Home Archive by category ಕರಾವಳಿ (Page 25)

ಪುತ್ತೂರು : ಬೈಕ್ ಹಾಗೂ ಮಿನಿ ಗೂಡ್ಸ್ ವಾಹನ ಡಿಕ್ಕಿ : ಬೈಕ್ ಸವಾರ ಸಾವು

ರಾಮಕುಂಜ: ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ಮಾ.4ರಂದು ರಾತ್ರಿ ನಡೆದಿದೆ. ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ

ಮೂಡುಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ ಡಾ. ಎಂ.ವಿದ್ಯಾಧರ ಶೆಟ್ಟಿ ನಿಧನ

ಮೂಡು ಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ, ವೈದ್ಯರಾಗಿ ಐದು ದಶಕಗಳ ಸೇವೆ ಸಲ್ಲಿಸಿದ್ದ ಮೂಡುಬಿದಿರೆ ಮೂಲದ ಡಾ. ಎಂ. ವಿದ್ಯಾಧರ ಶೆಟ್ಟಿ (76 ವ) ಶನಿವಾರ ಮುಂಜಾವ ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ಧಾರೆ. ಮಂಗಳೂರಿನ ವಿಜಯಾ ಕ್ಲೀನಿಕ್ ಬಳಿಕ ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ಮುಖ್ಯ ಅಧೀಕ್ಷಕ ವೈದ್ಯರಾಗಿದ್ದ ಅವರು ಮಂಗಳೂರ ಬಳಿಕ ಮೂಡುಬಿದಿರೆಯಲ್ಲೂ ರೋಟರಿ ಕ್ಲಬ್ ವಿವಿಧ ಹುದ್ದೆಗಳಲ್ಲಿದ್ದು ಬಳಿ

ಮೂಡುಬಿದಿರೆ: ಡಾ. ಪಿ.ಜಿ.ಬಿ. ಆಳ್ವ ನಿಧನ

ಮೂಡುಬಿದಿರೆ: ಹಿರಿಯ ದಂತವೈದ್ಯ ಡಾ.ಪೆರುವಾಯಿ ಗುತ್ತು ಬಾಲಕೃಷ್ಣ ಆಳ್ವ( 72) ಅಲ್ಪಕಾಲದ ಅಸ್ವಾಸ್ಥ್ಯದಿಂದ ಬೆಂಗಳೂರಿನ ತನ್ನ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಮಾ 3ರಂದು ನಿಧನ ಹೊಂದಿದರು.ಅವರು ಪತ್ನಿ ,ಪುತ್ರ ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯ ಅರಿವಳಿಕೆ , ತೀವ್ರನಿಗಾ ತಜ್ಞ , ಮುಖ್ಯಸ್ಥ ಡಾ.ಅರ್ಜುನ್ ಆಳ್ವ ಸಹಿತ ಬಂಧು ವರ್ಗವನ್ನು ಅಗಲಿದ್ದಾರೆ.ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ದಂತವೈದ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳಿಂದ ಮನೆಯೊಂದಕ್ಕೆ ದಾಳಿ

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದೆ.

ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಬ್ರಹ್ಮಾವರದ ನದಿ ತೀರದ ಸರಕಾರಿ ಜಾಗದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಮೂಡುಹೋಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬ್ರಹ್ಮಾವರ ತಾಲೂಕು ಸೌಧದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅದೇ ಜಾಗದ ಬಳಿ ನೂರಾರು ಎಕ್ರೆ ಕೃಷಿ ಭೂಮಿ ಜಲಾವೃತವಾಗುವ ಭೀತಿ ಎದುರಾಗಿದ್ದು, ಮತ್ತು ಅಲ್ಲಿನ ಪರಿಸರದ ಜನರು ಗೋಮಾಳದಲ್ಲಿ ಹಸುಗಳನ್ನು ಮೇಯಲು ಬಿಟ್ಟಾಗ ಮರಳುಗಾರಿಕೆ ಮಾಡುವವರು ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನೆಗೆ ಬಂದ

ನೀರುಗೋರಿ ಮತ್ತು ನೀರಲ್ಲಿ ನಗರ ಗೋರಿ || V4NEWS

ಹಳೆಯಂಗಡಿ ಬಳಿ ನದಿಯಲ್ಲಿ ವಿದ್ಯಾರ್ಥಿಗಳ ಶವ. ಪಣಂಬೂರು ಬೀಚ್‍ನಲ್ಲಿ ಕಡಲಿಗೆ ಕಂತಿನಲ್ಲಿ ಆಹಾರವಾದವರ ಸುದ್ದಿ. ಇವೆಲ್ಲ ಉಪ್ಪು ನೀರಿಗೆ ಬಲಿಯಾದವರ ಸುದ್ದಿ. ಜಗತ್ತಿನ 71 ಶೇಕಡಾ ಪ್ರದೇಶವನ್ನು ಕಡಲು, ಮಹಾಕಡಲುಗಳು ಆವರಿಸಿಕೊಂಡಿವೆ. ಇದರಲ್ಲಿ ಜಗತ್ತಿನ 97.2 ಶೇಕಡಾ ನೀರು ಇದೆ. ಇದೆಲ್ಲ ಉಪ್ಪು ನೀರು. ಅಷ್ಟೇ ಅಲ್ಲ ಮಳೆಗಾಲ ಮುಗಿದ ಬಳಿಕ ಬೇಗನೆ ಉಬ್ಬರದ ಕಾರಣಕ್ಕೆ ಕಡಲ ನೀರು ನದಿಗೆ ನುಗ್ಗುತ್ತವೆ. ಹಾಗಾಗಿ ಕಡಲ ಕಡೆಯಿಂದ ನದಿಯಲ್ಲು ಕೆಲವು ಕಿಮೀವರೆಗೆ ಉಪ್ಪು

ಉಳ್ಳಾಲ: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಗೆ ಹುಟ್ಟೂರ ಸನ್ಮಾನ

ದೇರಳಕಟ್ಟೆ : ಹುಟ್ಟೂರ ಅಭಿನಂದನಾ ಸಮಿತಿ ಉಳ್ಳಾಲ ತಾಲೂಕು ಇದರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಇಲ್ಲದೆ ದೇಶದ ಆಡಳಿತ ನಡೆಯಲು ಸಾಧ್ಯವಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಕಾರ್ಯಾಂಗದ

ವಿಶ್ವ ಶ್ರವಣ ದಿನ ಮಾರ್ಚ್-3

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಮಾರ್ಚ್ 3 ರಂದು ಕಿವಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶ್ರವಣ ದೋಷಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಶ್ರವಣ ದಿನ ಎಂದು ವಿಶ್ವದಾದ್ಯಂತ ಆಚರಿಸುತ್ತಾರೆ. 2023ನೇ ಇಸವಿಯ ಘೋಷ ವಾಕ್ಯ “ಕಿವಿ ಮತ್ತು ಶ್ರವಣದ ಬಗ್ಗೆ ಕಾಳಜಿ ಹಾಗೂ ಆರೈಕೆ ನಿಜವಾಗಿಸೋಣ” ಎಂಬುದಾಗಿದೆ. ಪಂಚೇಂದ್ರಿಯಗಳಾದ ಕಣ್ಣು, ಮೂಗು, ಕಿವಿ, ನಾಲಗೆ ಹಾಗೂ ಚರ್ಮಗಳಲ್ಲಿ ಎಲ್ಲದಕ್ಕೂ ಸಮಾನ ಪ್ರಾಮುಖ್ಯತೆ ಇದೆ. ಆದರೆ ಇವುಗಳಲ್ಲಿ ಕಿವಿ ಹೊರತುಪಡಿಸಿ

ಏನಿದು ಪೊಲಿಯೋ ರೋಗ.

ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ” ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್ ಸಾಲ್ ಅವರ ಹುಟ್ಟಿದ ದಿನವನ್ನು ಅವರ ನೆನಪಿಗಾಗಿ ಪೊಲಿಯೋ ದಿನ ಎಂದು ಆಚರಿಸಲಾಗುತ್ತಿದೆ. 1955 ರಲ್ಲಿ

ಸಾಹಿತಿ ರಾಧಾಕೃಷ್ಣ ಸೇರಿ ಮೂವರಿಗೆ ಗಡಿನಾಡ ಚೇತನ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಕೇರಳದ ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಸೇರಿ ಮೂವರು ಆಯ್ಕೆಯಾಗಿದ್ದಾರೆ. ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ರಾಧಾಕೃಷ್ಣ, ‘ಜಯದೇವಿತಾಯಿ ಲಿಗಾಡೆ’ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಗೆ ಬೀದರ್‌ನ ಕನ್ನಡ ಪರ ಹೋರಾಟಗಾರ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ‘ಕಯ್ಯಾರ ಕಿಞ್ಞಣ್ಣ ರೈ’ ಅವರ