Home Archive by category ಕರಾವಳಿ (Page 32)

14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ

ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ

ಅಗ್ನಿಪಥದಲ್ಲಿ ನಿರುದ್ಯೋಗ ನಿವಾರಣೆ ಸಾಧ್ಯವಿಲ್ಲ

ನಿರುದ್ಯೋಗ ನಿವಾರಿಸದ, ಸೈನಿಕರನ್ನು ತಯಾರಿಸದ ಅಗ್ನಿಪಥ ಯೋಜನೆಯನ್ನು ಇಂಡಿಯಾ ಮೈತ್ರಿಕೂಟ ಗೆದ್ದು ರದ್ದು ಮಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಅವರು ಸೇನಾಧ್ಯಕ್ಷರೂ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆದಿದ್ದಾರೆ. ಅಗ್ನಿಪಥ ಯೋಜನೆಯ ನಿಸ್ಸಾರವನ್ನು, ಅನನುಕೂಲವನ್ನು ಅವರು ಅದರಲ್ಲಿ ವಿವರಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು 2024ರ ಲೋಕಸಭಾ

ಬಂಟ್ವಾಳ: ರಾಷ್ಟ್ರಪತಿಯನ್ನು ಭೇಟಿಯಾಗಲಿರುವ 4 ಆದಿವಾಸಿ ಮಹಿಳೆಯರು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ಇದೀಗ ದೆಹಲಿಯ ವಿಮಾನವೇರುವ ಭಾಗ್ಯ ಒದಗಿಬಂದಿದೆ. ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಾಗಿದ್ದು, ಸಂಜೀವಿನೀ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾರ್ಚ್ 1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ

ಪ್ರಕಾಶ್ ಕೆ ತೂಮಿನಾಡು ಅವರಿಗೆ ಮಾತೃ ವಿಯೋಗ

ಮಂಜೇಶ್ವರ: ಕನ್ನಡ ಮತ್ತು ತುಳು ಚಿತ್ರರಂಗದ ಪ್ರಖ್ಯಾತ ಪೋಷಕ ಮತ್ತು ಹಾಸ್ಯ ನಟರಾದ ಪ್ರಕಾಶ್ ಕೆ. ತೂಮಿನಾಡು ಅವರ ಮಾತೃಶ್ರೀಯವರಾದ ಗಿರಿಜಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ವಿಧಿ ವಿಧಾನಗಳು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ತೂಮಿನಾಡು ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಅಮೃತ ಸದೃಶ ಎಳನೀರು

ನೈಸರ್ಗಿಕವಾಗಿ ದೊರಕುವ, ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಿ, ಮನಸ್ಸಿಗೆ ಉಲ್ಲಾಸ ನೀಡುವಅತೀ ಉತ್ತಮ ಪೇಯವೆಂದರೆ ಅದು ಎಳನೀರು ಎಂದರೆ ಅತಿಶಯೋಕ್ತಿಯಾಗಲಾರದು. ಬಹಳ ಸುಲಭವಾಗಿ ಹಳ್ಳಿ, ನಗರ, ಪೇಟೆ, ಊರು, ಕೇರಿ ಹೀಗೆ ಎಲ್ಲೆಡೆ ಅತೀ ಕಡಿಮೆ ದರಕ್ಕೆ ದೊರಕುವ ಈ ನೈಸರ್ಗಿಕ ಪೇಯವನ್ನು ಅಮೃತ ಸದೃಶ ಪೇಯ ಎಂದೂ ಕರೆಯಲಾಗುತ್ತದೆ. ಇದರಲ್ಲಿ ದೊರಕುವ ವಿಟಮಿನ್, ಖನಿಜಾಂಶ, ಪೋಷಕಾಂಶ ಮತ್ತು ಇತರ ಸಮೃದ್ಧವಾದ ಸೋಡಿಯಂ, ಪೊಟಾಷಿಯಂ ಮುಂತಾದ ಲವಣಗಳಿಂದಾಗಿ,

ಬೆತ್ತದ ಬುಡಕಟ್ಟು ಗಜಮೇಳ || V4NEWS

ಬೆಂಗಳೂರಿನಲ್ಲಿ ಲಂಟಾನದಿಂದ ಮಾಡಿದ ಆನೆಗಳು ಈಗ ನೂರಾರು ಸಂಖ್ಯೆಯಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್, ವಿಧಾನ ಸೌಧ ಎಂದು ನಾನಾ ಕಡೆಗಳಲ್ಲಿ ಲಗ್ಗೆ ಇಟ್ಟಿವೆ; ದಾಳಿ ಮಾಡಿವೆ. ಇವು ಬೆಂಗಳೂರಿನ ಅಂಚಿನ ಆನೆಕಲ್ ತಾಲೂಕು, ಕನಕಪುರ ರಸ್ತೆಗಳಲ್ಲಿ ಕಾಣಿಸುವ ನಿಜ ಆನೆಗಳಲ್ಲ. ಇವೆಲ್ಲ ಲಂಟಾನದಿಂದ ತಯಾರಿಸಿದ ಆನೆಗಳಾಗಿವೆ. ಕರ್ನಾಟಕ, ತಮಿಳುನಾಡು, ಕೇರಳದ 150ಕ್ಕೂ ಹೆಚ್ಚು ಬಡಕಟ್ಟು ಜನರು ಲಂಟಾನ ಬಳಸಿ ಈ ನಿಜ ಆನೆ ಗಾತ್ರದ ಆನೆಗಳನ್ನು ನಿರ್ಮಿಸಿದ್ದಾರೆ. ಪರಿಸರ

ಭಾರತದ ಎರಡನೆಯ ಆಸ್ತಿವಂತ ಸಿಬಿಸಿಐ|| #v4news

ಇತ್ತೀಚೆಗೆ ಸೋನಿಯಾ ಗಾಂಧಿಯವರು ಕೊಟ್ಟ ಪ್ರಮಾಣಪತ್ರದಲ್ಲಿ ಒಂದಷ್ಟು ಹೂಡಿಕೆ, ಆಭರಣ, ಉಳಿತಾಯ ನನ್ನದೇ ಇದ್ದರೂ ಭಾರತದಲ್ಲಿ ನನಗೆ ಸ್ವಂತ ಮನೆಯಾಗಲಿ, ಸ್ವಂತ ಕಾರು ಇಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಟೆಲಿಯಲ್ಲಿ ಅವರ ಹಿರಿಯರಿಂದ ಬಂದ ಒಂದು ಮನೆ ಇದೆಯಂತೆ. ಇನ್ನೊಂದು ವಿಷಯವೆಂದರೆ ಭಾರತದಲ್ಲಿ ಭಾರತ ಸರಕಾರದ ಬಳಿಕ ಅತಿ ಹೆಚ್ಚು ಆಸ್ತಿ ಹೊಂದಿರುವ ಸಿಬಿಸಿಐಗೆ ರೋಮ್ ಸಾಮ್ರಾಜ್ಯದ ಒಡೆತನದ ಮುದ್ರೆ ಇದೆ. ಈಗ ಎಲ್ಲ ಕಡೆ ಆಸ್ತಿ ಹೊಂದಿರುವವರು ಮತ್ತು ಆಸ್ತಿ

ಟಿವಿ ನಿರೂಪಕನನ್ನು ಅಪಹರಿಸಿದ ತರುಣಿ

ಮದುವೆ ಪ್ರಸ್ತಾಪ ತಿರಸ್ಕರಿಸಿದ ಟಿವಿ ನಿರೂಪಕನನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಮಹಿಳಾ ಉದ್ಯಮಿ ಒಬ್ಬರು ಈಗ ಪೋಲೀಸು ಕಸ್ಟಡಿ ಸೇರಿರುವ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ.ಬಂಧಿತ ಯುವತಿ ಭೋಗಿರೆಡ್ಡಿ ತ್ರಿಶಾ. ಈಕೆ ಐದು ಸ್ಟಾರ್ಟಪ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದಾರೆ. ಮ್ಯಾಟ್ರಿಮೊನಿ ಜಾಲ ತಾಣದ ಮೂಲಕ ಟಿವಿ ಸಂಗೀತ ಚಾನಲ್ ಒಂದರ ನಿರೂಪಕ ಪ್ಣವ್ ಪ್ರೊಫೈಲ್ ನೋಡಿ ಆತನಲ್ಲಿ ತ್ರಿಶಾ ಮದುವೆಯ ಪ್ರಸ್ತಾಪ ಮಾಡಿದ್ದಾಳೆ. ಆದರೆ ಆತ ಮದುವೆಗೆ

ಉಳ್ಳಾಲ: ಗಾಂಜಾ ಮಾರಾಟ ಯತ್ನ, ಓರ್ವನ ಬಂಧನ

ಉಳ್ಳಾಲ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಎಸಿಪಿ ನೇತೃತ್ವದ ಮಾದಕ ದ್ರವ್ಯ ವಿರೋಧಿ ತಂಡ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ಖಾಲಿ ಜಾಗದಿಂದ ಬಂಧಿಸಲಾಗಿದೆ.ಕೋಟೆಕಾರು ಬೀರಿ ನಿವಾಸಿ ಮಹಮ್ಮದ್ ಇರ್ಫಾನ್ (22) ಬಂಧಿತ.ಬಂಧಿತನಿಂದ ರೂ. 9,660 ಬೆಲೆಯ 322 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಯಾಚರಣೆಯಲ್ಲಿ ಎಸಿಪಿ ಧನ್ಯಾ ನಾಯಕ್, ಕೊಣಾಜೆ ಠಾಣಾ ಉಪನಿರೀಕ್ಷಕ ನಾಗರಾಜ್ ಹಾಗೂ

ಅಯೋಧ್ಯೆಯಲ್ಲಿ ಪಲ್ಲಕಿ ಸೇವೆಗೈದ ಮೂಡುವೇಣುಪುರದೊಡೆಯನ ಸೇವಕರು

ಮೂಡುಬಿದಿರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲ ಪೂಜೆ ಮತ್ತು ಉತ್ಸವದಲ್ಲಿ, ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಸ್ವಯಂಸೇವಕರ ತಂಡ ನಿರಂತರ 3 ದಿನಗಳ ಕಾಲ ಪಲ್ಲಕ್ಕಿ ಹೊರುವ ಸೇವೆಯಲ್ಲಿ ಪಾಲ್ಗೊಂಡರು. ಮದ್ವ ನವಮಿ ಶುಭ ಸಂದರ್ಭದಲ್ಲಿ ಮೂಲ ಮೂರ್ತಿ ಶ್ರೀ ಬಾಲ ರಾಮನಿಗೆ ಭೋಗ ನೈವೇದ್ಯವನ್ನು ನೀಡುವ ಅವಕಾಶವನ್ನೂ ಪಡೆದು