Home Archive by category ಕರಾವಳಿ (Page 35)

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚದ ಪದಗ್ರಹಣ ಸಮಾರಂಭ

ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚದ ಪದಗ್ರಹಣ ಸಮಾರಂಭ ಬೆಂಗಳೂರಿನ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಜರಗಿತು.ನೂತನ ಪದಾಧಿಕಾರಿಗಳಿಗೆ ನೂತನ ಜವಾಬ್ದಾರಿಗಳ ಘೋಷಣಾ ಪತ್ರವನ್ನು ಓಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ರಘು ಕೌಟಿಲ್ಯ ನೀಡಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಆರ್ ಸಿ ನಾರಾಯಣ್ ಇವರಿಗೂ ಜವಾಬ್ದಾರಿಯ ಘೋಷಣಾ ಪತ್ರವನ್ನು ನೀಡಿದರು.ಈ

ಶಿಬರೂರು: “ಬಾಲೆಗ್ ಒಲಿಯಿನ ಭ್ರಾಮರಿ” ತುಳು ನಾಟಕಕ್ಕೆ ಮುಹೂರ್ತ

ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪರಮಾನಂದ ಸಾಲ್ಯಾನ್ ರಚಿಸಿ ನಿರ್ದೇಶಿಸಿರುವ “ಬಾಲೆಗ್ ಒಲಿಯಿನ ಭ್ರಾಮರಿ” ತುಳು ಭಕ್ತಿಪ್ರಧಾನ ನಾಟಕದ ಮುಹೂರ್ತ ಸಮಾರಂಭವು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತದಲ್ಲಿ ನಡೆಯಿತು.ಶುಭಮುಹೂರ್ತಕ್ಕೆ ಶಿಬರೂರು ಗುತ್ತು ಉಮೇಶ್ ಎನ್ ಶೆಟ್ಟಿ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವದ

ಮೂಡುಬಿದಿರೆ: ಬೈಲ ಕುರಲ್ ಖ್ಯಾತಿಯ “ಭಾಷಾ” ಇನ್ನಿಲ್ಲ

ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ಬೈರ ಕುರಲ್ ಖ್ಯಾತಿಯ “ಭಾಷಾ” ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿ ಅವರ ಪುತ್ರ ವಸಂತ ಶೆಟ್ಟಿ(52) ಕಳೆದ ಮೂರು ವರುಷಗಳಿಂದ ಅನಾರೋಗ್ಯವನ್ನು ಹೊಂದಿದ್ದರು.ಸುರೇಂದ್ರ ಕುಮಾರ್ ಕಲತ್ರಪಾದೆ ಅವರ ರಚನೆಯ ಅತ್ಯುತ್ತಮ ನಾಟಕ ಬೈರ ಕುರಲ್ ನಲ್ಲಿ

ಪಡುಬಿದ್ರಿ : ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಈಚರ್ ಟಿಪ್ಪರೊಂದನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮುಂಜಾನೆ ಹೆದ್ದಾರಿಯಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಪಡುಬಿದ್ರಿ ಪೊಲೀಸರು ಟಿಪ್ಪರ್ ವೊಂದನ್ನು ನಿಲ್ಲಿಸಲು ಸೂಚನೆ ನೀಡಿದರೂ ಉಡುಪಿ ಕಡೆಗೆ ವೇಗವಾಗಿ ಪರಾರಿಯಾಗಲು ಯತ್ನಿಸಿದ ಕೆ.ಎ.20-ಬಿ 1146 ನೋಂದಾಯಿತ ಸಂಖ್ಯೆಯ ಟಿಪ್ಪರನ್ನು ಬೆನ್ನಟ್ಟಿದಾಗ ಅದರ ಚಾಲಕ ಟಿಪ್ಪರನ್ನು ಎರ್ಮಾಳು ಸೇತುವೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ, ಟಿಪ್ಪರನ್ನು

ಮೂಡುಬಿದ್ರಿ : ಬಂಟರ ಸಂಘ ಮಹಿಳಾ ಘಟಕದ ಪ್ರಥಮ ವಾರ್ಷಿಕೋತ್ಸವ

ಬಂಟರ ಸಂಘ ಮಹಿಳಾ ಘಟಕ ಮೂಡುಬಿದ್ರಿ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣ ವಿದ್ಯಾಗಿರಿ ಮೂಡುಬಿದ್ರಿ ಇಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೆಗ್ಡೆ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮೂಡುಬಿದರೆ (ರಿ) ಇದರ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ ಶೆಟ್ಟಿ ಅವರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ

ಮೂಡುಬಿದಿರೆ: ಶಾರದಾದಾಸ್ ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷ ಕೆ. ಸುಂದರ ಹೆಗ್ಡೆ ನಿಧನ

ಮೂಡುಬಿದಿರೆ:ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಶಾರದಾದಾಸ್ ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷ ಕಲ್ಲಬೆಟ್ಟು ಗ್ರಾಮದ ಸಾಗಿನಬೆಟ್ಟು ಕೆ. ಸುಂದರ ಹೆಗ್ಡೆ (87) ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕೃಷಿಕರಾಗಿದ್ದ ಅವರು ಹೌದಾಲಿನಲ್ಲಿ ಹಲವು ವರ್ಷ ದಿನಸಿ ವ್ಯಾಪಾರ ಮಾಡಿಕೊಂಡು ಬಂದಿದ್ದರು. ಐತಿಹಾಸಿಕ ಹಿನ್ನೆಲೆಯ ಕೊಣಾಜೆಕಲ್ಲು ಸಿದ್ಧಾಶ್ರಮದ ಸ್ಥಾಪಕ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ವರ್ಷ ದುಡಿದಿದ್ದರು. ನಡ್ಯೋಡಿ ಸರಕಾರಿ ಪ್ರಾಥಮಿಕ

ಬಿ.ಸಿ.ರೋಡು: ರೋಟರಿ ಇಂಟರ್ ಡಿಸ್ಟ್ರಿಕ್ಟ್ ಮೀಟ್- ಪತ್ರಕರ್ತ ಗೋಪಾಲ ಅಂಚನ್ ಅವರಿಗೆ ಸನ್ಮಾನ

ಬಿ.ಸಿ.ರೋಡು: ರೋಟರಿ ಇಂಟರ್ ಡಿಸ್ಟ್ರಿಕ್ಟ್ ಮೀಟ್- ಅಂತರ್ ಜಿಲ್ಲಾ ರೋಟರಿ ಕ್ಲಬ್ ಗಳಾದ ಕಾರ್ಕಳ ಮತ್ತು ಬಿ.ಸಿ.ರೋಡು‌ ಸಿಟಿ‌ ಕ್ಲಬ್ ಗಳ ಕುಟುಂಬ ಸ್ನೇಹ ಸಮ್ಮಿಲನ ಬಿ.ಸಿ.ರೋಡು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.ಪಿಡಿಜಿ ಪ್ರಕಾಶ್ ಕಾರಂತ್ ಮಾತನಾಡಿ ಗೋಪಾಲ ಅಂಚನ್ ಅವರು ಬಹುಮುಖಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರ ಸೇವೆ ಅಭಿನಂದನೀಯವಾಗಿದೆ ಎಂದರು.ಪಿಡಿಜಿ

ಬಂಟ್ವಾಳ: ನಾಯರ್ಕುಮೇರು ಪಿಲಿಚಾಂಡಿಗೋಳಿಯಲ್ಲಿ ದೊಂಪದಬಲಿ ನೇಮೋತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಿಲಿಚಾಂಡಿಗೋಳಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಗಡಿಪಾಡಿ ಸ್ಥಳದಲ್ಲಿ ದೊಂಪದ ಬಲಿ ನೇಮೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಪುಣ್ಯಾಹವಾಚನ, ಗಣಪತಿಹೋಮ, ಕಲಶಾರಾಧನೆ, ಪ್ರಧಾನ ಹೋಮ, ದೈವಗಳ ಪೀಠ ಸ್ಥಾಪನೆ, ಕಲಶಾಭಿಷೇಕ, ನಾಯರ್ಕುಮೇರು ಗುತ್ತಿನಿಂದ ಭಂಡಾರ ಬಂದು ಪಂಚ ಪರ್ವ, ಪ್ರಸಾದ ವಿತರಣೆ, ಲಘು ಉಪಾಹಾರ ನಡೆಯಿತು.ಸಂಜೆ ಪಿಲಿಚಾಮುಂಡಿ ನೇಮೋತ್ಸವ, ಮಾರಿಪೂಜೆ, ಗಂಧಪ್ರಸಾದ ವಿತರಣೆ, ಸಾರ್ವಜನಿಕ

ಮಂಗಳೂರು ಡೆಡ್ ಸಿಟಿಯಾಗಿದೆ-ಜಿಲ್ಲೆಯ ಅಭಿವೃದ್ಧಿಗೆ ಹೊಸ ಅಲೋಚನೆ ಇದೆ -ಡಿಸಿಎಂ ಡಿಕೆಶಿ

ಮಂಗಳೂರು ಸಂಜೆ ಏಳು ಗಂಟೆಯ ನಂತರ ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಇಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಅವರು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಮೈದಾನದ ಬಳಿ ಮಾತನಾಡಿದರು. ಇಲ್ಲಿನ

ಉಳ್ಳಾಲ: ಗಾಂಜಾ ಮತ್ತಿನಲ್ಲಿ ದಾಂಧಲೆ: ಸಾರ್ವಜನಿಕರಿಂದ ತರಾಟೆ, ಪೊಲೀಸರಿಂದ ಬಂಧನ

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದು ದಾಂಧಲೆ ನಡೆಸಿದ್ದು, ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದಿದ್ದಾನೆ. ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ ಮದ್ಯಾಹ್ನದ ವೇಳೆ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ