Home Archive by category ಕರಾವಳಿ (Page 23)

ಬಂಟ್ವಾಳ: ನಾಯರ್ಕುಮೇರು ಪಿಲಿಚಾಂಡಿಗೋಳಿಯಲ್ಲಿ ದೊಂಪದಬಲಿ ನೇಮೋತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಿಲಿಚಾಂಡಿಗೋಳಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಗಡಿಪಾಡಿ ಸ್ಥಳದಲ್ಲಿ ದೊಂಪದ ಬಲಿ ನೇಮೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಪುಣ್ಯಾಹವಾಚನ, ಗಣಪತಿಹೋಮ, ಕಲಶಾರಾಧನೆ, ಪ್ರಧಾನ ಹೋಮ, ದೈವಗಳ ಪೀಠ ಸ್ಥಾಪನೆ, ಕಲಶಾಭಿಷೇಕ, ನಾಯರ್ಕುಮೇರು ಗುತ್ತಿನಿಂದ ಭಂಡಾರ ಬಂದು ಪಂಚ ಪರ್ವ, ಪ್ರಸಾದ ವಿತರಣೆ, ಲಘು

ಮಂಗಳೂರು ಡೆಡ್ ಸಿಟಿಯಾಗಿದೆ-ಜಿಲ್ಲೆಯ ಅಭಿವೃದ್ಧಿಗೆ ಹೊಸ ಅಲೋಚನೆ ಇದೆ -ಡಿಸಿಎಂ ಡಿಕೆಶಿ

ಮಂಗಳೂರು ಸಂಜೆ ಏಳು ಗಂಟೆಯ ನಂತರ ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಇಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಅವರು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಮೈದಾನದ ಬಳಿ ಮಾತನಾಡಿದರು. ಇಲ್ಲಿನ

ಉಳ್ಳಾಲ: ಗಾಂಜಾ ಮತ್ತಿನಲ್ಲಿ ದಾಂಧಲೆ: ಸಾರ್ವಜನಿಕರಿಂದ ತರಾಟೆ, ಪೊಲೀಸರಿಂದ ಬಂಧನ

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದು ದಾಂಧಲೆ ನಡೆಸಿದ್ದು, ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದಿದ್ದಾನೆ. ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ ಮದ್ಯಾಹ್ನದ ವೇಳೆ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ

ಉಳ್ಳಾಲ: ಯುವಕನ ಕೊಲೆಯತ್ನ : ಆರೋಪಿ ಬಂಧನ

ಉಳ್ಳಾಲ: ಬೈಕಲ್ಲಿ ಚಲಿಸುತ್ತಿದ್ದ ಯುವಕನ ತಡೆದು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ರಾ.ಹೆ.66 ರ ಕೊಲ್ಯ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಕುಂಪಲ ನಿವಾಸಿ ಮಹಮ್ಮದ್ ಆರೀಫ್(29)ಇರಿತಕ್ಕೊಳಗಾದ ಯುವಕ.ಆರೀಫ್ ಶುಕ್ರವಾರ ಬೆಳಿಗ್ಗೆ ಕೊಲ್ಯದಿಂದ-ಕುಂಪಲದ ಕಡೆಗೆ ಹೆದ್ದಾರಿಯಲ್ಲಿ ವಿರುದ್ಧ ಧಿಕ್ಕಲ್ಲಿ ಸಂಚರಿಸುತ್ತಿದ್ದ ವೇಳೆ ಕುಂಪಲದಿಂದ-ಕೊಲ್ಯ ಕಡೆಗೆ ಬೈಕಿನಲ್ಲಿ

ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆಯೇರಿಕೆ ಇಳಿಸಲು,ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು,ಉದ್ಯೋಗ ಸ್ರಷ್ಠಿಸಲು ಆಗ್ರಹಿಸಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತ – ಕಾರ್ಮಿಕ – ಕ್ರಷಿ ಕೂಲಿಕಾರರಿಂದ ಇಂದು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CITU ಜಿಲ್ಲಾಧ್ಯಕ್ಷರಾದ

ಬಂಟ್ವಾಳ: ಕೊರಂಟಬೆಟ್ಟುಗುತ್ತಿನಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವೈಭವಯುತವಾಗಿ ಸಂಪನ್ನಗೊಂಡಿತು. ಬ್ರಹ್ಮ ಬೈದರ್ಕಳ ಜಾತ್ರೆಯಂದು ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳ ಪಾತ್ರಿಗಳು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಬಂದು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು,

ಕರಾವಳಿಗೆ ಭರಪೂರ ಕೊಡುಗೆ: ಮಂಜುನಾಥ ಭಂಡಾರಿ

ಮಂಗಳೂರು: ರಾಜ್ಯ ಸರಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಅಯವ್ಯಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ 3ಸಾವಿರ

ರಾಜ್ಯದ ಆರ್ಥಿಕತೆಗೆ ಚೈತನ್ಯ: ಹರೀಶ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಶಕೆಯೇ ಆರಂಭವಾಗಿದೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಆರ್ಥಿಕತೆಗೆ ಚೈತನ್ಯ ತುಂಬಿದೆ ಎಂದು ವಿಧಾನ ಪರಿಷತ್‌ನ ಸದಸ್ಯರೂ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು. ಅವರು ರಾಜ್ಯ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಜನಸಾಮಾನ್ಯರು, ಮಧ್ಯಮ ವರ್ಗದವರ ಆರ್ಥಿಕತೆಗೆ ಚೈತನ್ಯ ನೀಡಿದ್ದು,

ಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರಿ ದೇವಳದಲ್ಲಿ ಬ್ರಹ್ಮಕಲಶೋತ್ಸವ

ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿದ್ದು, ಇದರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಫೆಬ್ರವರಿ 16ರಿಂದ ಆರಂಭಗೊಂಡು 24ರವರೆಗೆ ನಡೆಯಲಿದ್ದು, ಶುಕ್ರವಾರ ಸಂಜೆ 4.30ರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.ಅವರು ಬಂಟ್ವಾಳ ಪ್ರೆಸ್‌ಕ್ಲಬ್ ನಲ್ಲಿ

ಕಾಪು: ಇನ್ನಂಜೆ ದೇವಳದ ಕೆರೆಯಲ್ಲಿ ಯುವಕನ ಶವ ಪತ್ತೆ

ಕಾಪು ಸಮೀಪದ ಇನ್ನಂಜೆ ವಿಷ್ಣುಮೂರ್ತಿ ದೇವಸ್ಥಾನ ಕೆರೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಪಡುಬಿದ್ರಿ ನಿವಾಸಿ ವಿನಯ ರಾವ್(27) ಆತ್ಮಹತ್ಯೆ ಮಾಡಿಕೊಂಡ ಯುವಕ, ಈತ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತ ನಿನ್ನೆಯ ದಿನ ದೇವಳದ ಪಕ್ಕದಲ್ಲಿ ಸುತ್ತಾಡಿಕೊಂಡಿದ್ದು ಸ್ಥಳೀಯ ನಾಯಿಯೊಂದಿಗೆ ಆಟವಾಡಿಕೊಂಡಿದ್ದ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.