಿ ಸ್ಥಳವಾದ ಪಾದೆಮನೆಯಲ್ಲಿ ದಿವಂಗತ ಸೋಮಪ್ಪ ಪೂಜಾರಿ ಅವರ ಮನೆಯಲ್ಲಿ ಉಗಣಬೈದೆದಿ ಕಾಲದಿಂದ ನಂಬಿಕೊಂಡ ಬಂದಂತಹ ಮಹಾ ಕಟಾಕ್ಷದ ಶ್ರೀ ಕಲ್ಲುರ್ಟಿ ಕಲ್ಕುಡ ಮತ್ತು ಗುಳಿಗ ಪಂಜಿರ್ಲಿ ಹಾಗೂ ರಾಹು ದೈವಗಳ ವರ್ಷಾವಧಿ ನೇಮೋತ್ಸವ

ಹಿರಿಯ ರಂಗಭೂಮಿ ಕಲಾವಿದ ವಿ.ಜಿ. ಪಾಲ್ ವಿಧಿವಶ

ಹಿರಿಯ ರಂಗಭೂಮಿ ಕಲಾವಿದ, ರಂಗಕರ್ಮಿ, ಸಂಘಟಕ ವಿ.ಜಿ. ಪಾಲ್‌ ವೇಣುಗೋಪಾಲ್‌ ಟಿ. ಕೋಟ್ಯಾನ್‌ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದ ಅವರು ಸ್ವಲ್ಪ ಕಾಲ ಮುಂಬಯಿಯಲ್ಲಿ, ಬಳಿಕ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. 1961ರಲ್ಲಿ “ಕಲ್ಜಿಗದ ಕುರುಕ್ಷೇತ್ರ’ ತುಳುನಾಟಕದ ಮೂಲಕ ಮೊದಲ ರಂಗಪ್ರವೇಶ

ಮೂಡುಬಿದಿರೆ : ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ ಪ್ರಭಾವತಿ ಆಚಾರ್ಯ ನಿಧನ

ಮೂಡುಬಿದಿರೆ : ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪುತ್ತಿಗೆಮನೆ ಎಂ. ಗೋಪಾಲ ಆಚಾರ್ಯರ ಪತ್ನಿ ಪ್ರಭಾವತಿ ಜಿ. ಆಚಾರ್ಯ (75) ಅವರು ಬುಧವಾರ ಮುಂಜಾನೆ ನಿಧನ ಹೊಂದಿದರು.ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನಲ್ಲಿ ಸಕ್ರಿಯರಾಗಿದ್ದಾಗ ಪಲ್ಸ್ ಪೋಲಿಯೋ ಕುರಿತಾದ ಪ್ರಹಸನ ಸಹಿತ ಮನೆ ಮನೆಗೆ ಮಾಹಿತಿ ನೀಡುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಆನೆಗುಡ್ಡೆ ಚರ್ಚ್ ನಲ್ಲಿ ನಡೆದ

ದಿಲ್ಲಿಯ ವಾಯು ಮಾಲಿನ್ಯ ಮತ್ತು ರಾಜಕೀಯ ಕೊಳೆ

ದಿಲ್ಲಿಯ ಗಾಳಿಯ ಗುಣಮಟ್ಟವು ಅತಿ ಕೆಟ್ಟದಾಗಿ ಬದಲಾಗುತ್ತ ಸಾಗಿದೆ. ಅತಿಯಾದ ವಾಹನ ದಟ್ಟಣೆ ಮತ್ತು ಅಂಗಾರಾಮ್ಲ ಹೊರ ಸೂಸುವಿಕೆಯೆ ಇದಕ್ಕೆ ಕಾರಣ ಎನ್ನಲಾಗಿದೆ. ಭಾರತದ ರಾಜಧಾನಿಯ ಗಾಳಿ ಒಂದೇ ಅಲ್ಲ ರಾಜಕೀಯ ಗಾಳಿಯೂ ಕೆಟ್ಟು ಕೂತಿದೆ ಎನ್ನುವವರಿದ್ದಾರೆ. ರಾಜಕೀಯ ಗಾಳಿ ಕೆಟಿದ್ದರೆ ಅದನ್ನು ಸರಿ ಪಡಿಸಲು ಮತದಾರರಿಗೆ ಅವಕಾಶವಿದೆ. ಮತ ಯಂತ್ರ ಸಂಚು ಮಾಡಿದರೆ ಕಷ್ಟ. ಮತಯಂತ್ರವನ್ನೂ ರಿಪೇರಿ ಮಾಡಬೇಕಾದ ಅನಿವಾರ್ಯತೆ ಜನರಿಗಿದೆ. ಅದಕ್ಕಿಂತ ಮುಖ್ಯವಾಗಿ ಬೆಂಗಳೂರಿನ

ಪಡುಬಿದ್ರಿಯಲ್ಲಿ ಆತಂಕ ಸೃಷ್ಟಿಸಿದ ಬೆಂಕಿ ಅನಾಹುತ

ದೇವಳದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕೆಲಲ್ಲಿ ಬೃಹತ್ತಾಗಿ ಕಾಣಿಸಿಕೊಂಡ ಬೆಂಕಿ ಕೆಲ ಹೊತ್ತು ಆತಂಕ ಸೃಷ್ಟಿಸಿದೆ. ಜಿಯೋ ನೆಟ್‌ವರ್ಕ್ ಕಂಪನಿಯು ಬಳಕೆ ಮಾಡಿ ಹೆಚ್ಚುವರಿಯಾದ ಕೇಬಲ್ ಬಂಡಲನ್ನು ರಸ್ತೆಯಂಚಿನಲ್ಲಿ ಉಳಿಸಿ ಹೋಗಿದ್ದು, ಆ ಕೇಬಲ್ ರಾಶಿಗೆ ಬೆಂಕಿ ತಗುಲಿ ಪರಿಸವೆಲ್ಲಾ ಪಸರಿಸಿದೆ. ತೀರ ಸಮೀಪದಲ್ಲೇ ವಾಸದ ಮನೆಗಳಿದ್ದು ಆತಂಕ ಸೃಷ್ಟಿಯಾಗಿದ್ದು, ಪಡುಬಿದ್ರಿ ಪೊಲೀಸರು, ಗ್ರಾ.ಪಂ. ಪ್ರತಿನಿಧಿಗಳು, ಹೆಜಮಾಡಿ ಟೋಲ್ ಸಿಬ್ಬಂದಿಗಳು ಹಾಗೂ

ಉಳ್ಳಾಲ : ಲಾರಿ ನಂಬರ್ ಪ್ಲೇಟ್ ಗ್ರೀಸ್ ಹಚ್ಚಿ ಮರಳು ಸಾಗಾಟ

ಮಂಗಳೂರು : ಲಾರಿಗಳ ನಂಬರ್ ಪ್ಲೇಟ್‌ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಬಳಸಿ ಮರೆಮಾಚಿಸಿ ರಾತ್ರಿಯಿಡೀ ವ್ಯಾಪಕವಾಗಿ ಮರಳು ಸಾಗಾಟವನ್ನು ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಪೊಲೀಸರ ಸಮ್ಮುಖದಲ್ಲೇ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನಿನ್ನೆ ತಡರಾತ್ರಿ ಅಡ್ಯಾರ್ ಕಣ್ಣೂರು ಸಮೀಪ ನಂಬರ್ ಪ್ಲೇಟ್ ಮಾಸಿದ ಮರಳು ಸಾಗಾಟದ ಲಾರಿ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರು ಲಾರಿಗಳನ್ನು ತಡೆಹಿಡಿದು ನಡೆಸಿದ

ಮೂಡಬಿದಿರೆ : ಮಾ. 23ರಂದು ದೊಡ್ಡಮನೆ ರಸ್ತೆಯಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಸಾರ್ವಜನಿಕ ಶ್ರೀ ಶನಿಪೂಜಾ ಸಮಿತಿ ದೊಡ್ಡಮನೆ ರಸ್ತೆ ಮೂಡಬಿದಿರೆ ಇದರ ಆಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಮಾರ್ಚ್ 23ರಂದು ದೊಡ್ಡಮನೆ ರಸ್ತೆಯ ಅಶ್ವತ್ಥಕಟ್ಟೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಮಾರೂರು ಖಂಡಿಗ ಶ್ರೀಯುತ ರಾಮದಾಸ ಅಸ್ರಣ್ಣ ಅವರ ನೇತೃತ್ವದಲ್ಲಿ ಶನಿಪೂಜೆಯು ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಕಟ್ಟೆಯಲ್ಲಿ ನಾಗಬನಕ್ಕೆ ನಾಗತಂಬಿಲ, ಸಂಜೆ 6 ಗಂಟೆಗೆ ಕಲಶ ಪ್ರತಿಷ್ಠೆ, ಸಂಜೆ 6.30ಕ್ಕೆ ಶನಿಪೂಜೆ ಪ್ರಾರಂಭ, ರಾತ್ರಿ